ಬೆಂಗಳೂರು: ಇದು ವಿದ್ಯುತ್ ಫ್ರೀ (Free Electricity) ಪಡೆಯುವ ರಾಜ್ಯದ ಜನರು ತಿಳಿದುಕೊಳ್ಳಲೇಬೇಕಾದ ಸುದ್ದಿ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ದುಡ್ಡು ಹೊಂದಾಣಿಕೆ ಮಾಡಲಾಗುತ್ತಿದೆ. ಈ ನಡುವೆ ಗೃಹ ಜ್ಯೋತಿ ಯೋಜನೆ (Gruha Jyoti Scheme) ಮೂಲಕ ಪ್ರತಿ ಮನೆ ಮನೆಗೆ 200 ಯೂನಿಟ್‌ವರೆಗೆ (ಸರಾಸರಿ ಬಳಕೆ ಆಧಾರದ ಮೇಲೆ) ಬಳಕೆಗೆ ಅವಕಾಶವನ್ನು ಕೊಡಲಾಗುತ್ತಿದೆ. ಆದರೆ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (Karnataka Power Corporation Limited) ಭಾರಿ ನಷ್ಟದಲ್ಲಿದೆ ಎಂಬ ಸಂಗತಿ ಈಗ ಹೊರಬಿದ್ದಿದೆ. ಅದಲ್ಲದೆ, ತನ್ನ ಯಂತ್ರೋಪಕರಣಗಳನ್ನೇ ಅಡವಿಟ್ಟು ಈವರೆಗೆ ಕೋಟಿ ಕೋಟಿ ಹಣವನ್ನು ಪಡೆಯಲಾಗಿದೆ. ಈ ವರ್ಷವೊಂದರಲ್ಲಿಯೇ ಬರೋಬ್ಬರಿ 33 ಸಾವಿರ ಕೋಟಿ ರೂಪಾಯಿ ಸಾಲವನ್ನು ಪಡೆಯಲಾಗಿದೆ.
ಬ್ಯಾಂಕ್‌ನಲ್ಲಿ ಯಂತ್ರೋಪಕರಣಗಳನ್ನು ಅಡಮಾನವಿಟ್ಟು ಸಾವಿರಾರು ಕೋಟಿ ಸಾಲ ಪಡೆದ ಸಂಗತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಸರ್ಕಾರದ ಫ್ರೀ ಯೋಜನೆಯ (Free Scheme) ವೆಚ್ಚವನ್ನು ಸರಿದೂಗಿಸಲು ಸಾಲ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಯೂ ಮೂಡಿದೆ. ಆದರೆ, 2018ರಿಂದಲೇ ಸಾಲವನ್ನು ಪಡೆಯುತ್ತಿರುವುದರಿಂದ ಕರ್ನಾಟಕ ವಿದ್ಯುತ್ ನಿಗಮವು ಭಾರಿ ನಷ್ಟದಲ್ಲಿದೆ ಎಂಬ ಸಂಗತಿ ಗೊತ್ತಾಗಿದೆ. ಆದರೆ, ಮೊದಲೇ ನಷ್ಟದಲ್ಲಿರುವ ವಿದ್ಯುತ್ ನಿಗಮವನ್ನು ಈಗ ಮತ್ತೆ ಸಾಲದ ಶೂಲಕ್ಕೆ ತಳ್ಳುವುದು ಸರಿಯೇ ಎಂಬ ಪ್ರಶ್ನೆ ಎದುರಾಗಿದೆ.
33,345 ಕೋಟಿ ರೂಪಾಯಿ ಸಾಲ
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಪಟ್ಟಂತೆ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಯಂತ್ರೋಪಕರಣಗಳನ್ನು ಅಡಮಾನವಿಡಲಾಗಿದೆ. ಈ ಸಂಬಂಧ 2023-24ರಲ್ಲಿ ಬರೋಬ್ಬರಿ 33,345 ಸಾವಿರ ಕೋಟಿ ರೂಪಾಯಿ ಸಾಲವನ್ನು ಪಡೆದುಕೊಳ್ಳಲಾಗಿದೆ.
ಕಾರ್ಯಾಚರಣೆ ವೆಚ್ಚಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ಸಾಲ ಪಡೆಯಲಾಗಿದೆ. ಹೀಗಾಗಿ 2023-24ನೇ ಸಾಲಿನಲ್ಲಿ 33,345 ಸಾವಿರ ಕೋಟಿ ರೂಪಾಯಿ ಸಾಲವನ್ನು ಪಡೆಯಲಾಗಿದೆ. ನಿಗಮದ ಬಂಡವಾಳ ವೆಚ್ಚಕ್ಕಾಗಿ ಈ ಸಾಲ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವರ್ಷದಿಂದ ವರ್ಷಕ್ಕೆ ಸಾಲದ ಮೊತ್ತ ಹೆಚ್ಚಳವಾಗುತ್ತಲೇ ಇರುವುದು ಆತಂಕವನ್ನು ಹೆಚ್ಚಿಸಿದೆ. ಪಿಎಸ್‌ಸಿ, ಆರ್‌ಎಫ್‌ಸಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಚುನಾವಣೆ ಘೋಷಣೆ ಬೆನ್ನಲ್ಲೇ ಕುರುಡು ಕಾಂಚಾಣದ ಕುಣಿತ; ಬೆಂಗಳೂರಲ್ಲಿ 13 ಲಕ್ಷ ರೂ. ಜಪ್ತಿ
ಯಾವ ವರ್ಷ ಎಷ್ಟು ಸಾಲ?
- 2018-19 ರಲ್ಲಿ 21,821 ಕೋಟಿ ರೂ.
- 2019-20 ರಲ್ಲಿ -26,461 ಕೋಟಿ ರೂ.
- 2020-21 ರಲ್ಲಿ 28,097 ಕೋಟಿ ರೂ.
- 2021-22 ರಲ್ಲಿ 29,433 ಕೋಟಿ ರೂ.
- 2022-23 ರಲ್ಲಿ 31,258 ಕೋಟಿ ರೂ.
- 2023-24 ರಲ್ಲಿ 33, 345 ಕೋಟಿ ರೂ.