Site icon Vistara News

HD Kumaraswamy : ಡಿಕೆಶಿಗೆ ಸವಾಲು ಹಾಕಿ ಪತ್ನಿ ಜತೆ ದುಬೈಗೆ ಹಾರಿದ ಎಚ್‌ಡಿ ಕುಮಾರಸ್ವಾಮಿ

HD Kumaraswamy to Dubai

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ರಾಮನಗರ ಜಿಲ್ಲೆ ವಿಭಜನೆ (Ramanagara District), ಮರು ನಾಮಕರಣದ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರಿಗೆ ಪ್ರಬಲ ಸವಾಲು ಹಾಕಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಶನಿವಾರ ಬೆಳಗ್ಗೆ ಪತ್ನಿ ಸಮೇತರಾಗಿ ದುಬೈಗೆ ಹಾರಿದ್ದಾರೆ. ಅವರು ಅಲ್ಲಿ ನಡೆಯುವ ಕೆಂಪೇಗೌಡ ಉತ್ಸವ (Kempegowda Utsava) ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ತೆರಳಿದಿದ್ದಾರೆ.

ಕನಕಪುರವನ್ನು (Kanakarapur row) ರಾಮ ನಗರದಿಂದ ಪ್ರತ್ಯೇಕಿಸಿ ಬೆಂಗಳೂರಿಗೆ ಸೇರ್ಪಡೆ ಮಾಡುವುದು ಮತ್ತು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌ ಮತ್ತು ಎಚ್‌.ಡಿ ಕುಮಾರಸ್ವಾಮಿ ನಡುವೆ ಬೆಂಕಿ ಹತ್ತಿಕೊಂಡಿದೆ. ಡಿ.ಕೆ. ಶಿವಕುಮಾರ್‌ ಅವರು ಈ ಜನ್ಮದಲ್ಲಿ ಮಾತ್ರವಲ್ಲ, ಏಳೇಳು ಜನ್ಮ ಎತ್ತಿಬಂದರೂ ರಾಮನಗರ ಜಿಲ್ಲೆಯನ್ನು ವಿಭಜಿಸುವುದು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದರು. ಅದರ ಜತೆಗೆ ಮಾಧ್ಯಮವೊಂದರಲ್ಲಿ ಕುಳಿತು ರಾಮನಗರ ವಿಭಜನೆ ಬಗ್ಗೆ ಚರ್ಚೆ ನಡೆಸುವ ಸವಾಲನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಆದರೆ, ನಂತರ ಅದಕ್ಕೆ ಮುನ್ನಡೆ ಸಿಗಲಿಲ್ಲ.

ಇದೀಗ ಕುಮಾರಸ್ವಾಮಿ ಅವರು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಜತೆಗೆ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೂಡಾ ಹೋಗಿದ್ದಾರೆ. ಯುಎಇ ಒಕ್ಕಲಿಗರ ಸಂಘ ಅ.29ರಂದು ದುಬೈನಲ್ಲಿ ಆಯೋಜಿಸಿರುವ ಕೆಂಪೇಗೌಡ ಉತ್ಸವದಲ್ಲಿ ಭಾಗಿಯಾಗುವುದಕ್ಕಾಗಿ ಅವರು ತೆರಳಿದ್ದಾರೆ.

ದುಬೈನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಕೆ. ವೆಂಕಟೇಶ್‌, ಒಕ್ಕಲಿಗರ ಸಂಘದ ಅಧ್ಯಕ್ಷರಾಗಿರುಗ ಸಿ.ಎನ್‌ ಬಾಲಕೃಷ್ಣ, ಶಾಸಕರಾದ ಶರತ್‌ ಬಚ್ಚೇಗೌಡ, ಸಮೃದ್ಧಿ ಮಂಜುನಾಥ್‌, ಎಚ್.ಟಿ. ಮಂಜುನಾಥ್‌, ಕೆ. ಮಂಜು, ಸ್ವರೂಪ್‌ ಪ್ರಕಾಶ್‌, ಸಿ.ಪಿ. ಯೋಗೇಶ್ವರ್‌, ಉಮಾಪತಿ ಶ್ರೀನಿವಾಸ ಗೌಡ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಬೆಳಗ್ಗೆ 10.45ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ EK656 ವಿಮಾನದಲ್ಲಿ ಪ್ರಯಾಣ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಯಲ್ಲಿ ಕುಮಾರಸ್ವಾಮಿ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: Karnataka Politics: ಎಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕೀಯದ ವಿಲನ್‌ ಎಂದ ಸಿದ್ದರಾಮಯ್ಯ

ಅಲ್ಲಿಂದಲೇ ಇಲ್ಲಿನ ರಾಜಕೀಯದ ಮೇಲೆ ಕಣ್ಣು

ಎಚ್.ಡಿ ಕುಮಾರಸ್ವಾಮಿ ಅವರು ದುಬೈಗೆ ಹೋದರೂ, ಎಲ್ಲೇ ಹೋದರೂ ರಾಜ್ಯ ರಾಜಕಾರಣದ ಮೇಲೆ ಒಂದು ಕಣ್ಣು ಇಟ್ಟೇ ಇರುತ್ತಾರೆ. ಇಲ್ಲಿನ ಪ್ರತಿ ಬೆಳವಣಿಗೆಯನ್ನು ಗಮನಿಸಿಕೊಂಡು ಅಲ್ಲಿಂದ ಮರಳುವ ವೇಳೆ ವಿಮಾನ ನಿಲ್ದಾಣದಲ್ಲೇ ಎಲ್ಲ ವಿಷಯಗಳಿಗೆ ಮಾತನಾಡಿ ಬೆಂಕಿ ಹಚ್ಚಿ ಹೋಗುವುದು ಅವರ ರೂಢಿ! ಅವರು ಮಾತನಾಡಿದ ಪ್ರತಿ ವಿಚಾರವೂ ಚರ್ಚೆಗೆ ಒಳಪಟ್ಟು ಅದು ವಿಸ್ತಾರವಾಗಿ ಬೆಳೆಯುತ್ತದೆ. ಆ ಮಟ್ಟಿಗೆ ಅಧ್ಯಯನಾತ್ಮಕವಾಗಿ ಅವರು ಪ್ರತಿಕ್ರಿಯೆ ನೀಡುತ್ತಾರೆ. ಅದರ ನಡುವೆ ಟ್ವೀಟ್‌ಗಳು ಕೂಡಾ ಹರಿದಾಡಲಿವೆ.

Exit mobile version