Site icon Vistara News

Janardhan Reddy: ಮಡದಿಗಾಗಿ ಮರವೇರಿ ಮಾವು ಕಿತ್ತುಕೊಟ್ಟ ರೆಡ್ಡಿ: ವಿಡಿಯೊ ವೈರಲ್

Janardhan Reddy

ಗಂಗಾವತಿ: ಮಾವು ಎಂದರೆ ಯಾರಿಗೆ ತಾನೆ ಇಷ್ಟವಿರದು ಹೇಳಿ?… ಮಾವಿನ ತೋಟದಲ್ಲಿ ಸಂಚರಿಸುವಾಗ ಹೇಳಿ-ಕೇಳಿ ಮುದ್ದಿನ ಮಡದಿ ಮಾವು ಬೇಕೆಂದು ಪಟ್ಟು ಹಿಡಿದಾಗ ಆಕೆಯ ಆಸೆ ಪೂರೈಸಲು ಎಂಥವರಾದರೂ ಹರಸಾಹಸ ಮಾಡಲೇಬೇಕು. ಇದಕ್ಕೆ ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ (Janardhan Reddy) ಹೊರತಾಗಿಲ್ಲ. ಮಡದಿಯ ಮಾವಿನ ಕಾಯಿ (Mango) ತಿನ್ನಬೇಕೆಂಬ ಮನದಾಸೆಯನ್ನು ತೀರಿಸಲು ಶಾಸಕ ರೆಡ್ಡಿ, ಹರಸಾಹಸಪಟ್ಟು ಮಾವಿನ ಮರವೇರಿ ಕಾಯಿಯನ್ನು ಕಿತ್ತು ಕೊಡುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದೆ.

ಶಾಸಕ ಜಿ. ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಅವರು, ತಮ್ಮ ಮಾವಿನ ತೋಟದಲ್ಲಿ ವಿಹರಿಸುತ್ತಿರುವಾಗ ರೆಡ್ಡಿ, ಮಾವಿನ ಮರವನ್ನು ಪ್ರಯಾಸಪಟ್ಟು ಏರಿ ಕಾಯಿಯೊಂದನ್ನು ಕಿತ್ತು ಪತ್ನಿಯ ಕೈಗಿಡುತ್ತಾರೆ.
ಮರದ ಟೊಂಗೆಗಳ ಮೇಲೆ ಶಾಸಕ ರೆಡ್ಡಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಾ, ಬ್ಯಾಲೆನ್ಸ್ ಮಾಡಿ ಕಾಯಿ ಕಿತ್ತು, ಮರಳಿ ಮರ ಇಳಿಯುವಾಗ ತಮ್ಮ ಬಾಲ್ಯವನ್ನು ನೆನೆಸಿಕೊಂಡು ಇಳಿಯಲು ಪ್ರಯಾಸ ಪಡುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Nutrition Alert: ಎಳನೀರು ಕುಡಿಯುವುದರಿಂದಲೂ ನಮ್ಮ ದೇಹಕ್ಕೆ ಸೈಡ್‌ ಎಫೆಕ್ಟ್‌ ಇದೆಯೆ?

ಸದ್ಯ ಮಾವಿನ ಹಣ್ಣಿನ ಸೀಸನ್‌ ಆಗಿರುವುದರಿಂದ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಡುವೆ ಜನಾರ್ದನ ರೆಡ್ಡಿ ಅವರು ಮಡದಿಗಾಗಿ ಮಾವಿನ ಕಾಯಿ ಕಿತ್ತುಕೊಟ್ಟಿರುವ ಹಳೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದು 2019ರಲ್ಲಿ ರೆಡ್ಡಿ ಅವರ ಮಾವಿನ ತೋಟದಲ್ಲಿ ತೆಗೆದಿರುವ ವಿಡಿಯೊ ಎನ್ನಲಾಗಿದೆ.

Exit mobile version