ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ (Anti party activities) ಹಿನ್ನೆಲೆಯಲ್ಲಿ ಈಗಾಗಲೇ ಅಮಾನತು ಶಿಕ್ಷೆಗೆ ಒಳಗಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನಾನು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ (Former Prime Minister HD Deve Gowda) ತಿಳಿಸಿದರು. ರಾಜ್ಯ ಜೆಡಿಎಸ್ (JDS Karnataka) ಕಚೇರಿಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ದೇವೇಗೌಡ, ಇಬ್ಬರು ನಾಯಕರ ಉಚ್ಚಾಟನೆ ನಿರ್ಧಾರವನ್ನು ಪ್ರಕಟಿಸಿದರು.
ಇದನ್ನೂ ಓದಿ: Manikanth Rathod: ಪ್ರಿಯಾಂಕ್ ಖರ್ಗೆಯಿಂದ ನನ್ನ ಖರೀದಿಗೆ ಡೀಲ್; ಆಡಿಯೊ ಹರಿಬಿಟ್ಟ ಮಣಿಕಾಂತ್ ರಾಠೋಡ್
ಪಕ್ಷದ ಹಿತಕ್ಕಾಗಿ ಅವರ ಸಮ್ಮುಖದಲ್ಲಿಯೇ ಕೈಗೊಂಡ ನಿರ್ಧಾರವನ್ನು ಅವರು ವಿರೋಧಿಸಿ, ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಅಪಪ್ರಚಾರ ನಡೆಸಿದರು. ಇದರಿಂದ ಪಕ್ಷದ ವರ್ಚಸ್ಸು, ಹಿತಕ್ಕೆ ಧಕ್ಕೆ ಆಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದು ಉಚ್ಚಾಟನೆಯ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಮಂಡ್ಯ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಅವರು, ಇಬ್ರಾಹಿಂ ಅವರನ್ನು ಹಾಗೂ ಪಶ್ಚಿಮ ಬಂಗಾಳ ಜೆಡಿಎಸ್ ಘಟಕದ ಅಧ್ಯಕ್ಷ ಪುನೀತ್ ಕುಮಾರ ಸಿಂಗ್ ಅವರು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕೇರಳದ ಸಿ.ಕೆ. ನಾನು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಣಯವನ್ನು ಕಾರ್ಯಕಾರಿಣಿ ಸಭೆಯಲ್ಲಿ ಮಂಡನೆ ಮಾಡಿದ್ದರು.
ಈ ಇಬ್ಬರು ಮಂಡಿಸಿದ ನಿರ್ಣಯಗಳನ್ನು ಕಾರ್ಯಕಾರಿಣಿಯೂ ಸರ್ವಾನುಮತದಿಂದ ಅಂಗೀಕಾರ ಮಾಡಿತು. ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರ ಹಾಜರಿಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ ಎಲ್ಲ ರಾಜ್ಯಗಳ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಿದ್ದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಶಿವಕುಮಾರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್, ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ ಪುನೀತ್ ಕುಮಾರ ಸಿಂಗ್, ಹರಿಯಾಣ ರಾಜ್ಯಾಧ್ಯಕ್ಷ ಜೋರಾ ಸಿಂಗ್, ಪಂಜಾಬ್ ರಾಜ್ಯಾಧ್ಯಕ್ಷ ಅವತಾರ್ ಸಿಂಗ್,, ಜಮ್ಮು ಮತ್ತು ಕಾಶ್ಮೀರದ ರಾಜ್ಯಾಧ್ಯಕ್ಷ ರಾಮ್ ರತನ್ ಶರ್ಮ, ಉತ್ತರಾಖಂಡ್ ರಾಜ್ಯಾಧ್ಯಕ್ಷ ಹರ್ ಜಿತ್ ಸಿಂಗ್, ಸುರೇಶ್ ದಾಸ್, ಮಹಾರಾಷ್ಟ್ರ ರಾಜ್ಯಾಧ್ಯಕ್ಷ ನರೇಂದ್ರ ಸಿಂಗ್ ಹರಿದಾಸ್ ಕಂತಾರಿಯಾ, ಗುಜರಾತ್ ರಾಜ್ಯಾಧ್ಯಕ್ಷ ಶಾ ಗಣಪತಿ ಭಾಯ್, ಬಿಹಾರ ರಾಜ್ಯಾಧ್ಯಕ್ಷ ಹಲ್ದಾರ್ ಕಾಂತ್ ಮಿಶ್ರಾ, ಬಿಹಾರದ ಕಾರ್ಯಾಧ್ಯಕ್ಷ ಸುನೀಲ್ ಕುಮಾರ್ ಪಾಟೀಲ್, ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಎಂ. ಪೊನ್ನುಸ್ವಾಮಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಉತ್ತರಾಖಂಡದ ಸುರೇಶ್ ದಾಸ್, ಮಹಾರಾಷ್ಟ್ರದ ಮೋಹದ್ ಅಜ್ಮಲ್ ಖಾನ್ ಮತ್ತು ನರೇಂದ್ರ ಸಿಂಗ್ ಹರಿದಾಸ್, ಗುಜರಾತಿನ ದೋಹಲಿಯಾ ಭರತ್ ಭಯ್, ಉತ್ತರ ಪ್ರದೇಶದ ಓಂಕಾರ್ ಸಿಂಗ್ ಮತ್ತು ಎಸ್. ಎಂ. ತಾಜ್ ಆಲಂ, ತಮಿಳುನಾಡಿನ ಸಿ.ಬಲರಾಮ್, ದೆಹಲಿಯ ಕುಲದೀಪ ರಾನ (ರಮೇಶ್), ತಮಿಳುನಾಡಿನ ಎನ್. ಎಸ್. ಎಂ. ಗೌಡ, ತೆಲಂಗಾಣದ ಬಾಲಕೃಷ್ಣ ರಾವ್, ಆಂಧ್ರಪ್ರದೇಶದ ಸಿ.ಎಚ್. ಬಾಲಕಿಶನ್ ರಾವ್ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Modi in Karnataka: ನಾಳೆ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ; ಪ್ರತಿ 5 ಮೀಟರ್‌ಗೆ ಒಬ್ಬ ಪೊಲೀಸ್ ಕಣ್ಗಾವಲು
ಕರ್ನಾಟಕದಿಂದ ಎಚ್.ಡಿ.ಕುಮಾರಸ್ವಾಮಿ ಅವರ ಜತೆಗೆ ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ಮಾಜಿ ಸಚಿವ – ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಜಿಟಿ ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕರಾದ ಎಂ.ಎಸ್.ನಾರಾಯಣ ರಾವ್, ದೇವಾನಂದ್ ಚೌಹಾಣ್, ರಾಜಾ ವೆಂಕಟಪ್ಪ ನಾಯಕ, ಎ.ಎಸ್.ರವೀಂದ್ರ, ಕೆ.ಎಸ್. ಲಿಂಗೇಶ್ ಹಾಗೂ ಮಹಾಂತೇಶ್ ಪಾಟೀಲ್, ತಿಮ್ಮಾ ರೆಡ್ಡಿ, ಶೀಲಾ ನಾಯಕ್, ವಿ.ನಾರಾಯಣಸ್ವಾಮಿ, ರುತ್ ಮನೋರಮಾ, ಬಿ.ಕಾಂತರಾಜು, ವಿ.ಎನ್. ಮಂಜುನಾಥ್, ಎ.ಪಿ.ರಂಗನಾಥ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದರು.