Site icon Vistara News

Kangana Ranaut: ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾನೆ ಎಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್! ವಿಡಿಯೊ ನೋಡಿ

Kangana Ranaut

ಹಿಮಾಚಲ ಪ್ರದೇಶ: ಲೋಕಸಭೆ ಚುನಾವಣೆ(Kangana Ranaut) ದೇಶದಲ್ಲಿ ದಿನೇ ದಿನೇ ರಂಗೇರಿದೆ. ಅಬ್ಬರದ ಪ್ರಚಾರ, ಪರ ವಿರೋಧ ವಾಗ್ದಾಳಿ ನಡೆಸಿದ್ದಾರೆ. ಎದುರಾಳಿ ನಾಯಕರನ್ನು ಟೀಕಿಸುವ ಭರದಲ್ಲಿ ಕೆಲವೊಮ್ಮೆ ತಮ್ಮದೇ ಪಕ್ಷಕ್ಕೆ ಮುಜುಗರ ತಂದಿರುವ ಘಟನೆಗಳೂ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಹೇಳಿಕೆ ಮೂಲಕ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಅಭ್ಯರ್ಥಿ ಕಂಗನಾ ರಾಣಾವತ್‌ ಆಭಾಸಕ್ಕೀಡಾಗಿದ್ದಾರೆ. ಪ್ರಚಾರ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌(Tejaswi Yadav) ಅವರನ್ನು ಟೀಕಿಸುವ ಭರದಲ್ಲಿ ತಮ್ಮದೇ ಪಕ್ಷ ಬಿಜೆಪಿ ಮುಖಂಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿತೇಜಸ್ವಿ ಸೂರ್ಯ(Tejaswi Surya) ಹೆಸರು ಪ್ರಸ್ತಾಪಿಸಿ ಮುಜುಗರಕ್ಕೀಡಾಗಿದ್ದಾರೆ. ಇದೀಗ ಈ ವಿಡಿಯೋ ವೈರಲ್‌(Viral Video) ಆಗಿದ್ದು, ಖುದ್ದು, ತೇಜಸ್ವಿ ಯಾದವ್‌ ಅವರೇ ಈ ವಿಡಿಯೋಗೆ ರಿಯಾಕ್ಟ್‌ ಮಾಡಿದ್ದಾರೆ.

ಕಂಗನಾ ಹೇಳಿದ್ದೇನು?

ಮಂಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ ಕಂಗನಾ ರಾಣಾವತ್‌, ತೇಜಸ್ವಿ ಯಾದವ್‌ ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಲು ಹೊರಟಿದ್ದರು. ತೇಜಸ್ವಿ ಯದವ್‌ ಬದಲು ತೇಜಸ್ವಿ ಸೂರ್ಯ ಎಂದು ಹೇಳಿದ ಕಂಗನಾ, ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಏ.9ರಂದು ನವರಾತ್ರಿಯ ದಿನ ತೇಜಸ್ವಿ ಯಾದವ್‌ ಮೀನು ತಿನ್ನುವ ಫೋಟೋವನ್ನು ಶೇರ್‌ ಮಾಡಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದರು. ಇದೇ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಕಂಗನಾ, ರಾಹುಲ್‌, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸಂಪೂರ್ಣವಾಗಿ ಹಾಳಾದ ರಾಜಕುಮಾರರನ್ನು ಹೊಂದಿರುವ ಪಕ್ಷಗಳಿವೆ. ಅಲ್ಲಿ ಚಂದ್ರನ ಮೇಲೆ ಆಲೂಗೆಡ್ಡೆ ಬೆಳೆಯುವ ರಾಹುಲ್‌ ಗಾಂಧಿ, ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಮತ್ತು ಅಸಂಬದ್ದ ಹೇಳಿಕೆ ನೀಡುವ ಅಖಿಲೇಶ್‌ ಯಾದವ್‌ ಇದ್ದಾರೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳದಿರುವ ಇಂತಹ ನಾಯಕರು ಹೇಗೆ ತಾನೇ ದೇಶವನ್ನು ನಡೆಸಬಲ್ಲರು ಎಂದು ಅವರು ವ್ಯಂಗ್ಯವಾಡಿರುವ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ:Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

ಟಾಂಗ್‌ ಕೊಟ್ಟ ತೇಜಸ್ವಿ ಯಾದವ್‌

ಕಂಗನಾ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಪ್ರತಿಕ್ರಿಯಿಸಿದ್ದು, ರಾರು ಈ ಮಹಿಳೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಅವರು ಈ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿ ಯಾರು ಈ ಮಹಿಳೆ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಜೂ.1ರಂದು ಹಿಮಾಚಲಪ್ರದೇಶದಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಕಂಗನಾ ವಿರುದ್ಧ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಪುತ್ರ ವಿಕ್ರಮಾದಿತ್ಯ ಸಿಂಗ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಾರೆ.

Exit mobile version