Site icon Vistara News

Karnataka Drought : ಬಿಜೆಪಿಯದ್ದು ರಾಜಕಾರಣದ ಬರ ಅಧ್ಯಯನ; ಕೇಂದ್ರದಿಂದ ಅನುದಾನ ಕೊಡಿಸಲಿ: ಸಿದ್ದರಾಮಯ್ಯ

CM Siddaramaiah and BS Yediyurappa

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಬರ ಅಧ್ಯಯನಕ್ಕೆ (BJP Drought Study) ನಮ್ಮ ತಕರಾರಿಲ್ಲ. ಆದರೆ, ಈಗಾಗಲೇ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಕರ್ನಾಟಕದ ಬರ (Karnataka Drought) ಅಧ್ಯಯನವನ್ನು ನಡೆಸಿ ಹೋಗಿದ್ದಾರೆ. ಕೇಂದ್ರ ಸರ್ಕಾರಕ್ಕೆ (Central Government) ಅವರಿನ್ನೂ ವರದಿ ನೀಡಿಲ್ಲ. ಬಿಜೆಪಿಯವರು ರಾಜಕಾರಣ ಮಾಡಲು ಅಧ್ಯಯನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಕೇಳಿ ನಮಗೆ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಅಧ್ಯಯನ ಮಾಡುತ್ತೇವೆ ಎನ್ನುತ್ತಾರೆ. ಮಾಡಲಿ, ನಮ್ಮ ತಕರಾರು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ

ಅವರು ಮಂಗಳವಾರ (ನ. 7) ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯರಿಗೆ ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರಕ್ಕೆ 17,900 ಕೋಟಿ ರೂ.ಗಳ ಪರಿಹಾರ ಕೋರಲಾಗಿದೆ. ರಾಜ್ಯದಲ್ಲಿ ಸುಮಾರು 33, 700 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವರು ಪರಿಹಾರವನ್ನು ಕೊಡಿಸಬೇಕು. 25 ಬಿಜೆಪಿ ಸಂಸದರು ಪರಿಹಾರ ಕೊಡಿಸುವುದನ್ನು ಮೊದಲು ಮಾಡಲಿ. ನಮ್ಮ ಮಂತ್ರಿಗಳಿಗೆ ಸಂಬಂಧ ಪಟ್ಟ ಕೇಂದ್ರ ಸಚಿವರು ಬಿಜೆಪಿಗೆ ಸಮಯವನ್ನೇ ನೀಡಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದು ಪ್ರಶ್ನೆ ಮಾಡಿದರು.

ಬರ ಕುರಿತು ಅವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಸಮೀಕ್ಷೆ ಮಾಡಿದವರು ಕೇಂದ್ರ ಸರ್ಕಾರದ ತಂಡ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆಯಬೇಕು ಎಂದು ಸಲಹೆ ನೀಡಿದರು.

ಬರ್ಬರ ಕ್ಷಾಮಕ್ಕೆ ತುತ್ತಾಯ್ತು 223 ತಾಲೂಕು!

ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ (Drought in Karnataka) ತುತ್ತಾಗಿದೆ. ಮಳೆ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗ ಮತ್ತೂ 7 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ (Karnataka Government) ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಬರಕ್ಕೆ ತುತ್ತಾದ ತಾಲೂಕುಗಳ ಸಂಖ್ಯೆ ಬರೋಬ್ಬರಿ 223!

ರಾಜ್ಯದಲ್ಲಿ ಒಟ್ಟು 236 ತಾಲೂಕುಗಳು ಇದ್ದು, ಇವುಗಳಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದರಿಂದ ಇನ್ನು ಬಾಕಿ ಉಳಿದಿರುವುದು ಕೇವಲ 13 ತಾಲೂಕುಗಳು ಮಾತ್ರ! ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ತಾಲೂಕುಗಳೂ ಬರಕ್ಕೆ ತುತ್ತಾಗಿ ಶ್ರೀಗಂಧದ ಬೀಡು ಕರ್ನಾಟಕ “ಬರದ ನಾಡು” ಎಂಬ ಹಣೆಪಟ್ಟಿಯನ್ನು ಹೊತ್ತುಕೊಳ್ಳಲಿದೆ.

ಇದನ್ನೂ ಓದಿ: Karnataka Politics : ಡಿ.ಕೆ. ಶಿವಕುಮಾರ್ – ಸತೀಶ್‌ ಜಾರಕಿಹೊಳಿ ಭೇಟಿ; ಮಹತ್ವದ ಚರ್ಚೆ!

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮತ್ತೆ 7 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅದರಂತೆ ಔರಾದ್, ಬೀದರ್, ಚಿಟಗುಪ್ಪ, ಹುಮುನಾಬಾದ್, ಕಮಲನಗರ, ಸಿಂಧನೂರು ಮತ್ತು ತಿಕೋಟಾ ತಾಲೂಕುಗಳನ್ನು ಬರಪೀಡಿತ ಎಂದು ಉಲ್ಲೇಖಿಸಿ ಆದೇಶಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು ರಾಜ್ಯಲ್ಲಿ 223 ಬರ ಪೀಡಿತ ತಾಲೂಕುಗಳು ಆದಂತಾಗಿವೆ.

Exit mobile version