Site icon Vistara News

Karnataka Drought : ಬರ ಸಂತ್ರಸ್ತ ರೈತರಿಗೆ ಗುಡ್‌ ನ್ಯೂಸ್‌; ಮೊದಲ ಕಂತಲ್ಲಿ 2 ಸಾವಿರ ರೂ.ವರೆಗೆ ಪರಿಹಾರ!

CM Siddaramaiah

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಎಂದೂ ಕೇಳರಿಯದ ಭೀಕರ ಬರಗಾಲ (Karnataka Drought) ಬಂದಿದೆ. ರಾಜ್ಯದಲ್ಲಿನ 236 ತಾಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತವಾಗಿವೆ. ಘೋಷಣೆಯಾಗಿ ತಿಂಗಳು ಕಳೆದರೂ ಇದುವರೆಗೆ ಪರಿಹಾರದ ಬಗ್ಗೆ ಮಾತುಗಳೇ ಕೇಳಿಬರುತ್ತಿರಲಿಲ್ಲ. ಆದರೆ, ಈಗ ರಾಜ್ಯ ಸರ್ಕಾರ (Karnataka Government) ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಮೊದಲನೇ ಕಂತಿನಲ್ಲಿ 2 ಸಾವಿರ ರೂ. ವರೆಗೆ ಬೆಳೆ ಪರಿಹಾರ ಬಿಡುಗಡೆಗೆ ಮುಂದಾಗಿದೆ.

ಕೇಂದ್ರ ಸರ್ಕಾರ (Central Government) ರಾಜ್ಯದ ರೈತರಿಗೆ ಪರಿಹಾರ (Relief fund to farmers) ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನು ನಡೆಸಿಲ್ಲ. ಇನ್ನು ಕೇಂದ್ರದಲ್ಲಿ ಸಭೆ ನಡೆಸಿ ಅಲ್ಲಿಂದ ಅನುದಾನ ಬರುವ ಹೊತ್ತಿಗೆ ಸಾಕಷ್ಟು ವಿಳಂಬವಾಗುತ್ತದೆ ಎಂಬ ಕಾರಣದಿಂದ ರಾಜ್ಯದಿಂದ ತುರ್ತು ಕ್ರಮವನ್ನು ಕೈಗೊಳ್ಳಲು ಮುಂದಾಗಲಾಗಿದೆ.

ಇದನ್ನೂ ಓದಿ: Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

ಕೇಂದ್ರಕ್ಕೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ಇಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಕೇಂದ್ರದಿಂದ ಸಿಕ್ಕಿಲ್ಲ ಎಂಬುದು ಕಾಂಗ್ರೆಸ್‌ ಆರೋಪವಾಗಿತ್ತು. ಈಗ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಪತ್ರಿಕಾಗೋಷ್ಠಿ ಕರೆದು ಘೋಷಣೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಇದನ್ನೂ ಓದಿ: Assembly Session : ಅಧಿವೇಶನದಲ್ಲಿ ನನಗೆ ಮೊದಲ ಸಾಲೇ ಬೇಕು; ಪಟ್ಟು ಹಿಡಿದಿರುವ ಎಚ್.ಡಿ. ರೇವಣ್ಣ!

ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ಮೊದಲ ಕಂತು ಬಿಡುಗಡೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Exit mobile version