Site icon Vistara News

Karnataka Election 2023 : ಕಾಂಗ್ರೆಸ್‌ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ; ಸಿಎಂ ಬೊಮ್ಮಾಯಿ ವಿರುದ್ಧ ಮಹ್ಮದ್ ಯೂಸುಫ್ ಕಣಕ್ಕೆ

Congress releases fourth list of 10 candidates for Karnataka Assembly polls

#image_title

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election 2023) ಕಾಂಗ್ರೆಸ್‌ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಬಾಕಿ ಇರುವ 15 ಕ್ಷೇತ್ರಗಳ ಪೈಕಿ ‌7 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿ ಕ್ಷೇತ್ರದಲ್ಲಿ ಅಚ್ಚರಿ ಎಂಬಂತೆ ಮಹ್ಮದ್ ಯೂಸುಫ್ ಸವಣೂರು ಅವರನ್ನು ಕಣಕ್ಕಿಳಿಸಲಾಗಿದೆ. ಇವರು ಹುಬ್ಬಳ್ಳಿ ಅಂಜುಮನ್ ದರ್ಗಾದ ಅಧ್ಯಕ್ಷರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿತ್ತು. ಸತತವಾಗಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್‌ ನಾಯಕ ಅಜಂಪೀರ್ ಖಾದ್ರಿ ಈ ಬಾರಿ ಕೂಡ ಮೊದಲಿಗೆ ಸ್ಪರ್ಧಿಸಲು ಉತ್ಸುಕತೆ ತೋರಿದ್ದರು. ಇವರಲ್ಲದೆ, ವಿನಯ್‌ ಕುಲಕರ್ಣಿ. ಸೋಮಣ್ಣ ಬೇವಿನಮರದ್, ಷಣ್ಮುಖ ಶಿವಳ್ಳಿ ಅವರುಗಳ ಹೆಸರು ಕೂಡ ಕೇಳಿ ಬಂದಿತ್ತು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಎಚ್‌ ಡಿ ತಮ್ಮಯ್ಯರನ್ನು ಕಣಕ್ಕಿಳಿಸಲಾಗಿದೆ. ಅವರು ಬಿಜೆಪಿ ಅಭ್ಯರ್ಥಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರನ್ನು ಎದುರಿಸಲಿದ್ದಾರೆ. ಈ ಕ್ಷೇತ್ರದಿಂದ ಕಣಕ್ಕಿಳಿಯಲು ತೀವ್ರ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಆಯ್ಕೆಯು ತಡವಾಗಿದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ದೀಪಕ್‌ ಚಿಂಚೋರೆ, ಹರಿಹರದಿಂದ ನಂದಗಾವಿ ಶ್ರೀನಿವಾಸ್‌, ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಿಂದ ಜಗದೀಶ್‌ ಶೆಟ್ಟರ್‌, ಲಿಂಗಸೂರು ಎಸ್‌ಸಿ ಕ್ಷೇತ್ರದಿಂದ ದುರ್ಗಪ್ಪ ಎಸ್‌ ಹೂಲಗೆರಿ ಮತ್ತು ಶ್ರವಣಬೆಳಗೊಳದಿಂದ ಎಂ.ಎ. ಗೋಪಾಲಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿದೆ. ಹರಿಹರದ ಹಾಲಿ ಶಾಸಕ ಹರಿಹರ ರಾಮಪ್ಪಗೆ ಟಿಕೆಟ್‌ ತಪ್ಪಿದೆ.

ಟಿಕೆಟ್‌ ಪಡೆದವರ ಜಾತಿ ಲೆಕ್ಕಾಚಾರ ಹೀಗಿದೆ: ಲಿಂಗಸುಗೂರು – ಡಿ ಎಸ್ ಹೂಲಗೇರಿ – ಭೋವಿ, ಹುಬ್ಬಳ್ಳಿ ಧಾರವಾಡ‌ಕೇಂದ್ರ – ಜಗದೀಶ್ ಶೆಟ್ಟರ್ – ಲಿಂಗಾಯತ, ಶಿಗ್ಗಾಂವ – ಮಹ್ಮದ್ ಯೂಸುಫ್ ಸವಣೂರು -ಮುಸ್ಲಿಂ, ಹರಿಹರ – ನಂದಗವಿ ಶ್ರೀನಿವಾಸ್ – ಕುರುಬ, ಚಿಕ್ಕಮಗಳೂರು – ಎಚ್.ಡಿ ತಮ್ಮಯ್ಯ – ಲಿಂಗಾಯತ, ಶ್ರವಣಬೆಳಗೊಳ – ಎಂ.ಎ ಗೋಪಾಲಸ್ವಾಮಿ – ಒಕ್ಕಲಿಗ.

ಕಾಂಗ್ರೆಸ್‌ ಇನ್ನೂ ಬಾಕಿ ಇರಿಸಿಕೊಂಡಿರುವ ಕ್ಷೇತ್ರಗಳೆಂದರೆ; ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ಸಿಟಿ, ಶ್ರವಣಬೆಳಗೊಳ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ, ಕೆ ಆರ್ ಪುರಂ.

ಇದನ್ನೂ ಓದಿ: Karnataka Election 2023: ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ್‌ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್‌ ನಾಮಪತ್ರ ಸಲ್ಲಿಕೆ

Exit mobile version