ಗಂಗಾವತಿ, ಕರ್ನಾಟಕ: ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕಾಗಿ ತಮ್ಮ ನಾಯಕರನ್ನು ಮೆಚ್ಚಿಸುವ ಉದ್ದೇಶಕ್ಕೆ ಏನೆಲ್ಲಾ ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ ನೋಡಿ. ಪ್ರಿಯಾಂಕ ವಾದ್ರಾ, ಪ್ರಿಯಾಂಕ ಖರ್ಗೆ ಇದರಲ್ಲಿ ಸ್ತ್ರೀಲಿಂಗ ಯಾವುದು, ಪುಲ್ಲಿಂಗ ಯಾವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basangouda patil yatnal) ವ್ಯಂಗ್ಯವಾಗಿ ಕೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನ ಹೆಸರು ಪ್ರಿಯಾಂಕ್. ಖರ್ಗೆ ಅವರು ತಮ್ಮ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಇಂಥ ಹೆಸರಿಟ್ಟಿದ್ದಾರೆಂದು ಹೇಳುವುದಕ್ಕಾಗಿ, ಯತ್ನಾಳ್ ಅವರು ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎಂದು ವ್ಯಂಗ್ಯ ಮಾಡಿದ್ದಾರೆ(Karnataka Election 2023).
ಗಂಗಾವತಿ ನಗರದಲ್ಲಿ ಬಿಜೆಪಿಯ ಚುನಾವಣಾ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲಿಯೂ ಹೆಸರು ಇವೆ. ಬಸಪ್ಪ ಎಂದರೆ ಪುರುಷ, ಬಸವ್ವ ಎಂದರೆ ಮಹಿಳೆ. ಆದರೆ ಇಲ್ಲಿ ಪ್ರಿಯಾಂಕ ಎಂದರೆ ಯಾವ ಲಿಂಗ ಎಂದು ಪ್ರಶ್ನಿಸಿದರು. ಮೋದಿಯನ್ನು ಮನೆಗೆ ಕಳುಹಿಸಿದ್ದರೆ ದೇಶ ವಿಭಜನೆಯಾಗುತ್ತದೆ ಎಂದು ಬೊಬ್ಬಿಡುವ ಕಾಂಗ್ರೆಸ್‌ನವರು, ಭಾರತ್ ಜೋಡೋ ಮಾಡುತ್ತಾರೆ. ವಾಸ್ತವದಲ್ಲಿ ಪಾಕಿಸ್ತಾನ, ಬಾಂಗ್ಲಾ ವಿಭಜಿಸಿದ್ದು, ಜಮ್ಮು ಕಾಶ್ಮೀರ ನಾಶ ಮಾಡಿದ್ದು ನೀವು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.
ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಒಂದೇ ಒಂದು ಇಂಚು ಜಾಗವನ್ನು ನಾವು ಯಾರಿಗೂ ಬಿಟ್ಟುಕೊಟ್ಟಿಲ್ಲ. ಆದರೆ ರಾಹುಲ್ ಹೇಳುತ್ತಾರೆ, ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು. ಯಾವುದೇ ದಾಖಲೆ ಇಲ್ಲದೇ ಮಾತನಾಡುವ ಜಗತ್ತಿನ ಏಕೈಕ ಅರೆ ಹುಚ್ಚ ಈ ರಾಹುಲ್ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ಫೋಟೋದಿಂದ (ಆಲೂಗಡ್ಡೆಯಿಂದ) ಬಂಗಾರ ತೆಗೆಯುತ್ತೇವೆ ಎಂಬ ಹೇಳುವ ಏಕೈಕ ವ್ಯಕ್ತಿ ರಾಹುಲ್. ಭಾರತದಲ್ಲಿ ಐವತ್ತು ರೂಪಾಯಿಗೆ ಲೀಟರ್ ಗೋಧಿ ಇದೆ ಎಂದು ಹೇಳುವ, ಐವತ್ತು ಸಾವಿರ ಲೀಟರ್ ವಿದ್ಯುತ್ ಉಚಿತವಾಗಿ ನೀಡುತ್ತೇನೆ ಎಂದು ಸಾರ್ವಜನಿಕ ಭಾಷಣ ಮಾಡುವ ಏಕೈಕ ಹುಚ್ಚ ರಾಹುಲ್ ಎಂದು ಬಸನಗೌಡ್ ಪಾಟೀಲ್ ಯತ್ನಾಳ್ ಹೇಳಿದರು.
ರಾಹುಲ್ ಬಿಜಾಪುರಕ್ಕೆ ಬಂದಿದ್ದರು. ರಾಹುಲ್ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ನಾಶವಾಗಿದೆ. ಬಿಜೆಪಿಗೆ ಹೆಚ್ಚಿನ ಪ್ರಚಾರಕರು ಬೇಕಿಲ್ಲ. ಕಾಂಗ್ರೆಸ್‌ನ ಇಬ್ಬರು ಪ್ರಚಾರಕರು ಸಾಕು. ರಾಹುಲ್ ಬಂದರೆ ಸಾಕು. ಸಿದ್ದರಾಮಯ್ಯರಂತೂ ನಮ್ಮ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ. ತಿಹಾರ್ ಜೈಲಿಗೆ ಹೋಗುವ ಡಿಕೆಶಿಯನ್ನು ಸಿಎಂ ಮಾಡುತ್ತಾರೆ. ನಿತ್ಯ ಸೋನಿಯಾಗೆ ಹಣ ಬೇಕಿರುವ ಕಾರಣಕ್ಕೆ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಗೊತ್ತಾದ ಬಳಿಕ ಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಬಿಡಲಿ, ಬಿಜೆಪಿಗೆ ಓಟ್ ಹಾಕಿ ಎಂದು ಹೇಳುವ ಮನಸ್ಥಿತಿಗೆ ತಲುಪಿದಿದ್ದಾರೆ ಎಂದು ಬಸನಗೌಡ್ ಪಾಟೀಲ್ ಯತ್ನಾಳ ಛೇಡಿಸಿದರು.
ಇದನ್ನೂ ಓದಿ: Karnataka Election 2023: ರಾಹುಲ್ ಗಾಂಧಿ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್: ಬಸನಗೌಡ ಪಾಟೀಲ್ ಯತ್ನಾಳ್
ರಾಜ್ಯದಲ್ಲಿ ಬಜರಂಗ ದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ಜಾರಿಗೆ ತರಲು ಡಿ.ಕೆ. ಶಿವಕುಮಾರ ಮತ್ತೆ ಹುಟ್ಟು ಬಂದರೂ ನಿಷೇಧ ಸಾಧ್ಯವಿಲ್ಲ. ಬಜರಂಗದಳದವರು ಭಯೋತ್ಪಾದಕರಲ್ಲ, ದೇಶದ ವಿರೋಧಿ ಚಟುವಟುಟಿಕೆ ಮಾಡುವವರಲ್ಲ. ಬಜರಂಗದಳ ಎಂದರೆ ಗಂಗಾವತಿ. ಹನುಮ ಹುಟ್ಟಿದ್ದು ಇಲ್ಲಿಯೇ. ಬಜರಂಗದ ದಳ ನಿಷೇಧದ ಬಗ್ಗೆ ಮತ್ತೊಮ್ಮೆ ಉಪಾದ್ಯಾಪಿತನದ ಹೇಳಿಕೆ ನೀಡಿದರೆ ಈಗ ಹೆಲಿಕಾಪ್ಟರ್ ಗ್ಲಾಸ್ ಅಷ್ಟೆ ಒಡೆದಿದೆ. ಇನ್ನೊಮ್ಮೆ ಇಂತಹ ಹೇಳಿಕೆ ನೀಡಿದರೆ ಪವನಪುತ್ರ ಹನುಮಾನಕ್ ಕಿ ಜೈ ಎಂದು ಭಕ್ತರು ಕಾಪ್ಟರ್ ಮುಳುಗಿಸಲಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.