Site icon Vistara News

Karnataka Election 2023 Live Updates : ತುಮಕೂರಿನಲ್ಲಿ ಪ್ರಧಾನಿ ಮೋದಿ ಪ್ರಚಾರ; ಬೆಂಗಳೂರಿನ ರೋಡ್‌ ಶೋಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

election live
B Somashekhar

ಮೇ 6ರಂದು ಮೋದಿ ರೋಡ್‌ ಶೋ ಫೈನಲ್ ರೂಟ್‌ ಮ್ಯಾಪ್‌ ಇಲ್ಲಿದೆ

Ramaswamy Hulakodu

ಬೆಂಗಳೂರಿನಲ್ಲಿ ಮಾಯಾವತಿ ಪ್ರಚಾರ

ಬಿಎಸ್‌ಪಿಯ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಬೆಂಗಳೂರಿನಲ್ಲಿ ಬಿಎಸ್‌ಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದಾರೆ.

ಪುಲಕೇಶಿ ನಗರದಿಂದ ಸ್ಪರ್ಧಿಸಿರುವ ಅಖಂಡ ಶ್ರೀನಿವಾಸ ಮೂರ್ತಿ ಪರ ಅವರು ಪ್ರಚಾರ ನಡೆಸಿದ್ದಾರೆ.

Ramaswamy Hulakodu

ಪ್ರಧಾನಿ ಮೋದಿ ರೋಡ್‌ ಶೋಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಏ.6 ಮತ್ತು 7ರಂದು ನಡೆಸಲಿರುವ ರೋಡ್‌ ಶೋಗೆ ರಾಜ್ಯ ಹೈಕೋರ್ಟ್‌ ತಡೆ ನೀಡಿಲ್ಲ.

ಈ ರೀತಿಯ ರೋಡ್‌ ಶೋನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಧಾನಿ ಮೋದಿ ರೋಡ್‌ ಶೋಗೆ ಅನುಮತಿ ನೀಡಿತು. ಅಲ್ಲದೆ ಅರ್ಜಿಯನ್ನು ವಜಾ ಮಾಡಿತು.

ಇದರಿಂದ ಪ್ರಧಾನಿಯವರ ರೋಡ್‌ ಶೋಗೆ ಯಾವುದೇ ಅಡ್ಡಿಯಿಲ್ಲದಂತಾಗಿದೆ.

Ramaswamy Hulakodu

ಬಳ್ಳಾರಿಗೆ ಆಗಮಿಸಿದ ಪ್ರಧಾನಿ ಮೋದಿ

ಬಳ್ಳಾರಿಯ ಕಪ್ಪಗಲ್ಲುವಿನಲ್ಲಿ ನಡೆಯುತ್ತಿರುವ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.

ಐದು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಅವರು ಮತ ಯಾಚಿಸಲಿದ್ದಾರೆ.

Ramaswamy Hulakodu

ಮೋದಿ ರೋಡ್‌ ಶೋ ಹೈ ಕೋರ್ಟ್‌ ಅಂಗಳಕ್ಕೆ

ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ನಡೆಸಲಿರುವ ರೋಡ್‌ ಶೋ ವಿಷಯ ಹೈ ಕೋರ್ಟ್‌ ಮೆಟ್ಟಿಲೇರಿದೆ.

ಹೈಕೋರ್ಟ್‌ ಇಂದು ಮಧ್ಯಾಹ್ನ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಹಿರಿಯ ವಕೀಲ ಅಮೃತೇಶ್ ರಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Exit mobile version