ಪ್ರಧಾನಿ ಮೋದಿಯ ರೋಡ್ ಶೋ ; ರೂಟ್ ಫೈನಲ್
ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಜೆ.ಪಿ.ನಗರ ಬ್ರಿಗೇಟ್ ಮಿಲೇನಿಯಂ ಅಪಾರ್ಟ್ ಮೆಂಟ್ ನಿಂದ ರೋಡ್ ಶೋ ಆರಂಭ
ಪುಟ್ಟೇನಹಳ್ಳಿ ಮುಖ್ಯ ರಸ್ತೆ… ಪುಟ್ಟೇನಹಳ್ಳಿ ರಿಂಗ್ ರೋಡ್ ಜಂಕ್ಷನ್… ರಾಘವೇಂದ್ರ ಮಠ… ಜಯನಗರ 4th ಬ್ಲಾಕ್… ಸೌಂತ್ ಎಂಡ್ ಸರ್ಕಲ್….
ಸೌಂತ್ ಎಂಡ್ ಸರ್ಕಲ್ ನಿಂದ ಕೃಷ್ಣರಾವ್ ಪಾರ್ಕ್ ….ಬಸವನಗುಡಿಯ ರಾಮಕೃಷ್ಣ ಮಠ…ಚಾಮರಾಜಪೇಟೆ… ಮೈಸೂರ್ ಸರ್ಕಲ್ .. ಬಿನ್ನಿಮಿಲ್ ರೋಡ್ ಮಾರ್ಗದಲ್ಲಿ ಸಾಗಲಿದೆ ರೋಡ್ ಶೋ….
ಬಳಿಕ ಮೆಜೆಸ್ಟಿಕ್…. ಮಾಗಡಿ ರೋಡ್… ವರ್ಲ್ಡ್ ಮಾಲ್…..ಹೌಸಿಂಗ್ ಬೋರ್ಡ್
….ಬಸವೇಶ್ವರ ನಗರ….ಶಂಕರ ಮಠ ಸರ್ಕಲ್… ಮೋದಿ ಆಸ್ಪತ್ರೆ ರಸ್ತೆ
ನವರಂಗ್ ಸರ್ಕಲ್…. ಮಹಾಕವಿ ಕುವೆಂಪು ರಸ್ತೆ….ಮಲ್ಲೇಶ್ವರಂ ಸರ್ಕಲ್
ಸಂಪಿಗೆ ರಸ್ತೆ…. ಸರ್ಕಲ್ ಮಾರಮ್ಮ ಟೆಂಪಲ್ ಸರ್ಕಲ್‌ನಲ್ಲಿ ಅಂತ್ಯ
ಪ್ರಚಾರದ ವೇಳೆ ಬಿದ್ದ ಸೋಮಣ್ಣ
ಚಾಮರಾಜನಗರದಲ್ಲಿ ನಟ ಕಿಚ್ಚ ಸುದೀಪ್ ಜತೆ ರೋಡ್ ಶೋ ನಡೆಸುತ್ತಿದ್ದ ವೇಳೆ ಬಿಜೆಪಿ ಅಭ್ಯರ್ಥಿ, ಸಚಿವ ವಿ ಸೋಮಣ್ಣ ಕಾರಿನ ಮೇಲಿನಿಂದ ಆಯತಪ್ಪಿ ಬಿದ್ದಿದ್ದಾರೆ.
ಕಾರಿನ ಮೇಲೆ ನಿಂತು ಸಚಿವ ಸೋಮಣ್ಣ ಜನರತ್ತ ಕೈ ಬೀಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆದರೆ ಅವರಿಗೆ ಪೆಟ್ಟಾಗದಂತೆ ಬೌನ್ಸರ್ ಹಿಡಿದುಕೊಂಡಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರದ ರೇಟ್ ಕಾರ್ಡ್
ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ರೇಟ್ ಕಾರ್ಡ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಇದಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಸಮಾವೇಶ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮಾವೇಶ ಇಂದು ನಡೆಯಲಿದೆ.
ಬಿಜೆಪಿಗೆ ಠಕ್ಕರ್ ಕೊಡಲು ಜಗದೀಶ್ ಶೆಟ್ಟರ್ ಅಭಿಮಾನಿಗಳ ಮಾಸ್ಟರ್ ಪ್ಲ್ಯಾನ್. ವೀರಶೈವ ಲಿಂಗಾಯತ ಅಭಿಮಾನಿಗಳ ಬಳಗದಿಂದ ಈ ಸಮಾವೇಶ ಆಯೋಜನೆ. ಎಮ್.ಬಿ. ಪಾಟೀಲ್, ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದೆ.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ
ನೂರರಕ್ಕೆ ನೂರಷ್ಟು ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.
ಪಕ್ಷ 135ಸೀಟು ಗೆದ್ದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ. ಯಾರ ಜೊತೆ ಹೊಂದಾಣಿಕೆಯ ಪ್ರಶ್ನೇಯೆ ಇಲ್ಲ ಎಂದು ಅವರು ಹೇಳಿದ್ದಾರೆ.