Site icon Vistara News

Karnataka Politics : ಜೆಡಿಎಸ್‌ ಶಾಸಕರಿಗೆ ಮಂಜೂರಾದ ಮನೆಗಳು ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೆ ಶಿಫ್ಟ್‌; ಏನಿದು ವಸತಿ ರಾಜಕಾರಣ?

Housing

ಬೆಂಗಳೂರು: ರಾಜ್ಯದ ಸರ್ಕಾರ ಜೆಡಿಎಸ್‌ ಶಾಸಕರಿಗೆ ಆಘಾತ ನೀಡಿದೆ. ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಮಂಜೂರಾಗಿದ್ದ ಮನೆಗಳನ್ನು (Houses sanctioned for JDS MLA) ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಿಗೆ ವರ್ಗಾವಣೆ (Shifted to Congress MLA constituency) ಮಾಡುವ ಮೂಲಕ ಮನೆ ರಾಜಕಾರಣ (House politics) ಮಾಡಿದೆ. ಇದರ ವಿರುದ್ಧ ಈಗ ಜೆಡಿಎಸ್‌ ಶಾಸಕರು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer ahmad khan) ಅವರ ವಿರುದ್ಧ ಸಿಡಿದೆದ್ದಿದ್ದಾರೆ. ತುರುವೇಕೆರೆಗೆ ಮಂಜೂರು ಆಗಿದ್ದ 3,375 ಮನೆಗಳನ್ನು ಕುಣಿಗಲ್‌ ಕ್ಷೇತ್ರಕ್ಕೆ ಸ್ಥಳಾಂತರ (Thuruvekere to Kunigal) ಮಾಡಿರುವುದೇ ಈಗಿನ ವಿವಾದದ ಮೂಲ.

ತುರುವೇಕೆರೆಗೆ ಈಗ ಶಾಸಕರಾಗಿ ಇರುವವರು ಎಂ.ಟಿ. ಕೃಷ್ಣಪ್ಪ. ಅವರು ಜೆಡಿಎಸ್‌. ಅವರ ಕ್ಷೇತ್ರಕ್ಕೆ ಮಂಜೂರಾಗಿರುವ ಮನೆಗಳನ್ನು ಕಾಂಗ್ರೆಸ್ ಶಾಸಕ ರಂಗನಾಥ್​ ಅವರ ಕುಣಿಗಲ್​ ವಿಧಾನಸಭಾ ಕ್ಷೇತ್ರಕ್ಕೆ ಶಿಫ್ಟ್ ಮಾಡಲಾಗಿದೆ.

ಇದರಿಂದ ಸಿಡಿದೆದ್ದಿರುವ ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ಅವರು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್​ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಸೆಪ್ಟೆಂಬರ್‌ 1ರ ಬೆಳಗ್ಗೆ 11 ಗಂಟೆಗೆ ವಿಧಾನಸೌಧ ಸಚಿವರ ಕಚೇರಿ ಎದುರು ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ನಿಜ ಅಂದರೆ ಇದು ಜೆಡಿಎಸ್‌ ಶಾಸಕರಿಗೆ ಎಂದು ಹಂಚಿಕೆಯಾದ ಮನೆಗಳಲ್ಲ. ಚುನಾವಣೆಗೆ ಮೊದಲು ತುರುವೇಕೆರೆ ಕ್ಷೇತ್ರಕ್ಕೆ ಮಂಜೂರಾಗಿದ್ದ ಅಂಬೇಡ್ಕರ್ ವಸತಿ ಯೋಜನೆ ಮನೆಗಳು. ಆಗ ತುರುವೇಕೆರೆಯಲ್ಲಿ ಬಿಜೆಪಿ ಶಾಸಕರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾದ ಎಂ.ಟಿ ಕೃಷ್ಣಪ್ಪ ಅವರು ಆ ಮನೆಗಳನ್ನು ಹಂಚಿಕೆ ಮಾಡಿದ್ದರು. ಆದರೆ ಆ ಮನೆಗಳನ್ನು ಇದೀಗ ಏಕಾಏಕಿ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿರುವುದು ಅವರನ್ನು ಕೆರಳಿಸಿದೆ.

ಇದ ನನ್ನ ಕ್ಷೇತ್ರ. ನನ್ನ ಕ್ಷೇತ್ರದ ವಿಚಾರದಲ್ಲಿ ತಲೆ ಹಾಕಲು ಅವರು ಯಾರು? ಆಡಳಿತ ಪಕ್ಷ ಶಾಸಕರೊಬ್ಬರು ಇಷ್ಟು ಕೀಳುಮಟ್ಟಕ್ಕೆ ತಮ್ಮ ಕ್ಷೇತ್ರಗಳಿಗೆ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳುವ ಸಾಮರ್ಥ್ಯ ಅವರಿಗಿಲ್ಲವೇ ಎಂದು ಕುಣಿಗಲ್ ಶಾಸಕ ಡಾ ರಂಗನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂ.ಟಿ. ಕೃಷ್ಣಪ್ಪ ಅವರು.

ಇದನ್ನೂ ಓದಿ: HD Kumaraswamy: ಎಚ್‌ಡಿಕೆ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಮೇಲೂ ಅವರು ತಮ್ಮ ಸಿಟ್ಟು ಪ್ರದರ್ಶಿಸಿದ್ದಾರೆ. ʻʻಇತ್ತೀಚೆಗೆ ಸಿಎಂ ನಡುವಳಿಕೆ ಸರಿಯಾಗಿಲ್ಲ. ಸೌಜನ್ಯಕ್ಕೂ ನಾನು ಕೊಟ್ಟ ಪತ್ರಕ್ಕೆ ಸಹಿ ಹಾಕಿಲ್ಲ. ಜಿಲ್ಲಾವರು ಶಾಸಕರ ಸಭೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಶಾಸಕರ ಸಭೆಗೆ ನಮ್ಮನ್ನು ಕರೆಯಬೇಕಿತ್ತು. ಅವರ ಪಕ್ಷದ ಶಾಸಕರ ಸಭೆ ಎನ್ನುವುದಾದರೆ ಕಾಂಗ್ರೆಸ್ ಕಚೇರಿಯಲ್ಲಿ ಮಾಡಿಕೊಳ್ಳಬೇಕಿತ್ತುʼʼ ಎಂದು ಹೇಳಿದರು.

Exit mobile version