Site icon Vistara News

Karnataka Politics : ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ಶಾಸಕರ ಟೆನ್ಶನ್‌; ಸ್ವಪಕ್ಷೀಯರಿಂದ ಬಿದ್ದ ಬರ ಭಾರ!

CM Siddaramaiah infront of vidhana soudha

Karnataka Government Spends Rs 7 Crore For Painting, Renovation Of Ministers Offices

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್‌ ಸರ್ಕಾರಕ್ಕೆ ಆಂತರಿಕ ಅಸಮಾಧಾನ ಆಗಾಗ ಕಾಡುತ್ತಲೇ ಇದೆ. ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) 135 ಸ್ಥಾನಗಳನ್ನು ಗಳಿಸಿದರೂ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ (Congress Government) ಟೆನ್ಶನ್‌ ಮಾತ್ರ ತಪ್ಪುತ್ತಿಲ್ಲ. ಈಗ ಮತ್ತೊಂದು ತಲೆನೋವು ಶುರುವಾಗಿದ್ದು, ಸ್ವಪಕ್ಷೀಯ ಶಾಸಕರೇ ಬಿಸಿತುಪ್ಪವಾಗಿದ್ದಾರೆ. ಬರ ತಾಲೂಕು ಘೋಷಿಸಲು ಕಾಂಗ್ರೆಸ್‌ನ 80 ಶಾಸಕರು ಒತ್ತಡ ಹಾಕುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಜತೆಗೆ ಬರ ಘೋಷಣೆ ಮಾಡಲು ಹಣದ ಹೊಂದಾಣಿಕೆ ಸಹ ಸವಾಲಾಗಿದೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರ ಬಂಡಾಯದ ಸುಳಿವನ್ನು ಕಾಂಗ್ರೆಸ್‌ ಶಾಸಕರು ನೀಡಿದ್ದಾರೆ. ತಮ್ಮ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ. ಅಭಿವೃದ್ಧಿಗೆ ನಮಗೆ ಕಾಸು ಸಿಕ್ಕಿಲ್ಲ. ಈಗ ನಮ್ಮ ತಾಲೂಕಲ್ಲಿ ಮಳೆಯಾಗದೆ ಜನರು ಕಂಗೆಟ್ಟಿದ್ದಾರೆ. ಹೀಗಾಗಿ ಬರಗಾಲ ಪೀಡಿತ ತಾಲೂಕು (Drought hit taluk) ಎಂದು ಘೋಷಣೆ ಮಾಡಬೇಕು ಎಂದು ಒತ್ತಡವನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ: Human Animal Conflict : 15 ದಿನದಲ್ಲಿ ವನ್ಯಜೀವಿ -ಮಾನವ ಸಂಘರ್ಷಕ್ಕೆ 11 ಜನ ಸಾವು; ತಡೆಗೆ 500 ಕೋಟಿ ರೂ. ಅನುದಾನಕ್ಕೆ ಮನವಿ

ಸಿಎಂ ಸಮಾಧಾನಕ್ಕೆ ಒಪ್ಪುತ್ತಿಲ್ಲ

ಈ ನಡುವೆ ಸಿಎಂ ಸಿದ್ದರಾಮಯ್ಯ ಸಹ ಸ್ವಪಕ್ಷೀಯ ಶಾಸಕರ ಮನವೊಲಿಸಲು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಬರ ತಾಲೂಕು ಎಂದು ಘೋಷಣೆ ಮಾಡಲು ನನ್ನ ತಕರಾರು ಏನೂ ಇಲ್ಲ. ಆದರೆ, ಇಲ್ಲಿ ತಾಂತ್ರಿಕ ತೊಂದರೆ ಇದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅಡ್ಡಿಯಾಗುತ್ತಿದೆ. ಅಲ್ಲಿ ನೀಡಲಾದ ಮಾರ್ಗಸೂಚಿ ಅನ್ವಯ ಬರ ತಾಲೂಕು ಎಂದು ಎಲ್ಲ ಕಡೆ ಘೋಷಣೆ ಮಾಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, 130 ಶಾಸಕರ ಪೈಕಿ 80 ಸ್ವಪಕ್ಷೀಯ ಶಾಸಕರು, ಏನಾದರೂ ಮಾಡಿ ನಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.

ನಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡದೇ ಇದ್ದರೆ ನಾವು ಜನರ ಮುಂದೆ ತಲೆ ಎತ್ತಲು ಸಾಧ್ಯವಿಲ್ಲ. ಒಂದು ಕಡೆ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಮತ್ತೊಂದು ಕಡೆ ಬರಗಾಲದ ಸಮಸ್ಯೆ ಎದುರಾಗಿದೆ. ಈಗ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಜನರು ಈ ಬಗ್ಗೆ ನಮ್ಮನ್ನು ಕೇಳಿದರೆ ನಾವು ಏನೆಂದು ಉತ್ತರ ಕೊಡಬೇಕು? ಸರ್ಕಾರದ ಸಮಸ್ಯೆಯ ಜತೆ ನಮ್ಮ ಸಮಸ್ಯೆಯನ್ನೂ ಅರ್ಥ ಮಾಡಿಕೊಳ್ಳಿ ಎಂದು ಕಾಂಗ್ರೆಸ್‌ ಶಾಸಕರು ಹೇಳುತ್ತಿದ್ದಾರೆ.

ಮೊದಲನೆಯದಾಗಿ ಬರ ತಾಲೂಕು ಎಂದು ಘೋಷಣೆ ಮಾಡಬೇಕು. ಅದು ಆಗದಿದ್ದರೆ ಕೇಂದ್ರ ಸರ್ಕಾರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿ, ಮಾನದಂಡದಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡಿ. ಅದೂ ಆಗಲಿಲ್ಲವೆಂದಾದರೆ ನಮ್ಮ ತಾಲೂಕಿಗೆ ಬರ ನಿರ್ವಹಣೆ ಮಾಡಲು ಅನುದಾನವನ್ನಾದರೂ ಕೊಡಿ ಎಂದು ಕಾಂಗ್ರೆಸ್‌ ಶಾಸಕರು ಪಟ್ಟು ಹಿಡಿದು ಕುಳಿತಿದ್ದಾರೆ.

ಇದನ್ನೂ ಓದಿ: Cauvery water dispute : ರೈತ ಸಂಘಟನೆಯಿಂದ ತಕರಾರು ಅರ್ಜಿ; ನಾಳೆ ಸುಪ್ರೀಂನಲ್ಲಿ ಕಾವೇರಿ ವಿಚಾರಣೆ

ಹಣ ಹೊಂದಾಣಿಕೆ ಸಂಕಷ್ಟ

ಇತ್ತ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಹರಸಾಹಸ ಪಡುತ್ತಿರುವ ಈ ಸಂದರ್ಭದಲ್ಲಿ ಬರವೂ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಹಣವಿಲ್ಲದ ಜತೆಗೆ ಬರಗಾಲ ನಿರ್ವಹಣೆಗೆ ಹಣ ಹೊಂದಾಣಿಕೆ ಮಾಡುವುದು ಹೇಗೆ ಎಂಬ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಹೀಗಾಗಿ ಸಿಎಂಗೆ ಈಗ ಬರ ಬಂಡಾಯ ಶುರುವಾಗುತ್ತದೆಯೇ ಎಂಬ ಆತಂಕ ಎದುರಾಗಿದೆ.

Exit mobile version