Site icon Vistara News

Karnataka Politics : ಕಾಂಗ್ರೆಸ್‌ ಸೇರಿದ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು; ಕೋಮುವಾದಿ ಜನತಾ ದಳವೆಂದ ಸಿಎಂ

Operation Hasta and congress Karnataka

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್‌ನಿಂದ (Karnataka Politics) ಆಪರೇಷನ್‌ ಹಸ್ತದ (Operation Hasta) ಕಾರ್ಯಾಚರಣೆ ಮುಂದುವರಿದಿದೆ. ಜೆಡಿಎಸ್‌ ನಾಯಕರೂ, ಮಾಜಿ ಶಾಸಕರಾದ ಗೌರಿ ಶಂಕರ್ ಮತ್ತು ಮಂಜುನಾಥ್ ಬುಧವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಸಮ್ಮುಖದಲ್ಲಿ ಉಭಯ ನಾಯಕರು ಕಾಂಗ್ರೆಸ್‌ ಸೇರಿದ್ದಾರೆ. ಇದೇ ವೇಳೆ ಕಳೆದ ವಿಧಾನ ಚುನಾವಣೆಯಲ್ಲಿ (Karnataka Assembly Election) ಬೊಮ್ಮನಹಳ್ಳಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಸಾದ್ ಗೌಡ ಕೂಡ ಕಾಂಗ್ರೆಸ್ ಸೇರಿದ್ದಾರೆ.

ಮಾಜಿ ಶಾಸಕರಾದ ಗೌರಿ ಶಂಕರ್ (Gowri Shankar) ಮತ್ತು ಮಂಜುನಾಥ್ (Manjunath) ಅವರು ಸಿಎಂ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯ (KPCC Office) ವೇದಿಕೆಗೆ ಆಗಮಿಸುತ್ತಿದ್ದಂತೆ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

Operation Hasta and congress Karnataka

ಇದನ್ನೂ ಓದಿ: BY Vijayendra : ಈ ಕಾರಣಕ್ಕೆ ವಿಜಯೇಂದ್ರ ಪದಗ್ರಹಣ ಸಮಾರಂಭಕ್ಕೆ ಹೋಗಿಲ್ಲವೆಂದ ಎಸ್‌ಟಿಎಸ್‌!

ಜೆಡಿಎಸ್‌ನವರು “ಎಸ್‌” ಅನ್ನು ಬಿಟ್ಟುಬಿಡಲಿ: ಸಿಎಂ ಸಿದ್ದರಾಮಯ್ಯ

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಜೆಡಿಎಸ್ ಬಿಟ್ಟು ಜಾತ್ಯತೀತ ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವ ಇಬ್ಬರು ನಾಯಕರಿಗೂ ಸ್ವಾಗತ. ಈಗ ಜೆಡಿಎಸ್‌ನವರು ಬಿಜೆಪಿ ಜತೆಗೆ ಸೇರಿದ್ದಾರೆ. ಈ ಜೆಡಿಎಸ್‌ನವರು ಎಸ್ (ಸೆಕ್ಯುಲರಿಸಂ) ಅನ್ನು ಬಿಟ್ಟುಬಿಡಬೇಕು. ಅದೀಗ ಕೋಮುವಾದಿ ಜನತಾ ದಳ ಎಂದು ಸಲಹೆ ನೀಡಿದರು.

ಗೌರಿಶಂಕರ್ ಮಾಜಿ ಶಾಸಕ ಚೆನ್ನಿಗಪ್ಪ ಅವರ ಮಗ. ಅವರ ತಂದೆ ನಾವು ಎಲ್ಲರೂ ಒಟ್ಟಿಗೆ ಜೆಡಿಎಸ್‌ನಲ್ಲಿ ಇದ್ದೆವು. ಜೆಡಿಎಸ್‌ನವರು ಎಸ್ ತೆಗೆದು ಹಾಕಿಲ್ಲ ಅಂದ್ರೆ ಜನರೇ ಅದನ್ನು ತೆಗೆದುಹಾಕುತ್ತಾರೆ.‌ ನಾನು ಜೆಡಿಎಸ್‌ನಲ್ಲಿ ಆರು ವರ್ಷ ಇದ್ದೆ. ನಾನು ಇರುವತನಕ ಬಿಜೆಪಿ ಜತೆಗೆ ಸಂಬಂಧವನ್ನು ಇಟ್ಟುಕೊಳ್ಳಬಾರದು ಅಂತ ಹೇಳಿದ್ದೆ. ಈಗ ಬಿಜೆಪಿ ಅವರ ಜತೆ ಸೇರಿಕೊಂಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಸೇರಿ ಸರ್ಕಾರ ಮಾಡಿದರು. ನಂತರ ಯಡಿಯೂರಪ್ಪ ಅವರಿಗೆ 20 ತಿಂಗಳು ಅಧಿಕಾರ ಕೊಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್‌ ಎಂದರೆ ದೇವೇಗೌಡ ಆ್ಯಂಡ್ ಫ್ಯಾಮಿಲಿ‌!

ಜೆಡಿಎಸ್ ಅಂದರೆ ಅದೇನು ಪಕ್ಷ ಅಲ್ಲ. ದೇವೇಗೌಡ ಆ್ಯಂಡ್ ಫ್ಯಾಮಿಲಿ‌ ಅದು. ದೇವೇಗೌಡ ಇರುವತನಕ ಜೆಡಿಎಸ್ ಇರುತ್ತದೆ. ಆಮೇಲೆ ಬಿಜೆಪಿ ಜತೆ ವಿಲೀನ ಆಗಬಹುದು. ಬಿಜೆಪಿಯವರಿಗಿಂತ ಕುಮಾರಸ್ವಾಮಿಯೇ ಹೆಚ್ಚು ಮಾತನಾಡುತ್ತಾರೆ. ಬಿಜೆಪಿ ಅವರು ಕುಮಾರಸ್ವಾಮಿ ಅವರನ್ನು ಛೂ ಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Actor Darshan : ವೈದ್ಯೆಗೆ ನಾಯಿ ಕಚ್ಚಿದ ಪ್ರಕರಣ; ವಿಚಾರಣೆಗೆ ನಟ ದರ್ಶನ್‌ ಹಾಜರ್‌

ನನ್ನನ್ನೇ ಪಕ್ಷದಿಂದ ಹೊರಹಾಕಿದರು

ಅಂದು ಜನತಾದಳ ಇಬ್ಭಾಗವಾದಾಗಲೂ ಬಿಜೆಪಿ ಜತೆಗೆ ಸೇರುತ್ತಾರೆ ಎಂಬ ಕಾರಣಕ್ಕೇ ಹಾಗಾಗಿತ್ತು. ಜೆಡಿಯು ಜತೆಗೆ ಹೋಗಬಾರದು ಅಂತ ನಾವೆಲ್ಲ ಸೆಕ್ಯುಲರ್ ಜನತಾ ದಳ ಮಾಡಿದೆವು. ನಾನು ಜನತಾ ದಳದಲ್ಲಿ ಇರುವವರೆಗೆ ಬಿಜೆಪಿ ಜತೆಗೆ ಯಾವುದೇ ಸಂಪರ್ಕ ಸಂಬಂಧ ಇಟ್ಟುಕೊಳ್ಳಬಾರದು ಅಂತ ನಿರ್ಧರಿಸಿದ್ದೆ. ಕೊನೆಗೆ ನನ್ನ ಪಕ್ಷದಿಂದಲೇ ತೆಗದು ಹಾಕಿಬಿಟ್ಟರು ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

Exit mobile version