Site icon Vistara News

Karnataka Road : ಇನ್ನು ಗುತ್ತಿಗೆದಾರರಿಂದಲೇ 5 ವರ್ಷ ರಸ್ತೆ ನಿರ್ವಹಣೆ: ಸತೀಶ್‌ ಜಾರಕಿಹೊಳಿ

Satish Jarkiholi infront of vidhana soudha

ಬೆಂಗಳೂರು: ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು (Karnataka Road) ನಿರ್ಮಾಣ ಮಾಡಿದ ಗುತ್ತಿಗೆದಾರರೇ (Karnataka Road Contractors) ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು (New Rule) ಜಾರಿಗೆ ತರುತ್ತಿದ್ದೇವೆ. ಇಲ್ಲಿಯವರೆಗೆ ಈ ರೂಲ್ಸ್ ಇರಲಿಲ್ಲ. ಹೊಸದಾಗಿ ಜಾರಿ ಮಾಡುತ್ತಾ ಇದ್ದೇವೆ. ಗುತ್ತಿಗೆದಾರರಿಗೆ ಆ ಹೊಣೆ ನೀಡಲಾಗುವುದು. ಇನ್ನು ಟೆಂಡರ್ ಕರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (PwD Minister Satish Jarkiholi) ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯಲ್ಲಿ ಸುಧಾರಣೆ ‌ಮಾಡುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿಯೇ ನಿರ್ವಹಣೆಯ ಜವಾಬ್ದಾರಿಯನ್ನು ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೇ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Load Shedding : ಬೆಂಗಳೂರಲ್ಲೂ ಶುರವಾಯ್ತಾ ಅನಧಿಕೃತ ಲೋಡ್‌ ಶೆಡ್ಡಿಂಗ್!

ಬರಲಿದೆ ಹೊಸ ಆ್ಯಪ್

ಲೋಕೋಪಯೋಗಿ ಇಲಾಖೆಯಲ್ಲಿ ಆ್ಯಪ್ ಸಿದ್ಧವಾಗುತ್ತಿದೆ. ಟ್ರಯಲ್‌ನಲ್ಲಿದೆ. ಇದು ಬಿಡುಗಡೆಯಾದರೆ ಅನುಕೂಲ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು, ಇದು ಹೇಗೆ ಕಾರ್ಯನಿರ್ವಹಣೆ ಮಾಡಲಿದೆ? ಇದು ಯಾವುದಕ್ಕೆಲ್ಲ ಉಪಯೋಗವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ನಮ್ಮ ಐಬಿಗಳ ನಿರ್ವಹಣೆ ಮಾಡಲು ಇಬ್ಬರು, ಮೂವರು ಜನ ಸೇವೆಗೆ ಗುತ್ತಿಗೆದಾರ ಆಧಾರಿತವಾಗಿ ನೇಮಕ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಇದೇ ವೇಳೆ ತಿಳಿಸಿದರು.

ಅಭಿವೃದ್ಧಿಗೆ ಹಣ ಇದೆ

ಶಾಸಕರು ಅನುದಾನಕ್ಕೆ ಬೇಡಿಕೆ ಇಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಎರಡು ಯೋಜನೆ ಅಡಿಯಲ್ಲಿ ಶಾಸಕರಿಗೆ ಹಣ ಕೊಡಲಾಗುತ್ತಿದೆ. ಅನುದಾನದ ಕೊರತೆ ಇಲ್ಲ. ಹಿಂದಿನ ಬಿಲ್‌ ನೀಡಲು ಸಮಸ್ಯೆ ಇವೆ. ಆದರೆ ಅಭಿವೃದ್ಧಿ ಕಾಮಗಾರಿ ನಿಲ್ಲಿಸಲು ಆಗುವುದಿಲ್ಲ ಎಂದು ಹೇಳಿದರು.

ನೋಟಿಸ್‌ ಕೊಡುವುದು ಸಹಜ

ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಸಂಬಂಧ ಜಾರಿ ಮಾಡಿರುವ ನೋಟಿಸ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ನೋಟಿಸ್ ಕೊಡುವುದು ಸಹಜ. ಹಿಂದೆಯೂ ಅನೇಕ ಹಿರಿಯರಿಗೆ ನೋಟಿಸ್‌ ‌ನೀಡಲಾಗಿತ್ತು. ಜಮೀರ್ ಅಹ್ಮದ್ ಸೇರಿದಂತೆ ಹಿರಿಯರಿಗೆ ನೋಟಿಸ್‌ ನೀಡಲಾಗಿತ್ತು. ಈಗ ಹರಿಪ್ರಸಾದ್‌ ಅವರಿಗೆ ಕೊಡಲಾಗಿದ್ದು, ಅದಕ್ಕೆ ಅವರು ಉತ್ತರ ಕೊಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ :Minister D Sudhakar : ಸಚಿವ ಸುಧಾಕರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಿಯೋಗ; ಸಂತ್ರಸ್ತೆ ಭೇಟಿ, ನ್ಯಾಯಕ್ಕೆ ಗುಡುಗು

ವೈಯಕ್ತಿಕವಾಗಿ ಪ್ರಕರಣವನ್ನು ನೋಡಿ

ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ, ಅವರು ಹಿಂದುಪರ ಸಂಘಟನೆಗಳಲ್ಲಿ ಇರಬಹುದು. ಬೇರೆ ಪಾರ್ಟಿಯಲ್ಲೂ ಇರಬಹುದು. ಆದರೆ, ಪ್ರಕರಣವನ್ನು ನಾವು ವೈಯಕ್ತಿಕವಾಗಿ ನೋಡಬೇಕು ಎಂದು ಉತ್ತರಿಸಿದರು.

Exit mobile version