Site icon Vistara News

Caste Census: ಜಾತಿ ಗಣತಿ ವರದಿ ಪ್ರಸ್ತಾಪಿಸಿದ ಬಿ.ಕೆ. ಹರಿಪ್ರಸಾದ್;‌ ತಿರುಗಿಸಿ ಕೊಟ್ಟ ಕೋಟ!

BK Hariprasad and Kota Srinivas Poojary

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ನಡೆದ ಸದನದಲ್ಲಿ (Karnataka Budget Session 2024) ಕಾಂತರಾಜು ವರದಿ ಬಗ್ಗೆ ಪ್ರಸ್ತಾಪವಾಗಿದೆ. ಜಾತಿ ಗಣತಿ (Caste Census) ವಿಚಾರವಾಗಿ ಪ್ರತಿಪಕ್ಷ ಬಿಜೆಪಿಯ ನಿಲುವು ಏನು ಎಂಬ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (BK Hariprasad) ಮಾತಿಗೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ತಿರುಗೇಟು ನೀಡಿದ್ದಾರೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿ, ಮಾತಿನ ಮೂಲಕವೇ ಏಟು ನೀಡಿದ್ದಾರೆ. ಈ ಆಯೋಗವನ್ನು ರಚನೆ ಮಾಡಿದ್ದೇ ಕಾಂಗ್ರೆಸ್‌ ಆಗಿದ್ದು, ವರದಿಯನ್ನು ಸ್ವೀಕಾರ ಮಾಡುವ ಬಗ್ಗೆ ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂತರಾಜ ಆಯೋಗದ ವರದಿ ಬಗ್ಗೆ ನಿಮ್ಮ ನಿಲುವೇನು ಎಂಬ ಬಿ.ಕೆ. ಹರಿಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಅದು ಒಳ್ಳೆಯ ವಿಚಾರ. ಆದರೆ, ಕಾಂತರಾಜ ಆಯೋಗವನ್ನು ರಚನೆ ಮಾಡಿದ್ದು ಯಾರು? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಬಿ.ಕೆ. ಹರಿಪ್ರಸಾದ್‌, “ನಾವೇ” ಎಂದು ಉತ್ತರಿಸಿದ್ದರು. ಆಗ ಕೋಟ ಕೋಟ ಶ್ರೀನಿವಾಸ್ ಪೂಜಾರಿ, “ವರದಿ ಬಂದಾಗ ಯಾವ ಸರ್ಕಾರ ಇತ್ತು, ನಿಮ್ಮದೇ.! ಆದರೂ ನೀವು ಅದನ್ನು ಜಾರಿಗೆ ತರಲಿಲ್ಲ. ಅದಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಂತು. ಆಗ ಒಂದು ಹುಲ್ಲುಕಡ್ಡಿ ಅಲ್ಲಾಡಬೇಕಾದರೆ ಸಿದ್ದರಾಮಯ್ಯ ಅವರ ಪರ್ಮಿಷನ್ ಬೇಕಿತ್ತು. ಆದರೂ ಆಗ ವರದಿ ಸ್ವೀಕಾರ ಮಾಡಲಿಲ್ಲ. ಬಳಿಕ ನಮ್ಮ ಸರ್ಕಾರ ಬಂತು. ನಾನೇ ಸಮಾಜ ಕಲ್ಯಾಣ ಇಲಾಖೆ ಸಚಿವ ಇದ್ದೆ. ಆದರೆ, ಅದರಲ್ಲಿ ಅಧಿಕೃತ ಕಾರ್ಯದರ್ಶಿ ಸಹಿಯೇ ಇರಲಿಲ್ಲ. ಅದನ್ನು ಹೇಗೆ ಸ್ವೀಕಾರ ಮಾಡಲು ಸಾಧ್ಯ.? ಎಂದು ಪ್ರಶ್ನೆ ಮಾಡಿದರು.

ಈಗ ಚಂಡು ನಿಮ್ಮ ಅಂಗಳದಲ್ಲೇ ಇದೆ

ಅದಕ್ಕೆ ಕಾಂತರಾಜ ಆಯೋಗ ಸಿದ್ಧಪಡಿಸಿದ ಜಾತಿ ಗಣತಿ ವರದಿಯನ್ನು ಪರಿಷ್ಕರಿಸಿ ಕೊಡಲು ಜಯಪ್ರಕಾಶ್ ಹೆಗ್ಡೆ ಅವರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಮಾತೆತ್ತಿದರೆ ನಾನು ದಲಿತರ ಪರ, ಶೋಷಿತರ ಪರ, ಧ್ವನಿ ಇಲ್ಲದವರ ಪರ ಅಂತಾರೆ. ಈಗ ಚಂಡು ನಿಮ್ಮ ಅಂಗಳದಲ್ಲೇ ಇದೆ. ಸಿದ್ದರಾಮಯ್ಯ ಅವರು ಸ್ವೀಕಾರ ಮಾಡೇ ಮಾಡ್ತಾರೆ ಅನ್ನೋ ನಂಬಿಕೆ ನನಗಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿಮ್ಮ ಪಕ್ಷದವರು. ಅವರು ಏನು ಹೇಳಿದ್ದಾರೋ? ಅದಕ್ಕೂ ನನಗೂ ಸಂಬಂಧ ಇಲ್ಲ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನಿಮ್ಮ ಪಕ್ಷದವರು, ಅವರ ಹೇಳಿಕೆಗೂ ನನಗೂ ಸಂಬಂಧ ಇಲ್ಲ. ವರದಿ ಸ್ವೀಕಾರ ಮಾಡೋದು ನಿಮಗೆ ಬಿಟ್ಟಿದ್ದು ಎಂದು ಹೇಳಿ ಆಡಳಿತ ಪಕ್ಷವನ್ನು ಟೀಕಿಸಿದರು.

ಇದನ್ನೂ ಓದಿ: Revenue Village: ಕಂದಾಯ ಗ್ರಾಮಗಳಾಗಿ ಎಲ್ಲ ತಾಂಡಾಗಳು: ಸಿಎಂ ಸಿದ್ದರಾಮಯ್ಯ

ಏನಿದು ಕಾಂತರಾಜು ವರದಿ?

2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2014 -15ರಲ್ಲಿ ನಮ್ಮ ಸರ್ಕಾರ ಜಾತಿ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ಕಾಂತರಾಜು ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು. ಆದರೆ, ಆ ಸರ್ಕಾರದ ಅವಧಿ ಮುಗಿಯುವ ವೇಳೆಗೆ ವರದಿ ಸಿದ್ಧವಾಗಿರಲಿಲ್ಲ. ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. 2018ರ ಕೊನೇ ಭಾಗದಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ (Congress – JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ.

Exit mobile version