Site icon Vistara News

Lok Sabha Election 2024: ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ 41 ಪಕ್ಷಗಳ ಸಂಸದರು!

Lok Sabha Election 2024

ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ (Lok Sabha Election 2024) ಈ ಬಾರಿ 41 ರಾಜಕೀಯ ಪಕ್ಷಗಳು (political parties) ಪ್ರತಿನಿಧಿಗಳು ಪ್ರವೇಶ ಪಡೆದಿದ್ದಾರೆ. ಬುಧವಾರ ವಿಸರ್ಜನೆಗೊಂಡ 17ನೇ ಲೋಕಸಭೆಯಲ್ಲಿ 36 ಪಕ್ಷಗಳ ಸಂಸದರಿದ್ದರು (MPs) ಎಂದು ಚುನಾವಣೋತ್ತರ ಅಂಕಿಅಂಶಗಳು ತೋರಿಸುತ್ತವೆ.

543 ಸದಸ್ಯರ ಸದನದಲ್ಲಿ ಬಿಜೆಪಿ (BJP) 240, ಕಾಂಗ್ರೆಸ್ (congress) 99 ಸ್ಥಾನಗಳನ್ನು ಹೊಂದಿದೆ. ಈ ಎರಡು ದೊಡ್ಡ ಪಕ್ಷಗಳು ಒಟ್ಟು 339 ಸಂಸದರನ್ನು ಹೊಂದಿವೆ. ಬಿಜೆಪಿ ಈ ಬಾರಿ 63 ಸ್ಥಾನಗಳನ್ನು ಕಳೆದುಕೊಂಡಿದೆ. 2014 ರಲ್ಲಿ ಬಿಜೆಪಿ 282 ಮತ್ತು 2019 ರಲ್ಲಿ 303 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ 2014ರಲ್ಲಿ 44, 2019ರಲ್ಲಿ 52 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ 99 ಸ್ಥಾನಗಳಿಗೆ ಏರಿದೆ.

ಬಿಜೆಪಿ ತನ್ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಹಾಯದಿಂದ ಕೇಂದ್ರದಲ್ಲಿ ಸತತ ಮೂರನೇ ಬಾರಿ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್ 8ರಂದು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. . ಲೋಕಸಭೆಯಲ್ಲಿ ಎನ್‌ಡಿಎ ಪಕ್ಷಗಳು ಒಟ್ಟು 293 ಸ್ಥಾನಗಳನ್ನು ಗೆದ್ದಿವೆ.

ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟವು 233 ಸಂಸದರನ್ನು ಹೊಂದಿದ್ದು, ಸಮಾಜವಾದಿ ಪಕ್ಷ (SP) ಉತ್ತರ ಪ್ರದೇಶದಿಂದ 37 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅನಂತರ ಅತಿ ದೊಡ್ಡ ಪಕ್ಷವಾಗಿ ಸಮಾಜವಾದಿ ಪಕ್ಷ ಹೊರಹೊಮ್ಮಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 29 ಮತ್ತು ತಮಿಳುನಾಡಿನ ಡಿಎಂಕೆ 22 ಸ್ಥಾನಗಳನ್ನು ಗಳಿಸಿದೆ.

ಇದನ್ನೂ ಓದಿ: HD Kumaraswamy: ಎಚ್‌ಡಿ ಕುಮಾರಸ್ವಾಮಿ ಕೇಳಿದ ಕೃಷಿ ಖಾತೆ ಮೇಲೇ ನಿತೀಶ್‌ ಕಣ್ಣು; ಯಾರಿಗೆ ಒಲಿಯತ್ತೆ ಇಲಾಖೆ?


ರಾಷ್ಟ್ರೀಯ ಪಕ್ಷಗಳಿಗೆ ಶೇ. 64ರಷ್ಟು ಸ್ಥಾನ

ಥಿಂಕ್-ಟ್ಯಾಂಕ್ ಪಿ ಆರ್ ಎಸ್ ವಿಶ್ಲೇಷಣೆಯ ಪ್ರಕಾರ, “ರಾಷ್ಟ್ರೀಯ ಪಕ್ಷಗಳು” ಎಂದು ಗುರುತಿಸಲ್ಪಡುವ ರಾಜಕೀಯ ಸಂಘಟನೆಗಳು ಈ ಬಾರಿಯಾ ಚುನಾವಣೆಯಲ್ಲಿ 346 ಅಥವಾ ಶೇ. 64 ಸ್ಥಾನಗಳನ್ನು ಗಳಿಸಿದರೆ, ಪ್ರಾದೇಶಿಕ ಪಕ್ಷಗಳು 197 ಅಥವಾ ಶೇ. 33ರಷ್ಟು ಸ್ಥಾನಗಳನ್ನು ಗೆದ್ದವು. ಎನ್‌ಡಿಎ ಪಕ್ಷಗಳ ಏಳು ಸ್ವತಂತ್ರ ಅಭ್ಯರ್ಥಿಗಳು 17 ಸ್ಥಾನಗಳನ್ನು ಗೆದ್ದಿದ್ದಾರೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆಗಳಲ್ಲಿ 751 ಪಕ್ಷಗಳು ಸ್ಪರ್ಧಿಸಿದ್ದವು. 2009ಕ್ಕಿಂತ ಇದರಲ್ಲಿ 104ರಷ್ಟು ಹೆಚ್ಚಾಗಿದೆ. 368 ಪಕ್ಷಗಳಿಂದ ನಾಮನಿರ್ದೇಶಿತರು ಕಣದಲ್ಲಿದ್ದರು. 2014ರಲ್ಲಿ 464 ಮತ್ತು 2019ರಲ್ಲಿ 677 ಪಕ್ಷಗಳ ಬೆಂಬಲಿಗರು ಕಣದಲ್ಲಿದ್ದರು ಎಂದು ಎಡಿಆರ್ ತಿಳಿಸಿದೆ.

Exit mobile version