Site icon Vistara News

Lok Sabha Election 2024 : ಕಾಂಗ್ರೆಸ್‌ನ 16 ಟಿಕೆಟ್‌ ಫೈನಲ್‌; ಹೆಬ್ಬಾಳ್ಕರ್‌ ಪುತ್ರ, ಜಾರಕಿಹೊಳಿ ಪುತ್ರಿ ಕಣಕ್ಕೆ?

Lok Sabha Election 2024 Mrinal Hebbalkar Priyanka Jarkiholi

ಬೆಂಗಳೂರು: ಮಹತ್ವದ ಲೋಕಸಭಾ ಚುನಾವಣೆಗಾಗಿ (Lok Sabha Election 2024) ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಉದ್ದೇಶದಿಂದ ದಿಲ್ಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಕೇಂದ್ರೀಯ ಚುನಾವಣಾ ಸಮಿತಿ (Central Election Commission) ಸಭೆ ನಡೆದಿದ್ದು, ಇದರಲ್ಲಿ 11 ರಾಜ್ಯಗಳ 80 ಲೋಕಸಭಾ ಕ್ಷೇತ್ರಗಳ ಟಿಕೆಟ್‌ ಬಗ್ಗೆ ಚರ್ಚೆ ನಡೆಯಿತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳ ಟಿಕೆಟ್‌ ಆಗಲೇ ಫೈನಲ್‌ ಆಗಿದ್ದು, ಉಳಿದ 21 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದು ಅಂತಿಮವಾಗಿ 16 ಕ್ಷೇತ್ರಗಳ ಟಿಕೆಟ್‌ ಫೈನಲ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಐದು ಕ್ಷೇತ್ರಗಳನ್ನು ಪೆಂಡಿಂಗ್‌ ಇಡಲಾಗಿದೆ. ಅಚ್ಚರಿ ಎಂದರೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ (DV Sadananda Gowda) ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯ ನಡುವೆಯೇ ಪಕ್ಷವು ಅವರು ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ.

ಈಗ ಅಂತಿಮಗೊಳಿಸಲಾದ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗುವುದಿಲ್ಲ. ಬದಲಾಗಿ ಬುಧವಾರ ಸಂಜೆ ಮತ್ತೊಂದು ಸುತ್ತು ಚರ್ಚೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಲಾಗುತ್ತದೆ ಎನ್ನಲಾಗಿದೆ.

ಯಾವ ರಾಜ್ಯಗಳ ಟಿಕೆಟ್‌ ಬಗ್ಗೆ ಚರ್ಚೆ?

ಮಂಗಳವಾರ ನಡೆದ ಸಭೆಯಲ್ಲಿ ಕರ್ನಾಟಕ, ತೆಲಂಗಾಣ, ಮದ್ಯಪ್ರದೇಶ, ರಾಜ್ಯಸ್ಥಾನ ಛತ್ತೀಸ್ಗಡ್, ಗುಜರಾತ್ ಮಹಾರಾಷ್ಟ್ರ, ಅರುಣಾಚಲ ಪ್ರದೇಶ್, ಚಂಡೀಗಢ್, ಅಂಡಮಾನ್ ನಿಕೋಬಾರ್ ರಾಜ್ಯಗಳ ಲೋಕಸಭಾ ಟಿಕೆಟ್‌ ಮತ್ತು ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯ ವಿಧಾನಸಭಾ ಟಿಕೇಟ್ ಅಂತಿಮಗೊಳಿಸುವ ಯೋಜನೆ ಇತ್ತು.

ಹೆಬ್ಬಾಳ್ಕರ್‌ ಪುತ್ರ, ಜಾರಕಿಹೊಳಿ ಪುತ್ರಿಗೆ ಟಿಕೆಟ್‌?

ರಾಜ್ಯದ 16 ಕ್ಷೇತ್ರಗಳ ಟಿಕೆಟ್‌ ಫೈನಲ್‌ ಆಗಿದೆ ಎನ್ನಲಾಗಿದೆ. ಅದರಲ್ಲಿ ಅತ್ಯಂತ ಪ್ರಮುಖವಾಗಿರುವುದು ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಟಿಕೆಟ್‌. ಬೆಳಗಾವಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ (Mrinal Hebbalkar) ಅವರಿಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಅದೇ ರೀತಿ ಚಿಕ್ಕೋಡಿಯಿಂದ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ (Priyanka Jarakiholi) ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ : DV Sadananda Gowda : ಡಿವಿಎಸ್‌ ಕಾಂಗ್ರೆಸ್‌ ಸೇರ್ಪಡೆಗೆ ಒಕ್ಕಲಿಗರ ಸಂಘ ಬೆಂಬಲ; ಕೈ ತೀರ್ಮಾನ ಏನು?

ಹಾಗಿದ್ದರೆ ಅಂತಿಮವಾದ ಕ್ಷೇತ್ರಗಳು ಯಾವುದು? ಪೆಂಡಿಂಗ್‌ ಯಾವುದು?

1. ಚಿತ್ರದುರ್ಗ – ಬಿ.ಎನ್‌. ಚಂದ್ರಪ್ಪ

2.ಬೆಳಗಾವಿ – ಮೃಣಾಲ್‌ ಹೆಬ್ಬಾಳ್ಕರ್

3.ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ

4.ಬಾಗಲಕೋಟೆ – ಸಂಯುಕ್ತ ಶಿವಾನಂದ ಪಾಟೀಲ್

5.ಹುಬ್ಬಳ್ಳಿ -ಧಾರವಾಡ – ವಿನೋದ್ ಅಸೂಟಿ

6. ದಾವಣಗೆರೆ – ಡಾ ಪ್ರಭಾ ಮಲ್ಲಿಕಾರ್ಜುನ್

7. ಕೊಪ್ಪಳ – ರಾಜಶೇಖರ್ ಹಿಟ್ನಾಳ್

8. ಬೀದರ್ – ರಾಜಶೇಖರ್ ಪಾಟೀಲ್

9. ದಕ್ಷಿಣ ಕನ್ನಡ- ಪದ್ಮರಾಜ್‌

10. ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ

11.ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ

12.ಬೆಂಗಳೂರು ಸೆಂಟ್ರಲ್- ಮನ್ಸೂರ್‌ ಅಲಿಖಾನ್

13.ಬೆಂಗಳೂರು ಉತ್ತರ -ಪ್ರೊ ರಾಜೀವ್ ಗೌಡ

14.ಮೈಸೂರು-ಕೊಡಗು – ಎಂ. ಲಕ್ಷ್ಮಣ್

15. ರಾಯಚೂರು- ಕುಮಾರ್ ನಾಯ್ಕ್

16.ಉತ್ತರ ಕನ್ನಡ -ಅಂಜಲಿ ನಿಂಬಾಳಕರ್

ಪೆಂಡಿಂಗ್‌ ಉಳಿಸಿರುವ ಕ್ಷೇತ್ರಗಳು

1.ಬಳ್ಳಾರಿ
2.ಚಾಮರಾಜನಗರ
3.ಚಿಕ್ಕಬಳ್ಳಾಪುರ
4.ಕೋಲಾರ
5.ಕಲಬುರಗಿ

Exit mobile version