Site icon Vistara News

Lok Sabha Election 2024 : ಕೆ.ಸಿ. ನಾರಾಯಣ ಗೌಡ ಕಾಂಗ್ರೆಸ್‌ ಸೇರ್ಪಡೆ ಖಚಿತ?

Lok Sabha Election 2024 KC Narayanagowda

ಮಂಡ್ಯ: ಲೋಕಸಭೆ ಚುನಾವಣೆಯ (Lok Sabha Election 2024) ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ (Karantaka Politics) ಪಕ್ಷಾಂತರ ಚಟುವಟಿಕೆಗಳು ಗರಿಗೆದರಿವೆ. ಮಂಡ್ಯದಲ್ಲಿ ಇದುವರೆಗೆ ಜೆಡಿಎಸ್‌ ನಾಯಕರ ಪಕ್ಷಾಂತರ ನಡೆಯುತ್ತಿದ್ದರೆ ಈಗ ಬಿಜೆಪಿ ನಾಯಕರ ಸರದಿ ಶುರುವಾಗಿದೆ. ಕೆಆರ್ ಪೇಟೆ ಮಾಜಿ ಶಾಸಕ ಕೆ.ಸಿ. ನಾರಾಯಣ ಗೌಡ (KC Narayana Gowda) ಅವರು ಶೀಘ್ರವೇ ಮರಳಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಾತನ್ನು ಸ್ವತಃ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಚಲುವರಾಯಸ್ವಾಮಿ (Chaluvaraya Swami) ಅವರು ಈ ವಿಷಯವನ್ನು ದೃಢೀಕರಿಸಿದ್ದು, ಕೆ.ಸಿ. ನಾರಾಯಣ ಗೌಡ ಅವರು ಯಾವುದೇ ಕಂಡಿಷನ್ ಇಲ್ಲದೆ ಅವರು ಪಕ್ಷಕ್ಕೆ ಬರ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಸುದ್ದಿಯಲ್ಲಿರುವ ಎಲ್ ಆರ್ ಶಿವರಾಮೇಗೌಡ ಅವರ ಬಗ್ಗೆ ಮಾತನಾಡಿ, ಅವರನ್ನು ನಾನು ಸಂಪರ್ಕಿಸಿಲ್ಲ. ಆದರೆ, ಬೇರೆ ನಾಯಕರು ಸಂಪರ್ಕಿಸಿರಬಹುದು ಎಂದರು. ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಅವರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅಂಬರೀಶ್ ಅವರಿಗೂ ನಮಗೂ ಒಳ್ಳೆ ಸ್ನೇಹ ಇತ್ತು. ಹಾಗಾಗಿ ಅವರು ನಾವು ಒಂದು ಕುಟುಂಬದ ಸದಸ್ಯರ ಹಾಗೆ ಇದ್ದೆವು. ಇವತ್ತಿಗೆ ಅವರ ಜತೆ ರಾಜಕೀಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : Lok Sabha Election 2024: ನನಗೆ ಕ್ಷೇತ್ರ ಪರಿಚಯ ಇಲ್ಲ, ಆದ್ರೆ ಜನರ ಪರಿಚಯ ಇದೆ: ಡಾ.ಸಿ.ಎನ್‌.ಮಂಜುನಾಥ್‌

Lok Sabha Election 2024 : ಏಪ್ರಿಲ್‌ 1ರಂದು ಸ್ಟಾರ್‌‌ ಚಂದ್ರು ನಾಮಪತ್ರ ಸಲ್ಲಿಕೆ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರ ಆರಂಭ ಮಾಡಿ ಒಂದು ತಿಂಗಳೇ ಆಗಿದೆ. ಒಂದು ಹಂತದ ಚುನಾವಣೆ ಪ್ರಚಾರ ಮುಗಿಸಲಾಗಿದೆ. ಎರಡನೇ ಹಂತದಲ್ಲಿ ತಾಲೂಕುವಾರು ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರು ಏಪ್ರಿಲ್ 1ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಮಂಡ್ಯದ ಕಾಳಿಕಾಂಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಚಲುವರಾಯ ಸ್ವಾಮಿ ಹೇಳಿದರು.

ಮಾಜಿ ಸಚಿವ ಸಿ ಎಸ್ ಪುಟ್ಟರಾಜು ನನ್ನ ಸ್ನೇಹಿತ. ಕಳೆದ ಎಂಟು ವರ್ಷಗಳಲ್ಲಿ ಆತನ ಬಗೆಗೆ ನಾನು ಒಮ್ಮೆಯೂ ಮಾತಾಡಿಲ್ಲ. ಆದ್ರೆ ಅವರು ನನ್ನ‌ ಬಗೆಗೆ ಮಾತಾಡಿದ್ದಾರೆ. ಲಘುವಾಗಿಯೂ ಮಾತಾಡಿದ್ದಾರೆ. ಆತ ಸ್ನೇಹಿತ ಆದರೆ ಆತನ ಬಗೆಗೆ ನನಗೆ ಪ್ರೀತಿ ಇಲ್ಲ ಎಂದು ಪುಟ್ಟರಾಜು ಬಗ್ಗೆ ಹೇಳಿದರು ಚಲುವರಾಯ ಸ್ವಾಮಿ.

ʻʻಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ನಮಗೆ ಸುಲಭ ಟಫ್ ಎಂಬುದರ ಬಗೆಗೆ ನಾನು ಮಾತಾಡಲ್ಲ. ಯಾರೇ ಅಭ್ಯರ್ಥಿಯಾದರೂ ನಾವು ಚುನಾವಣೆ ಮಾಡುತ್ತೇವೆ. ನಾವು ಮಾಡಿರುವ ಕೆಲಸದ ಆಧಾರದ ಮೇಲೆ ಚುನಾವಣೆ ಮಾಡುತ್ತೇವೆ. ಒಂದು ತಿಂಗಳಿಂದ ಮೈತ್ರಿ ಅಭ್ಯರ್ಥಿ ಘೋಷಣೆಯಾಗಿಲ್ಲ ಎಂದು ಮಾಧ್ಯಮದವರು ಮಾತಾಡ್ತಾರೆ. ಮಂಡ್ಯದ ಜನರು ಬಹಳ ಬುದ್ಧಿವಂತರಿದ್ದಾರೆ. ತೀರ್ಮಾನ ಮಾಡಲು ಒಂದಲ್ಲ ಹತ್ತು ಬಾರಿ ಯೋಚನೆ ಮಾಡ್ತಾರೆ. ನಾವು ಮಾಡಿರೊ ಕೆಲಸದ ಆಧಾರದ ಮೇಲೆ ನಾವು ಚುನಾವಣೆ ಮಾಡ್ತೀವಿʼʼ ಎಂದು ಚಲುವರಾಯ ಸ್ವಾಮಿ ಹೇಳಿದರು.

Exit mobile version