Site icon Vistara News

Lokayukta Raid: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ MISSING: ನಗರದಲ್ಲೆಲ್ಲ ಪೋಸ್ಟರ್‌ ಅಂಟಿಸಿರುವ ಕಾಂಗ್ರೆಸ್‌

lokayukta-raid-Congress poster about madal virupakshappa

#image_title

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಆರೋಪಕ್ಕೆ ಪುಷ್ಠಿ ನೀಡುವಂತೆ ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣ ಕಾಂಗ್ರೆಸ್‌ ಕೈಗೆ ಸಿಕ್ಕಿದ್ದು, ಬಿಜೆಪಿ ವಿರುದ್ಧ ದಾಳಿ ನಡೆಸುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ.

ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ಮೊದಲನೆ ಆರೋಪಿಯಾಗಿರುವ ಮಾಡಾಳ್‌ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು, ಇನ್ನೂ ಪೊಲೀಸರು ಬಂದನ ಮಾಡಿಲ್ಲ.

ಇದರ ಕುರಿತು ಯುವ ಕಾಂಗ್ರೆಸ್‌ ಪೋಸ್ಟರ್‌ಗಳನ್ನು ಮುದ್ರಿಸಿ ಬೆಂಗಳೂರಿನ ಹಲವೆಡೆ ಅಂಟಿಸಿದೆ. ಮಾಡಾಳ್‌ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ. ಅವರ ಎತ್ತ, ವಯಸ್ಸಿನ ಮಾಹಿತಿ ಜತೆಗೆ, ಕೊನೆಯದಾಗಿ ಕಾಣಿಸಿಕೊಂಡಿದ್ದು ಸಿಎಂ ಕಚೇರಿ ಎಂದು ನಮೂದಿಸಲಾಗಿದೆ.

ಲೋಕಾಯುಕ್ತ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊದಲನೆ ಆರೋಪಿಯನ್ನು ದಯಮಾಡಿ ಹುಡುಕಿಕೊಡಿ; ಅಸಮರ್ಥ 40% ಸರ್ಕಾರ ಎಂದು ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ.

Exit mobile version