ಸುಲ್ತಾನ್‌ಪುರ: ನಾನು ಬಿಜೆಪಿಯಲ್ಲಿ (bjp) ಇದ್ದೇನೆ ಎಂಬುದೇ ನನಗೆ ಬಹಳ ಸಂತೋಷ. ಸುಲ್ತಾನ್‌ಪುರದ (Sultanpur) ಟಿಕೆಟ್ ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವ (central home minister) ಅಮಿತ್ ಶಾ (amit shah), ಪ್ರಧಾನಿ (pm) ನರೇಂದ್ರ ಮೋದಿ (narendra modi) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (BJP National President) ಜೆ.ಪಿ. ನಡ್ಡಾ (j.p. nadda) ಅವರಿಗೆ ಧನ್ಯವಾದಗಳು ಎಂದು ಸಂಸದೆ (mp) ಮೇನಕಾ ಗಾಂಧಿ (Maneka Gandhi) ಹೇಳಿದರು.
ಪುತ್ರ, ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ಅವರಿಗೆ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಬಳಿಕ ಉತ್ತರ ಪ್ರದೇಶದ (uttarpradesh) ಸುಲ್ತಾನ್‌ಪುರಕ್ಕೆ ಆಗಮಿಸಿದ ಅವರು ಈ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ವರುಣ್ ಗಾಂಧಿ ಮುಂದೇನು ಮಾಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇನಕಾ ಗಾಂಧಿ, ವರುಣ್ ಏನು ಮಾಡುತ್ತಾರೆ ಎಂಬುದನ್ನು ಅವರನ್ನೇ ಕೇಳಿ. ಚುನಾವಣೆಯ ಅನಂತರ ನಾವು ಇದನ್ನು ಪರಿಗಣಿಸುತ್ತೇವೆ. ಇದಕ್ಕೆ ಇನ್ನೂ ಸಮಯವಿದೆ ಎಂದರು.
ನಾನು ಎಲ್ಲಿ ಕಣಕ್ಕೆ ಇಳಿಯಬೇಕು ಎನ್ನುವ ಸಂದಿಗ್ಧತೆ ಉಂಟಾಗಿತ್ತು. ಟಿಕೆಟ್ ಬಹಳ ತಡವಾಗಿ ಘೋಷಿಸಲಾಯಿತು. ಪಕ್ಷವು ಈಗ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.
ಸುಲ್ತಾನ್‌ಪುರಕ್ಕೆ ಹಿಂತಿರುಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಏಕೆಂದರೆ ಈ ಸ್ಥಳವು ಒಮ್ಮೆ ಗೆದ್ದವರು ಮತ್ತೆ ಅಧಿಕಾರಕ್ಕೆ ಬರದ ಇತಿಹಾಸವನ್ನು ಹೊಂದಿದೆ ಎಂದರು.
ಮೊದಲ ಬಾರಿಗೆ ಸುಲ್ತಾನ್‌ಪುರಕ್ಕೆ ಭೇಟಿ
ಲೋಕಸಭಾ ಟಿಕೆಟ್ ಘೋಷಣೆಯ ಬಳಿಕ ಮೊದಲ ಬಾರಿಗೆ ಪಿಲಿಭಿತ್ ಅಥವಾ ಸುಲ್ತಾನ್‌ಪುರಕ್ಕೆ ಆಗಮಿಸಿದ ಅವರು, ಜಿಲ್ಲೆಯಲ್ಲಿ 10 ದಿನಗಳ ಉಳಿದು ಇಡೀ ಲೋಕಸಭಾ ಕ್ಷೇತ್ರದ 101 ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ಕಟ್ಕಾ ಗುಪ್ತರಗಂಜ್, ತತಿಯಾನಗರ, ತೆಧುಯಿ, ಗೋಲಾಘಾಟ್, ಶಹಗಂಜ್ ಚೌಕ್, ದರಿಯಾಪುರ ತಿರಾಹಾ ಮತ್ತು ಪಯಾಗಿಪುರ ಚೌಕ್‌ದಂತಹ ವಿವಿಧ ಸ್ಥಳಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆತ್ಮೀಯ ಸ್ವಾಗತವನ್ನು ನೀಡಿದರು.
ಸುಲ್ತಾನ್‌ಪುರದಲ್ಲಿ ಅವರು ಬಿಜೆಪಿಯ ಮೂಲಪುರುಷರಾದ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪ್ರತಿಮೆಗಳಿಗೆ ಗೌರವ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಆರ್.ಎ. ವರ್ಮಾ, ಬಿಜೆಪಿ ರಾಜ್ಯ ಸಚಿವೆ ಮೀನಾ ಚೌಬೆ, ಲೋಕಸಭೆ ಉಸ್ತುವಾರಿ ದುರ್ಗೇಶ್ ತ್ರಿಪಾಠಿ, ಲೋಕಸಭೆಯ ಸಂಚಾಲಕ ಜಗಜಿತ್ ಸಿಂಗ್ ಚಾಂಗು, ಶಾಸಕ ರಾಜ್ ಪ್ರಸಾದ್ ಉಪಾಧ್ಯಾಯ, ಶಾಸಕ ರಾಜೇಶ್ ಗೌತಮ್, ವಕ್ತಾರ ವಿಜಯ ರಘುವಂಶಿ ಉಪಸ್ಥಿತರಿದ್ದರು.
ಇದನ್ನು ಓದಿ: Lok Sabha Election 2024: ಇಂದು ರಾಜ್ಯದಲ್ಲಿ ಅಮಿತ್ ಶಾ ಬಿರುಗಾಳಿ ಪ್ರಚಾರ; ಸುಮಲತಾ ಮನ ಒಲಿಸ್ತಾರ?
ವರುಣ್ ಗಾಂಧಿ ಪತ್ರ
ಮೇನಕಾ ಗಾಂಧಿ ಅವರಿಗೆ ಟಿಕೆಟ್ ಘೋಷಣೆಯಾಗುವ ಮೊದಲು ವರುಣ್ ಗಾಂಧಿ ತಮ್ಮ ಕ್ಷೇತ್ರದ ಜನತೆಗೆ ಮನದಾಳದ ಪತ್ರ ಬರೆದಿದ್ದು, ಉತ್ತರ ಪ್ರದೇಶದ ಪಿಲಿಭಿತ್ ಜೊತೆಗಿನ ಸಂಬಂಧ ತನ್ನ ಕೊನೆಯ ಉಸಿರು ಇರುವವರೆಗೂ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ವರುಣ್ ಗಾಂಧಿ ಅವರು ಈ ಪ್ರದೇಶಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದರು. ಅದು ತನ್ನ ಕರ್ಮ ಭೂಮಿ ಮಾತ್ರವಲ್ಲ ತನ್ನ ಜೀವನದ ಪ್ರಯಾಣದ ಅವಿಭಾಜ್ಯ ಅಂಶ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಟಿಕೆಟ್ ಸಿಗದ ಇದ್ದರೂ ಸಮುದಾಯದ ಸೇವೆಯನ್ನು ಮುಂದುವರಿಸುವುದಾಗಿ ಪಣ ತೊಟ್ಟಿರುವ ವರುಣ್ ಗಾಂಧಿ, ಸಂಸದನಾಗಿ ಇಲ್ಲದಿದ್ದರೆ, ಮಗನಾಗಿ, ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ ಮತ್ತು ಮೊದಲಿನಂತೆ ನನ್ನ ಮನೆಯ ಬಾಗಿಲು ಯಾವಾಗಲೂ ನಿಮಗಾಗಿ ತೆರೆದಿರುತ್ತದೆ ಎಂದು ಹೇಳಿದ್ದಾರೆ.
ತಾಯಿ- ಮಗನ ಕ್ಷೇತ್ರ
ಪಿಲಿಭಿತ್ ಕ್ಷೇತ್ರವು 1996ರಿಂದ ಮೇನಕಾ ಗಾಂಧಿ ಅಥವಾ ಅವರ ಮಗ ವರುಣ್ ಗಾಂಧಿಯವರ ಬಳಿ ಉಳಿದಿತ್ತು. ವರುಣ್ ಗಾಂಧಿ ಅವರು 2009 ಮತ್ತು 2019ರಲ್ಲಿ ಇಲ್ಲಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು.