ಲಕ್ನೋ: ಬಹುಜನ ಸಮಾಜ ಪಾರ್ಟಿ (Bahujan Samaj Party)ಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕಿ ಮಾಯಾವತಿ (Mayawati) ಮರು ಆಯ್ಕೆಯಾಗಿದ್ದಾರೆ. ಬಿಎಸ್‌ಪಿ ಕೇಂದ್ರ ಕಾರ್ಯಕಾರಿ ಸಮಿತಿ (Central Executive Committee), ರಾಷ್ಟ್ರೀಯ ಮಟ್ಟದ ಹಿರಿಯ ಪದಾಧಿಕಾರಿಗಳು, ರಾಜ್ಯ ಪಕ್ಷದ ಘಟಕಗಳು ಮತ್ತು ದೇಶಾದ್ಯಂತ ಆಯ್ಕೆಯಾದ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
68 ವರ್ಷದ ಮಾಯಾವತಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಎರಡು ದಶಕಗಳ ಹಿಂದೆ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.
1. मुझे (कु. मायावती जी को) आज एक बार फिर सर्वसम्मति से बहुजन समाज पार्टी (बीएसपी) का राष्ट्रीय अध्यक्ष चुने जाने पर सभी लोगों का हार्दिक आभार तथा इसके लिए मुझे देश के कोने-कोने से बधाई देने वाले सभी लोगों का भी मैं दिल से शुक्रिया अदा करती हूँ।
— Mayawati (@Mayawati) August 27, 2024
ಮಾಯಾವತಿ ಹೇಳಿದ್ದೇನು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮಾಯಾವತಿ ಅವರು, “ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ನನ್ನ ಅನುಪಸ್ಥಿತಿಯಲ್ಲಿ ಅಥವಾ ತೀವ್ರ ಅನಾರೋಗ್ಯದ ಸಮಯದಲ್ಲಿ ಪಕ್ಷವು ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ಉತ್ತರಾಧಿಕಾರಿಯಾಗಿ ನೇಮಿಸಿದಾಗ ಜಾತಿವಾದಿ ಮಾಧ್ಯಮಗಳು ಜನರು ಜಾಗರೂಕರಾಗಿರಬೇಕು ಎಂಬ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ” ಎಂದು ಕಿಡಿಕಾರಿದ್ದಾರೆ.
2.उल्लेखनीय है कि बीएसपी के जन्मदाता व संस्थापक मान्य. श्री कांशीराम जी ने 15 दिसम्बर 2001 को सार्वजनिक तौर पर मुझे बीएसपी पार्टी व मूवमेन्ट का उत्तराधिकारी घोषित किया था और उनकी बीमारी के कारण 18 सितम्बर 2003 को पहली बार मैंने बीएसपी के राष्ट्रीय अध्यक्ष पद की जिम्मेदारी संभाली।
— Mayawati (@Mayawati) August 27, 2024
“ನಾನು ಮತ್ತೊಮ್ಮೆ ಬಹುಜನ ಸಮಾಜ ಪಕ್ಷ (BSP)ದ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದೇನೆ ಮತ್ತು ಇದಕ್ಕಾಗಿ ಅಭಿನಂದನೆ ಸಲ್ಲಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದವರ ಮಾನವೀಯ ಧ್ಯೇಯವನ್ನು ಮುನ್ನಡೆಸಲು ಯಾವುದೇ ತ್ಯಾಗ ಮಾಡಲು ಸಿದ್ಧ ಎಂದು ಮಾಯಾವತಿ ಅವರು ಪಕ್ಷದ ಅನುಯಾಯಿಗಳಿಗೆ ಭರವಸೆ ನೀದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆಯಷ್ಟೇ ಮಾಯಾವತಿ ಅವರು ಸಾಮಾಜಿಕ ಜಾಲತಾಣ ತಾಣದಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ಯಾರಿವರು ಆಕಾಶ್ ಆನಂದ್?
ಬಿಎಸ್‌ಪಿಯ ಉತ್ತರಾಧಿಕಾರಿಯಾಗಿ ಕೆಲವು ದಿನಗಳ ಹಿಂದೆ ಆಯ್ಕೆಯಾದ ಆಕಾಶ್ ಆನಂದ್ ತಮ್ಮ 22ನೇ ವಯಸ್ಸಿನಲ್ಲಿ 2017ರಲ್ಲಿ ರಾಜಕಾರಣವನ್ನು ಪ್ರವೇಶಿಸಿದ್ದರು. ಲಂಡನ್‌ನಲ್ಲಿ ಓದಿರುವ ಆಕಾಶ್ ಎಂಬಿಎ ಪದವೀಧರರು. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ಅವರ ರಾಜಕೀಯ ಚೊಚ್ಚಲ ಪ್ರವೇಶವಾಗಿತ್ತು, ಅಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ, ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಬಿಎಸ್‌ಪಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ಪಾದಯಾತ್ರೆ ಸಂಘಟಿಸಿದ್ದ ಆಕಾಶ್ ಆನಂದ್
ಸಾಮಾನ್ಯವಾಗಿ ಬಹುಜನ ಸಮಾಜ ಪಾರ್ಟಿಯ ಪಾದಯಾತ್ರೆಗಳಂಥ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೆ ಆಕಾಶ್ ಆನಂದ್ ಅವರು ಈ ಪದ್ಧತಿಯನ್ನು ಮುರಿದು ಇದೇ ಮೊದಲ ಬಾರಿಗೆ, 14 ದಿನಗಳ ಸರ್ವಜನ ಹಿತಾಯ, ಸರ್ವಜನ ಸುಖಾಯ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಈ ಯಾತ್ರೆ ನಡೆಸಿದ್ದರು.
ಇದನ್ನೂ ಓದಿ: Asad Encounter: ಅಸಾದ್ ಅಹ್ಮದ್ ಎನ್ಕೌಂಟರ್ ನಕಲಿ ಎಂದ ಅಖಿಲೇಶ್ ಯಾದವ್; ತನಿಖೆಯಾಗಲಿ ಎಂದ ಮಾಯಾವತಿ