ಬೆಂಗಳೂರು: ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯನವರು (CM Siddaramaiah) ಕಾಂಗ್ರೆಸ್‌ನ 136 ಜನ ಶಾಸಕರನ್ನು ಕರೆದುಕೊಂಡು ಹೋಗಿ ಅಲ್ಲೇ ಕಾಫಿ ಕುಡಿದು ಚೆನ್ನೈನಲ್ಲಿ ಡಿಎಂಕೆ ಕಚೇರಿ (DMK Office) ಮುಂದೆ ‘ನಮ್ಮ ನೀರು ನಮ್ಮ ಹಕ್ಕು’ (Namma Neeru Namma Hakku) ಘೋಷಣೆಯೊಂದಿಗೆ ಹೋರಾಟ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (BJP Leader R Ashok) ಅವರು ಸಲಹೆ ನೀಡಿದ್ದಾರೆ. ಡಿಎಂಕೆ ಪಕ್ಷವು ಮೇಕೆದಾಟು ಯೋಜನೆಯನ್ನು (Mekedatu Project) ತಡೆಯುವುದಾಗಿ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ (DMK Election Manifesto) ಘೋಷಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಹಣ ನಮ್ಮ ಹಕ್ಕು ಎಂದು ಘೋಷಣೆಯೊಂದಿಗೆ ದೆಹಲಿಯಲ್ಲಿ 136 ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದ್ದರು. ಅದೇ ಮಾದರಿಯಲ್ಲಿ ಚೆನ್ನೈನಲ್ಲಿ ಹೋರಾಟ ಮಾಡುವಂತೆ ಸಲಹೆ ಕೊಟ್ಟರು.
ಇದನ್ನೂ ಓದಿ : Mekedatu project: ನಾನು ಜಲ ಸಂಪನ್ಮೂಲ ಖಾತೆ ಪಡೆದಿದ್ದು ಏಕೆ? ಸಕಾರಣ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯದ ಹಿತ ಮುಖ್ಯವೇ ಅಥವಾ INDI ಮೈತ್ರಿ ಮುಖ್ಯವೇ ಎಂಬ ಪರ್ವ ಕಾಲದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ ಎಂದು ತಿಳಿಸಿದರು. ರಾಜ್ಯದ ಜನತೆ ನಿಮ್ಮನ್ನು ನಂಬಬೇಕಿದ್ದರೆ, ನುಡಿದಂತೆ ನಡೆಯುವವರು ಎಂದು ತೋರಿಸುವುದಾದರೆ ಮೈತ್ರಿ ಮುಖ್ಯವೇ ರಾಜ್ಯದ ಹಿತ ಮುಖ್ಯವೇ ಎಂದು ತೀರ್ಮಾನ ಮಾಡಿ ಎಂದು ಆರ್. ಅಶೋಕ್ ಆಗ್ರಹಿಸಿದರು.
ಹಿಂದೆ ಮಹಾದಾಯಿ ಸಂಬಂಧ ಗೋವಾದಲ್ಲಿ ಸೋನಿಯಾ ಗಾಂಧಿಯವರು ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಡಿಎಂಕೆ ಮುಖಾಂತರ ಈ ಮಾತನ್ನಾಡಿಸಿದ್ದಾರೆ ಎಂದು ಆಕ್ಷೇಪ ಸೂಚಿಸಿದರು.
Mekedatu Project: ಒಳ್ಳೆಯ ಸಲಹೆ ಕೊಟ್ಟಿದ್ದೇನೆ, ತೆಗೆದುಕೊಳ್ಳಿ ನೋಡೋಣ
ವಿಪಕ್ಷದ ನಾಯಕರು ರಾಜ್ಯದ ಹಿತದೃಷ್ಟಿಯಿಂದ ಸಲಹೆ ನೀಡಿದರೆ ನಾನು ಅದನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ನಾನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರಿಗೆ ಒಳ್ಳೆಯ ಸಲಹೆ ನೀಡುತ್ತೇನೆ ಎಂದು ತಿಳಿಸಿದರು. ಇವರಲ್ಲಿ ಯಾರು ಫಸ್ಟ್ ಯಾರು ಸೆಕೆಂಡ್ ಎಂಬ ಗೊಂದಲದಲ್ಲಿ ನಾನಿದ್ದೇನೆ. ಯಾವಾಗ ಯಾರು ಸಿಎಂ ಎಂದೇ ಗೊತ್ತಾಗುವುದಿಲ್ಲ. ಸಿಎಂ, ಸೂಪರ್ ಸಿಎಂ, ಭಾವಿ ಸಿಎಂ, ಶ್ಯಾಡೋ ಸಿಎಂ ಇರುವುದಾಗಿ ಪ್ರಧಾನಿಯವರೇ ಹೇಳಿದ್ದಾರೆ ಎಂದು ಆರ್. ಅಶೋಕ್ ಗಮನ ಸೆಳೆದರು.
ಕರ್ನಾಟಕದಲ್ಲಿ ವೀಕ್ ಸಿಎಂ ಇದ್ದಾರೆ; ವೀಕ್ ಗವರ್ನಮೆಂಟ್ ಇದೆ ಎಂದ ಅವರು, ಈ ದೌರ್ಬಲ್ಯವನ್ನು ಉಪಯೋಗಿಸಿ ಇಂಡಿ ಒಕ್ಕೂಟದ ಮುಖ್ಯ ಪಾಲುದಾರ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ (Mekedatu project) ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿದೆ ಎಂದು ಆಕ್ಷೇಪಿಸಿದರು.
ಕರ್ನಾಟಕಕ್ಕೆ ಮಹಾದಾಯಿಯ ಹನಿ ನೀರೂ ಸಹ ಸೇರಲು ಬಿಡುವುದಿಲ್ಲ ಎಂದು @INCIndia ದ ಸೋನಿಯಾ ಗಾಂಧಿ ಹೇಳಿದ್ದರು.
— BJP Karnataka (@BJP4Karnataka) March 21, 2024
ಮೇಕೆದಾಟುವಿನಲ್ಲಿ ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಿಸಲು ಬಿಡುವುದಿಲ್ಲ ಎಂದು I-N-D-I ಮೈತ್ರಿಕೂಟದ ಪ್ರಮುಖ @mkstalin ಹೇಳಿದ್ದಾರೆ.
ಸಿಎಂ @siddaramaiah ಅವರೇ, ಡಿಸಿಎಂ @DKShivakumar ಅವರೇ, ಹೆಚ್ಚಿನ ಸೀಟಿಗಾಗಿ… pic.twitter.com/comygqVjBF
ಸ್ಟಾಲಿನ್-ಡಿಕೆಶಿ ಜತೆಗಿರುವ ಫೋಟೊ ಪ್ರದರ್ಶಿಸಿ ಗೇಲಿ
ಇದು ಹೇಳಿಕೆಯಲ್ಲ; ಇದು ಪ್ರಣಾಳಿಕೆಯಲ್ಲಿರುವ ವಿಚಾರ ಎಂದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯಡಿ ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಮಾಡಿದ್ದರು. ಇದು ಬಹಳ ಗಂಭೀರ ವಿಚಾರ; ಪ್ರಾಣ ತ್ಯಾಗ ಮಾಡಿಯಾದರೂ ಈ ಯೋಜನೆ ಮಾಡುವುದಾಗಿ ತಿಳಿಸಿದ್ದರು. ಈಗ ಅವರದೇ ಕ್ಲೋಸ್ ಫ್ರೆಂಡ್, ನಿಯರೆಸ್ಟ್ ಆಂಡ್ ಡಿಯರೆಸ್ಟ್ ಫ್ರೆಂಡ್ ಸ್ಟಾಲಿನ್ ಈ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದ ವ್ಯಂಗ್ಯವಾಡಿದರು. ಇದೇವೇಳೆ ಅವರು ಶಿವಕುಮಾರ್- ಸ್ಟಾಲಿನ್, ಸಿದ್ದರಾಮಯ್ಯ- ಸ್ಟಾಲಿನ್ ಜೊತೆಗಿರುವ ಭಾವಚಿತ್ರಗಳನ್ನೂ ಪ್ರದರ್ಶಿಸಿದರು.
ಏನಿಲ್ಲ ಏನಿಲ್ಲ- ಬೆಂಗಳೂರಿನಲಿ ನೀರಿಲ್ಲ ಎಂಬ ಸ್ಥಿತಿ ಬಂದಿದೆ ಎಂದ ಅಶೋಕ್
ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ (Mekedatu project) ವೇಳೆ ಅಲ್ಲಿ ಸ್ನಾನ ಮಾಡಿದ್ದರು ಎಂದು ಫೋಟೊ ಪ್ರದರ್ಶಿಸಿದ ಅವರು, ಈಗ ಬೆಂಗಳೂರಿನಲ್ಲಿ ಸ್ನಾನಕ್ಕಲ್ಲ; ಮುಖ ತೊಳೆದುಕೊಳ್ಳಲೂ ನೀರಿಲ್ಲ. ನೀರಿನ ಕೊರತೆ ಪರಿಣಾಮವಾಗಿ ಬೆಂಗಳೂರಿನ ಜನರು ಗುಳೆ ಹೋಗುತ್ತಿದ್ದಾರೆ. ನಾನು ಬೆಂಗಳೂರಿನ ಒಬ್ಬ ನಿವಾಸಿ. ಕಳೆದ 50 ವರ್ಷಗಳಿಂದ ನೋಡುತ್ತಿದ್ದೇನೆ. ಯಾವತ್ತೂ ಈ ರೀತಿ ಆಗಿಲ್ಲ. ಏನಿಲ್ಲ ಏನಿಲ್ಲ- ನೀರಿಲ್ಲ ನೀರಿಲ್ಲ ಎಂಬ ಸ್ಥಿತಿ ಬೆಂಗಳೂರಿನದು. ಜನರು ಗುಳೆ ಹೋಗುತ್ತಿದ್ದಾರೆ ಎಂದು ಆರ್.ಅಶೋಕ ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯ ವಕ್ತಾರರಾದ ಪ್ರಕಾಶ್ ಶೇಷ ರಾಘವಾಚಾರ್, ಅಶೋಕ್ ಗೌಡ ಅವರು ಉಪಸ್ಥಿತರಿದ್ದರು.
ಇಂಡಿ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಪಕ್ಷ ಮೇಕೆದಾಟು ಡ್ಯಾಮ್ ನಿರ್ಮಿಸಲು ಬಿಡುವುದಿಲ್ಲಎಂದು ಘೋಷಿಸಿದೆ.
— BJP Karnataka (@BJP4Karnataka) March 21, 2024
ತೆರಿಗೆ ಹಕ್ಕಿಗಾಗಿ ದೆಹಲಿ ಯಾತ್ರೆ ಮಾಡಿದ್ದ ಕಾಂಗ್ರೆಸ್ಸಿಗರು ಈಗ ಮೇಕೆದಾಟು ಕುರಿತಾದ ಡಿಎಂಕೆ ನಿಲುವು ವಿರೋಧಿಸಿ ತಮಿಳುನಾಡಿಗೆ ಯಾತ್ರೆ ಮಾಡಲಿ.
– ಶ್ರೀ @RAshokaBJP, ಪ್ರತಿಪಕ್ಷ ನಾಯಕರು#NammaKaveriNammaHakku pic.twitter.com/7TfE2MxvWS