Site icon Vistara News

MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಜೆಡಿಎಸ್ ರಣತಂತ್ರ, ಉಸ್ತುವಾರಿಗಳ ನೇಮಕ

AP Ranganath JDS

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ (MLC Election) ಕಣ ರಂಗೇರುತ್ತಿದೆ. ಎನ್‌ಡಿಎ ಮೈತ್ರಿಕೂಟದ ಬೆಂಗಳೂರು ಶಿಕ್ಷಕರ ಕ್ಷೇತ್ರದ (Bangalore Teachers Constituency Election) ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಅವರು ಕಣಕ್ಕೆ ಇಳಿದಿದ್ದು, ಜೆಡಿಎಸ್ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಪ್ರಕಟಣೆ ಹೊರಡಿಸಿದ್ದಾರೆ.

ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರನ್ನು ಮೇಲುಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ನಿಟ್ಟಿನಲ್ಲಿ ಫೆ. 16ರಂದು ನಡೆಯುವ ಚುನಾವಣೆಗೆ ಸಾಕಷ್ಟು ತಯಾರಿಯನ್ನು ಜೆಡಿಎಸ್‌ ಮಾಡಿಕೊಳ್ಳುತ್ತಿದೆ. ಶತಾಯಗತಾಯ ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್‌ ಸೇರಿ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿಯ ಸುರೇಶ್‌ ಕುಮಾರ್‌ ವಿರುದ್ಧ ಸೋಲು ಕಂಡಿದ್ದರು. ಈಗ ಈ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಲಿದ್ದು, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಸ್ಪರ್ಧೆ ಮಾಡುತ್ತಿದ್ದಾರೆ. ಅದೇ ಕಾಂಗ್ರೆಸ್‌ನಿಂದ ಪುಟ್ಟಣ್ಣ ಕಣಕ್ಕಿಳಿಯಲಿದ್ದಾರೆ.

ಈಗ ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿರುವುದರಿಂದ ಎರಡೂ ಪಕ್ಷಗಳ ಮತಗಳು ಕ್ರೋಢೀಕರಣವಾಗಲಿದೆ. ಇದರಿಂದ ಗೆಲುವು ಸುಲಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್‌ ಇದೆ. ಈ ನಿಟ್ಟಿನಲ್ಲಿ ಉಸ್ತುವಾರಿಗಳನ್ನು ನೇಮಕ ಮಾಡಿ ಜವಾಬ್ದಾರಿಗಳನ್ನು ನೀಡಲಾಗಿದೆ.

ಇದನ್ನೂ ಓದಿ: BDA Site: ಬಿಡಿಎ ಎಡವಟ್ಟಿಗೆ 700 ಸೈಟ್‌ ಅತಂತ್ರ! ಮುಚ್ಚಲಾಗುತ್ತಾ ಕೆಂಪೇಗೌಡ ಲೇಔಟ್‌?

ಉಸ್ತುವಾರಿಗಳ ಪಟ್ಟಿ ಹೀಗಿದೆ

ಯಲಹಂಕ: ಎನ್.ಕೃಷ್ಣಪ್ಪ, ಎ.ಎಂ.ಪ್ರವೀಣ್ ಕುಮಾರ್
ಕೆ.ಆರ್. ಪುರ: ಡಿ. ಎ.ಸುರೇಶ್, ಸತೀಶ್
ಬ್ಯಾಟರಾಯನಪುರ: ಎನ್.ವೇಣುಗೋಪಾಲ್, *ಅಂಜನೇಗೌಡ, ಟಿ.ಎನ್.ಹರೀಶ್ ಕುಮಾರ್
ಯಶವಂತಪುರ: ಜವರಾಯಿಗೌಡ, ತಾರಾ ಲೋಕೇಶ್, ಜಿ.ಟಿ. ವೆಂಕಟೇಶ್
ರಾಜರಾಜೇಶ್ವರಿ ನಗರ: ಆರ್. ಚನ್ನಕೇಶವ ಮೂರ್ತಿ, ವಿ.ಕೃಷ್ಣಮೂರ್ತಿ
ದಾಸರಹಳ್ಳಿ: ಬಿ. ಅಂದಾನಪ್ಪ, ಎಂ. ಮುನಿಸ್ವಾಮಿ
ಮಹಾಲಕ್ಷ್ಮಿ ಲೇಔಟ್: ಎಂ. ಚಂದ್ರೇಗೌಡ, ಬಿ. ಭಡ್ರೆಗೌಡ, ಎಚ್.ಎನ್. ದೇವರಾಜು
ಮಲ್ಲೇಶ್ವರಂ: ಉತ್ಕರ್ಷ, ಶೈಲಾ, ಎನ್. ಚಂದ್ರಶೇಖರ್
ಹೆಬ್ಬಾಳ: ಎ.ರುದ್ರಪ್ಪ, ಸೈಯ್ಯದ್ ಮೋಹಿದ್ ಅಲ್ತಾಫ್
ಪುಲಕೇಶಿನಗರ: ಆಫ್ರೋಜ್ ಬೇಗ್, ಅನುರಾಧ
ಸರ್ವಜ್ಞನಗರ: ತಾಯಣ್ಣ ರೆಡ್ಡಿ, ಜಿ.ಮೋಹನ್ ಕುಮಾರ್
ಸರ್ ಸಿವಿ ರಾಮನ್ ನಗರ: ಪ್ರಶಾಂತಿ ಗಾಂವ್ಕರ್, ಪಿ.ಮಹೇಶ್
ಶಿವಾಜಿನಗರ: ಆರ್. ಸೋಮೇಶ್ವರನ್, ಬಾಲಕೃಷ್ಣ
ಶಾಂತಿನಗರ: ಎಚ್. ಮಂಜುನಾಥ್ ಗೌಡ, ವರ್ಸಲಿನ್ ವಿಕ್ಟೋರಿಯಾ
ಗಾಂಧಿನಗರ: ವಿ.ನಾರಾಯಣಸ್ವಾಮಿ, ಎನ್.ಎ. ಷಣ್ಮುಗಂ
ರಾಜಾಜಿನಗರ: ಎಂ.ಆರ್. ಶಶಿಕುಮಾರ್, ಬಿ.ಎಲ್. ತಿಮ್ಮೇಗೌಡ, ಗಂಗಾಧರ ಮೂರ್ತಿ
ಗೋವಿಂದರಾಜ ನಗರ: ಆರ್. ಪ್ರಕಾಶ್, ಎ. ನಾಗೇಂದ್ರ ಪ್ರಸಾದ್
ವಿಜಯನಗರ: ಕೆ.ವಿ. ಶ್ರೀನಿವಾಸ್, ಕನ್ಯಾಕುಮಾರಿ, ಫಣಿರಾಜ್ ಹಿರಿಯಣ್ಣ ಗೌಡ
ಚಾಮರಾಜಪೇಟೆ: ಗೋವಿಂದರಾಜು, ಡೇವಿಡ್
ಚಿಕ್ಕಪೇಟೆ: ನಂದಕುಮಾರ್, ಡಾ.ಎಂ. ಸಿರಾಜ್ ಅಹಮದ್
ಬಸವನಗುಡಿ: ಎಂ.ರಾಜು, ಟಿ. ತಿಮ್ಮೇಗೌಡ
ಪದ್ಮನಾಭನಗರ: ಕೆ.ಮಂಜು, ಎಂ.ಕೆ. ಹರಿಬಾಬು
ಬಿಟಿಎಂ ಲೇಔಟ್: ಟಿ.ಆರ್. ತುಳಸೀ ರಾಮ್, ಕೆ.ಜೆ. ರಮೇಶ್
ಜಯನಗರ: ವಿ. ಜನಾರ್ದನ, ನಿಡಕಲ್ ಅಶೋಕ್ ಕುಮಾರ್
ಮಹದೇವಪುರ: ಎಂ. ಮುನಿವೆಂಕಟಪ್ಪ, ಪಿ. ಮುನಿರಾಜು
ಬೊಮ್ಮನಹಳ್ಳಿ: ಬಿ.ಎಸ್. ಗಣೇಶ್
ಬೆಂಗಳೂರು ದಕ್ಷಿಣ: ಗೊಟ್ಟಿಗೆರೆ ಮಂಜುನಾಥ್, ಕಮ್ಮನಹಳ್ಳಿ ಅನಂತ ಗೌಡ
ಆನೇಕಲ್: ಗೊಟ್ಟಿಗೆರೆ ಮಂಜುನಾಥ್, ಎಚ್.ಸಿ. ದೇವೇಗೌಡ
ಹೊಸಕೋಟೆ: ಶ್ರೀಧರ್
ದೇವನಹಳ್ಳಿ: ನಿಸರ್ಗ ನಾರಾಯಣಸ್ವಾಮಿ
ದೊಡ್ಡಬಳ್ಳಾಪುರ: ಮುನೇಗೌಡ
ನೆಲಮಂಗಲ: ಡಾ.ಕೆ.ಶ್ರೀನಿವಾಸ ಮೂರ್ತಿ
ಮಾಗಡಿ: ಎ. ಮಂಜುನಾಥ್, ಪೊಲೀಸ್ ರಾಮಣ್ಣ
ರಾಮನಗರ: ರಾಜಶೇಖರ್
ಕನಕಪುರ: ನಾಗರಾಜ್
ಚನ್ನಪಟ್ಟಣ: ಜಯಮುತ್ತು

Exit mobile version