Site icon Vistara News

Molasses Scam: ಕಾಕಂಬಿ ಹಗರಣ ಆರೋಪದ ಕುರಿತು ಸಿಎಂ ಬೊಮ್ಮಾಯಿ, ಅಬಕಾರಿ ಸಚಿವ ಗೋಪಾಲಯ್ಯ ಪ್ರತಿಕ್ರಿಯೆ

#image_title

ಬೆಂಗಳೂರು: ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ತನಿಖೆಗೆ ನಾವು ಸಿದ್ದ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಿದ್ಧಾಪುರ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿರುವ ಬಗ್ಗೆ ವಿವರ ಪ್ರತಿಕ್ರಿಯೆ ನೀಡಿ ವಿವರಗಳನ್ನು ನೀಡಲಿ. ಯಾವುದೇ ವಿವರಗಳನ್ನು ನೀಡದೇ ಆರೋಪ ಮಾಡಿದರೆ ಪ್ರಯೋಜನವಿಲ್ಲ. ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿ, ಅವರ ಬಗ್ಗೆಯೇ ಸಾಕಷ್ಟು ಆರೋಪಗಳಿವೆ. ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ವಿವರಗಳನ್ನು ನೀಡಲಿ. ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದರು.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕಾಕಂಬಿ ರಫ್ತಿಗೆ ಅವಕಾಶ ಕೊಡೋ ಮೂಲಕ‌ ಅಬಕಾರಿ ಇಲಾಖೆಯಲ್ಲಿ 200 ಕೋಟಿ ಅಕ್ರಮ ಆರೋಪ ಪ್ರಕರಣ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪಗಳು ಸುಳ್ಳು. ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ. ಹೀಗಾಗಿ ಇಂತಹ ಆರೋಪಗಳನ್ನು ಮಾಡ್ತಿದಾರೆ ಎಂದರು.

ಇದನ್ನೂ ಓದಿ: Molasses Scam: ಕಾಕಂಬಿ ರಫ್ತು ಹಗರಣದಲ್ಲಿ ಸಿಎಂ, ಕೇಂದ್ರ ಸಚಿವರು ಭಾಗಿ: ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಆರೋಪ

ಅಬಕಾರಿ ಇಲಾಖೆಯಲ್ಲಿ‌ ಈ ಬಾರಿ ದಾಖಲೆಯ ತೆರಿಗೆ ಸಂಗ್ರಹ ಆಗಿದೆ. ಆದಾಯ ತರೋ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಕೆ.ಎನ್ ರೀಸೋರ್ಸ್ ಸಂಸ್ಥೆಗೆ ಈ ಮೊದಲೇ ಅನುಮತಿ ಕೊಟ್ಟಿದ್ದೇವೆ. ಅನುಮತಿ ಕೊಟ್ಟಿದ್ದರಲ್ಲಿ ಯಾರ ಒತ್ತಡವೂ ಇರಲಿಲ್ಲ.

ಕಾಂಗ್ರೆಸ್‌ನವರು ಬಿಟ್ಟಿರುವ ಆಡಿಯೋ ಸುಳ್ಳು, ಅವರು ಮಾಡಿರುವ ಆರೋಪ ಸುಳ್ಳು. ಕಾಂಗ್ರೆಸ್‌ನವರು ಏನೇ ಆರೋಪ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತೆ ಈ ರೀತಿ ಹತ್ತು ಆಡಿಯೋ ಬಿಟ್ಟರೂ ನಾವು ಎದೆಗುಂದುವುದಿಲ್ಲ ಎಂದು ಹೇಳಿದರು.

ಸಿಎಂ ಮೇಲೂ ಖರ್ಗೆ ಆರೋಪ ಮಾಡಿದ್ದಾರೆ. ಇದು ನಿರಾಧಾರ, ಸತ್ಯಕ್ಕೆ ದೂರ. ಪ್ರಿಯಾಂಕ್ ಖರ್ಗೆ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಕೆ. ಎನ್ ರೀಸೋರ್ಸ್ ಸಂಸ್ಥೆಗೆ ಕಾನೂನು ಬದ್ಧವಾಗಿಯೇ ಅನುಮತಿ ಕೊಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಶು ಸಂಗೋಪನೆ ಇಲಾಖೆ ಸಚಿವರಾದ ಪ್ರಭು ಚೌಹಾಣ್, ರಾಜ್ಯಸಭಾ ಸದಸ್ಯರಾದ ಈರಣ್ಣಕಡಾಡಿ ಸೇರಿದಂತೆ ಇತರ ರೂಪಸಿತರಿದ್ದರು.

Exit mobile version