Site icon Vistara News

MP Renukacharya : ಕರ್ನಾಟಕ ಬಿಜೆಪಿ ಮುಕ್ತ ಆಗೋ ಪರಿಸ್ಥಿತಿ ಬಂದಿದೆ ಎಂದ ರೇಣುಕಾಚಾರ್ಯ!

MP Renukacharya

#image_title

ದಾವಣಗೆರೆ: ʻʻನಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ (Congress Mukt Karnataka) ಮಾಡಬೇಕು ಅಂದುಕೊಂಡಿದ್ದೆವು. ಆದರೆ, ಈಗ ಕರ್ನಾಟಕದಲ್ಲಿ‌ ಬಿಜೆಪಿ ಮುಕ್ತ BJP Mukt Karnataka) ಆಗೋ‌ ಪರಿಸ್ಥಿತಿ ಬಂದಿದೆʼʼ-ಹೀಗೆಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ ಬಿಜೆಪಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya).

ಕಾಂಗ್ರೆಸ್‌ ನಾಯಕರೊಂದಿಗೆ ಒಡನಾಟ ಹೊಂದಿರುವ ರೇಣುಕಾಚಾರ್ಯ ಅವರು ಕಳೆದ ಕೆಲವು ಸಮಯದಿಂದ ಬಿಜೆಪಿ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ಹೊರಹಾಕುತ್ತಿದ್ದಾರೆ. ಒಂದು ಹಂತದಲ್ಲಿ ನಿರಂತರ ಮೂರ್ನಾಲ್ಕು ದಿನ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನಾಯಕರನ್ನು ಹೆಸರೆತ್ತಿ ವಾಗ್ದಾಳಿ ನಡೆಸಿದ್ದ ಅವರು ಒಮ್ಮೆ ಬಿಜೆಪಿ ರಾಜ್ಯ ನಾಯಕತ್ವ ಕರೆದು ಬುದ್ಧಿ ಹೇಳಿದ ಬಳಿಕ ಸ್ವಲ್ಪ ತಣ್ಣಗಾಗಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಈ ಆಕ್ರೋಶದ ಮಾತುಗಳು ಜಾಸ್ತಿಯಾಗಿವೆ. ಕೆಲವು ದಿನದ ಹಿಂದಷ್ಟೇ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.

ಹೊನ್ನಾಳಿಯ ಮಾಜಿ ಶಾಸಕರಾಗಿರುವ ರೇಣುಕಾಚಾರ್ಯ ಅವರ ಪ್ರಕಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕೈಯಿಂದ ಅಧಿಕಾರವನ್ನು ಕಿತ್ತುಕೊಂಡಿದ್ದೇ ರಾಜ್ಯದಲ್ಲಿ ಬಿಜೆಪಿಯ ಅವನತಿಗೆ ಪ್ರಮುಖ ಕಾರಣ. ಮಂಗಳವಾರದ ಮಾತಿನಲ್ಲೂ ಅದು ವ್ಯಕ್ತವಾಗಿತ್ತು. ಜತೆಗೆ ಪಕ್ಷದ ನಾಯಕತ್ವ, ಸಿದ್ಧಾಂತ ಎಲ್ಲದರ ವಿರುದ್ಧವೂ ಅವರು ಕಿಡಿಕಾರಿದರು.

ಏನೇನು ಹೇಳಿದರು ರೇಣುಕಾಚಾರ್ಯ?

  1. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಅನ್ನೋದೇ ಇಲ್ಲ. ಬಿಜೆಪಿಯನ್ನು ಯಾರೋ, ಎಲ್ಲೋ ಕುಳಿತು ನಿಯಂತ್ರಿಸುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರಿದರೆ ಬಿಜೆಪಿ ಪಕ್ಷ ಅಧೋಗತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ
  2. ನಮ್ಮ ಕೆಲವು ನಾಯಕರು ಭ್ರಮಾಲೋಕದಲ್ಲಿದ್ದಾರೆ. ಅವರು ಭ್ರಮಾಲೋಕ ಬಿಟ್ಟು ಹೊರ ಬರಬೇಕು.
  3. 2013, 2023 ರಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಬಿಜೆಪಿಗೆ ಮುಳ್ಳು. ಇದನ್ನು ಹಿರಿಯರು ಆತ್ಮಾವಲೋಕನ ಮಾಡಿಕೊಳ್ಳಬೇಕು.
  4. 2023ರ ವಿಧಾನಸಭಾ ಚುನಾವಣೆಯಲ್ಲಿ 72 ಹೊಸ ಮುಖಗಳಿಗೆ ಟಿಕೆಟ್ ಕೊಡುವ ಅವಶ್ಯಕತೆ ಏನಿತ್ತು?
  5. ಹಿರಿಯರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ ಅವರನ್ನು ಕಡೆಗಣಿಸಿದರು. ಇದು ದೊಡ್ಡ ತಪ್ಪು.
  6. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮುಗಿದು 2 ವರ್ಷ ಆಗಿದೆ. ಇದುವರೆಗೂ ರಾಜ್ಯಾಧ್ಯಕ್ಷರ ಆಯ್ಕೆಯಾಗಿಲ್ಲ, ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ.
  7. ಯಡಿಯೂರಪ್ಪ ಅವರನ್ನು ನಾಮ್ ಕೇ ವಾಸ್ತೇ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ.
  8. ಯಡಿಯೂರಪ್ಪ ಅವರಿಗೆ ಯಾವುದೇ ಗೌರವ ನೀಡಿಲ್ಲ.

ಇದನ್ನೂ ಓದಿ : CM Siddaramaiah : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್‌ ತರಲು ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದ ಸಿದ್ದರಾಮಯ್ಯ

ಸಂಸದ ಸಿದ್ದೇಶ್ವರ್‌ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ದಾವಣಗೆರೆಯ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಅವರು, ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಮಹಾನಾಯಕ. ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರಿದ್ದರೂ ಜಿಲ್ಲಾ ಉಸ್ತುವಾರಿ ನಮಗೆ‌ ಕೊಡಲಿಲ್ಲ. 5 ಜನರಲ್ಲಿ ಯಾರಿಗಾದರೂ ಸಚಿವರನ್ನಾಗಿ ಮಾಡಿ ಅಂತ ಕೇಳಿಕೊಂಡೆವು. ಆ ಮಹಾನಾಯಕ ತನ್ನ ಅಸ್ವಿತ್ವ ಕಡಿಮೆ ಆಗತ್ತೆ ಅಂತ ತಡೆದರುʼʼ ಎಂದು ರೇಣುಕಾಚಾರ್ಯ ಕಿಡಿಕಾರಿದರು.

Exit mobile version