Site icon Vistara News

Nigama Mandali : 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ ಅಧಿಕಾರ ಭಾಗ್ಯ; ಚಲನಚಿತ್ರ ಅಕಾಡೆಮಿಗೆ ಸಾಧುಕೋಕಿಲ

Nigama Mandali Sadhu Kokila Siddaramaiah Nagalakshmi

ಬೆಂಗಳೂರು: ರಾಜ್ಯದ ನಿಗಮ ಮತ್ತು ಮಂಡಗಳಿಗೆ (Nigama Mandali) ಅಧ್ಯಕ್ಷರ ನೇಮಕದ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 35 ಶಾಸಕರಿಗೆ ನಿಗಮದ ಅಧ್ಯಕ್ಷತೆ ನೀಡಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ಎರಡನೇ ಪಟ್ಟಿಯಲ್ಲಿ 44 ಮಂದಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಾನಾ ನಿಗಮ, ಮಂಡಳಿ, ಅಕಾಡೆಮಿಗಳಲ್ಲಿ ಅವಕಾಶ ಒದಗಿಸಿದ್ದಾರೆ. ಸಂಗೀತ ನಿರ್ದೇಶಕ ಸಾಧು ಕೋಕಿಲ (Sadhu Kokila) ಅವರನ್ನು ಚಲನಚಿತ್ರ ಅಕಾಡೆಮಿ (Cinema Academy) ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದರೆ, ಹಿಂದೆ ಮಹಿಳಾ ಆಯೋಗ ಅಧ್ಯಕ್ಷೆಯಾಗಿದ್ದ ನಾಗಲಕ್ಷ್ಮಿ ಚೌಧರಿ (Nagalakshmi Chowdhary) ಅವರಿಗೆ ಮತ್ತದೇ ಹುದ್ದೆಯನ್ನು ನೀಡಿ ಗೌರವಿಸಲಾಗಿದೆ.

ಗುರುವಾರ ಬೆಳಗ್ಗೆ ನಿಗಮ ಮಂಡಳಿ ಪಟ್ಟಿ ಬಿಡುಗಡೆಯಾಗಿದೆ. ಬುಧವಾರವೇ ಸಿಎಂ ಸಿದ್ದರಾಮಯ್ಯ ಅವರು ಟಿಪ್ಪಣಿಯನ್ನು ಸಹಿ ಮಾಡಿ ಆಯಾ ಇಲಾಖೆಗಳಿಗೆ ಕಳುಹಿಸಿದ್ದರು. ಇದೀಗ ಒಟ್ಟಾರೆ ಪಟ್ಟಿ ಬಿಡುಗಡೆಯಾಗಿದ್ದು, ಒಂದು ಮಟ್ಟಕ್ಕೆ ಕಾರ್ಯಕರ್ತರಿಗೆ ಅವಕಾಶ ಲಭಿಸಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅದರಂತೆ ಈಗ ಎರಡನೇ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ದೊರಕಿದೆ.

ಜಿಲ್ಲಾ ಮಟ್ಟದ ಹುದ್ದೆಗಳು ಹೆಚ್ಚು

ಹೊಸ ನೇಮಕಾತಿಯಲ್ಲಿ ರಾಜ್ಯ ಮಟ್ಟದ ಕೆಲವು ಜವಾಬ್ದಾರಿಗಳಿದ್ದರೆ, ಹೆಚ್ಚಿನವರು ಜಿಲ್ಲಾ ಮತ್ತು ನಗರ ಮಟ್ಟದ ಜವಾಬ್ದಾರಿ ಹೊಂದಿವೆ. ಹಲವು ನಗರಾಭಿವೃದ್ಧಿ ಪ್ರಾಧಿಕಾರಗಳಗೆ ಇಲ್ಲಿ ನೇಮಕಾತಿ ನಡೆದಿದೆ.

ಕಾಂತಾ ನಾಯ್ಕ ಅವರನ್ನು ಕೌಶಲಾಭಿವೃದ್ಧಿ ನಿಗಮಕ್ಕೆ, ಎಚ್‌.ಸಿ. ಸುಧೀಂದ್ರ ಅವರನ್ನು ತೆಂಗು ಅಭಿವೃದ್ಧಿ ಮಂಡಳಿ, ಮಮತಾ ಗಟ್ಟಿ ಅವರನ್ನು ಗೇರು ಅಭಿವೃದ್ಧಿ ಮಂಡಳಿ, ಜಯಸಿಂಹ ಅವರನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದಾಸರಹಳ್ಳಿ ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಹಿನ್ನೆಲೆಯಲ್ಲಿ ನಾಗಲಕ್ಷ್ಮೀ ಚೌಧರಿ ಅವರನ್ನು ಮಹಿಳಾ ಆಯೋಗಕ್ಕೆ ನೇಮಕ ಮಾಡಲಾಗಿದೆ ಎನ್ನಲಾಗಿದೆ.

Nigama Mandali ಯಾರಿಗೆ ಯಾವ ಹುದ್ದೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Nigama Mandali : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್‌ ನೇಮಕ

Nigama Mandali : ಮೊದಲ ಹಂತದಲ್ಲಿ ಅಧಿಕಾರ ಪಡೆದ 35 ಮಂದಿ ಶಾಸಕರು

  1. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
  2. ಮುದ್ದೇಬಿಹಾಳ ಶಾಸಕ ಅಪ್ಪಾಜಿ ಸಿಎಸ್ ನಾಡಗೌಡ -ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
  3. ಕಾಗವಾಡ ಶಾಸಕ ಭರಮಗೌಡ ಅಲಗೌಡ ಕಾಗೆ -ಹುಬ್ಬಳ್ಳಿ ಸಾರಿಗೆ ನಿಮಗ (ವಾಯುವ್ಯ ಸಾರಿಗೆ)
  4. ಬಾಗಲಕೋಟೆ ಶಾಸಕ ಯಮುನಪ್ಪ ವೈ ಮೇಟಿ -ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
  5. ಗುಬ್ಬಿ ಶಾಸಕ ಎಸ್​ಆರ್ ಶ್ರೀನಿವಾಸ -ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  6. ಬ್ಯಾಡಗಿ ಶಾಸಕ ಬಸವರಾಜ್ ನೀಲಪ್ಪ ಶಿವಣ್ಣನವರ್​ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ
  7. ಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ- ಆಹಾರ ಮತ್ತು ನಾಗರಿಕ ಸರಬಾರಜು ನಿಗಮ
  8. ಮಾಗಡಿ ಶಾಸಕ ಎಚ್​​ಸಿ ಬಾಲಕೃಷ್ಣ -ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
  9. ರೋಣ ಶಾಸಕ ಜಿಎಸ್ ಪಾಟೀಲ್ -ಕರ್ನಾಟಕ ಖನಿಜ ನಿಗಮ ಅಭಿವೃದ್ಧಿ ನಿಗಮ ನಿಯಮಿತ
  10. ಶಾಂತಿ ನಗರ ಶಾಸಕ ಎನ್​ಎ ಹ್ಯಾರೀಸ್​ -ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
  11. ಬೈಲಹೊಂಗಲ ಶಾಸಕ ಕೌಜಲಗಿ ಮಹಾಂತೇಶ್ ಶಿವಾನಂದ -ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
  12. ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ -ಮೈಸೂರ್ ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್
  13. ಬೀಳಗಿ ಶಾಸಕ ಜೆಟಿ ಪಾಟೀಲ್ -ಹಟ್ಟಿ ಚಿನ್ನದ ಗಣಿ
  14. ಸುರಪುರ ಶಾಸಕ ರಾಜಾ ವೆಂಕಟ್ಟಪ್ಪ ನಾಯಕ -ಕರ್ನಾಟಕ ರಾಜ್ಯ ಉಗ್ರಾಣ ನಿಗಮ
  15. ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್ -ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಮಗ/ಲ್ಯಾಂಡ್ ಆರ್ಮಿ
  16. ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ -ಕರ್ನಾಟಕ ಗೃಹ ಮಂಡಳಿ
  17. ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಅಬ್ಬಯ್ಯ ಪ್ರಸಾದ್ -ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ
  18. ಸಾಗರ ಶಾಸಕ ಬಿಕೆ ಗೋಪಾಲಕೃಷ್ಣ ಬೇಳೂರು -ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ
  19. ಬಂಗಾರಪೇಟೆ ಶಾಸಕ ಎಸ್​ ಎನ್​ ನಾರಾಯಣಸ್ವಾಮಿ – ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
  20. ಮಳವಳ್ಳಿ ಶಾಸಕ ಪಿಎಂ ನರೇಂದ್ರಸ್ವಾಮಿ -ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
  21. ಚಳ್ಳಕೆರೆ ಶಾಸಕ ಟಿ ರಘುಮೂರ್ತಿ -ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ
  22. ಶ್ರೀರಂಗಪಟ್ಟಣ ಶಾಸಕ ಎಬಿ ರಮೇಶ್ ಬಂಡಿ ಸಿದ್ದೇಗೌಡ -ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ
  23. ಆನೇಕಲ್ ಶಾಸಕ ಬಿ ಶಿವಣ್ಣ -ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
  24. ಬಾಗೇಪಲ್ಲಿ ಶಾಸಕ ಎಸ್​​ ಎನ್​ ಸುಬ್ಬಾರೆಡ್ಡಿ -ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
  25. ಧಾರವಾಡ ಶಾಸಕ ವಿನಯ್ ಕುಲಕರ್ಣಿ- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  26. ಹೆಗ್ಗಡ ದೇವನಕೋಟೆ ಶಾಸಕ ಅನಿಲ್ ಚಿಕ್ಕಮಾದು -ಜಂಗಲ್ ಲಾಡ್ಜಸ್
  27. ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ -ಕರ್ನಾಟಕ ಪರಿಶಿಷ್ಟ ಪಂಡಗಳ ಅಭಿವೃದ್ಧಿ ನಿಗಮ
  28. ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ -ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
  29. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ – ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
  30. ಹಾನಗಲ್ ಶಾಸಕ ಶ್ರೀನಿವಾಸ ಮಾನೆ -ಮಾನ್ಯ ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು
  31. ಶೃಂಗೇರಿ ಶಾಸಕ ಟಿಡಿ ರಾಜೇಗೌಡ -ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ
  32. ಕೆಜಿಎಫ್ ಶಾಸಕಿ ರೂಪಕಲಾ – ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
  33. ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ -ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸೀಸ್
  34. ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ -ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
  35. ಕಂಪ್ಲಿ ಶಾಸಕ ಜೆಎನ್ ಗಣೇಶ್​ -ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
Exit mobile version