Site icon Vistara News

Nigama Mandali : ನಿಗಮ, ಮಂಡಳಿ ಮಾರಾಟ; Rate Card ಬಿಡುಗಡೆ ಮಾಡಿದ ಬಿಜೆಪಿ!

rate card bJP Auction

ಬೆಂಗಳೂರು: ರಾಜ್ಯದಲ್ಲಿ ನಿಗಮ ಮತ್ತು ಮಂಡಳಿಗಳ (Board and corporation) ನೇಮಕಾತಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಸುದೀರ್ಘ ಚರ್ಚೆ ನಡೆಸಿದ್ದನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್‌ ಕಾಲೆಳೆದಿದೆ. ಎಟಿಎಂ ಸರ್ಕಾರದ (ATMSarkara) ನಿಗಮ ಮಂಡಳಿಗಳ (Nigama Mandali) ಹರಾಜು ಪ್ರಕ್ರಿಯೆ ಈಗಾಲೇ ಆರಂಭವಾಗಿದೆ ಎಂದು ಹೇಳಿದ್ದಲ್ಲದೆ, ಯಾವ ಹುದ್ದೆಗೆ ಎಷ್ಟು ರೇಟ್‌ ಎಂದು ರೇಟ್‌ ಕಾರ್ಡ್‌ (BJP Rate Card) ಕೂಡಾ ಬಿಡುಗಡೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಶುಕ್ರವಾರ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡುವ ವಿಚಾರದಲ್ಲಿ ಚರ್ಚೆ ನಡೆಸಿದ್ದರು. ಅಂತಿಮವಾಗಿ 30 ಮಂದಿಯ ಪಟ್ಟಿಯನ್ನೂ ಫೈನಲ್‌ ಮಾಡಲಾಗಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಆಗಮನದ ವೇಳೆ ಅದು ಪ್ರಕಟವಾಗಲಿದೆ.

ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತುರ್ತಾಗಿ ನಡೆಯಬೇಕು ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದರು. ಮಂತ್ರಿ ಸ್ಥಾನ ಸಿಗದೆ ಬೇಸರಗೊಂಡಿರುವ ಹಲವು ಹಿರಿಯ ನಾಯಕರನ್ನು ಈ ಮೂಲಕ ಸಮಾಧಾನ ಮಾಡುವುದು ಅವರ ಉದ್ದೇಶವಾಗಿತ್ತು.

ನಿಗಮ-ಮಂಡಳಿಗಳ ನೇಮಕಾತಿ ಚರ್ಚೆ ನಡೆದ ವಿಚಾರವನ್ನು ಅರಿತ ಬಿಜೆಪಿ
ATMSarkara ದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಈಗಾಲೇ ಆರಂಭವಾಗಿದೆ.
ಹಾಗಾಗಿ ತಮ್ಮವರಿಂದ ಹರಾಜು ಕೂಗಿಸಲು ಸಿದ್ದರಾಮಯ್ಯರವರ ಬಣ,
ಡಿ. ಕೆ. ಶಿವಕುಮಾರ್‌ ಅವರನ್ನು ದೂರವಿಟ್ಟು ರಾತ್ರೋರಾತ್ರಿ ಸಭೆ ನಡೆಸಿದೆ.
ಅಂದಹಾಗೆ, ಎರಡೂ ಕಡೆ ದೊಡ್ಡ ಸೂಟ್ ಕೇಸ್‌ನೊಂದಿಗೆ ಬರುವವರಿಗೆ ಮೊದಲ ಆದ್ಯತೆ-
ಎಂದು ಟ್ವೀಟ್‌ ಮಾಡಿದೆ.

ಇದನ್ನೂ ಓದಿ: Nigama Mandali : ನಿಗಮ ಮಂಡಳಿ ಪಟ್ಟಿ ಫೈನಲ್‌; ಶಾಸಕರಿಗೇ ಮಣೆ, ಕಾರ್ಯಕರ್ತರಿಗಿಲ್ಲ ಅವಕಾಶ

ಕಲೆಕ್ಷನ್‌ ಕೊಡಿ ಸೀಟು ಪಡಿ ಪೋಸ್ಟರ್‌ ಬಿಡುಗಡೆ

ಈ ನಡುವೆ, ಅದೇ ಟ್ವೀಟ್‌ಗೆ ಪೂರಕವಾಗಿ ಒಂದು ಪೋಸ್ಟರ್‌ ಬಿಡುಗಡೆ ಮಾಡಿದ್ದು. ಅದರಲ್ಲಿ ಕಲೆಕ್ಷನ್ ಕೊಡಿ, ಸೀಟು ಪಡಿ ಅಂತ ವ್ಯಂಗ್ಯ ಮಾಡಲಾಗಿದೆ. ವಿವಿಧ ನಿಗಮಗಳಿಗೆ ಕೋಟ್ಯಾಂತರ ಹಣ ಫಿಕ್ಸ್ ಮಾಡಿ ಪೋಸ್ಟರ್ ಬಿಡುಗಡೆ ಮಾಡಿದೆ ಬಿಜೆಪಿ. ಬಿಜೆಪಿ ಪ್ರಕಟಿಸಿದ ರೇಟ್‌ ಕಾರ್ಡ್‌ ಇಲ್ಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ-50 ಕೋಟಿ ರೂ.
ಬೆಂಗಳೂರು ಜಲ ಮಂಡಳಿ ಮತ್ತು ಒಳಚರಂಡಿ ಮಂಡಳಿ- 45 ಕೋಟಿ
ಕರ್ನಾಟಕ ರಸ್ತೆ ಮತ್ತು ಮೂಲಸೌಕರ್ಯ ನಿಗಮ (KRIDL)- 20 ಕೋಟಿ
ಕಿಯೋನಿಕ್ಸ್‌ – 15 ಕೋಟಿ
ಕರ್ನಾಟಕ ಉಗ್ರಾಣ ನಿಗಮ- 12 ಕೋಟಿ
ಕರ್ನಾಟಕ ವಿದ್ಯುತ್‌ ಕಾರ್ಖಾನೆ ನಿಯಮಿತ- 25 ಕೋಟಿ
ಮೈಸೂರ್‌ ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿ.- 14 ಕೋಟಿ
ಕರ್ನಾಟಕ ಗೃಹ ಮಂಡಳಿ- 10 ಕೋಟಿ
ಹಟ್ಟಿ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌- 11 ಕೋಟಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ- 13 ಕೋಟಿ
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳು- 16 ಕೋಟಿ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ- 28 ಕೋಟಿ
ಕರ್ನಾಟಕ ಜಂಗಲ್‌ ಲಾಡ್ಜಸ್‌ ಎಂಡ್‌ ರೆಸಾರ್ಟ್ಸ್‌- 5 ಕೋಟಿ
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ- 19 ಕೋಟಿ

Exit mobile version