Site icon Vistara News

‌Electricity Bill: ಇವತ್ತಿಂದ ಕರೆಂಟ್‌ ಬಿಲ್‌ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಆರ್ಡರ್!

200 unit Electricity free no Bill anouncement in davanagere

#image_title

ದಾವಣಗೆರೆ: ಇಂದಿನಿಂದ ವಿದ್ಯುತ್‌ ಬಿಲ್‌ (‌Electricity Bill) ಕಟ್ಟುವ ಹಾಗಿಲ್ಲ. ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬ ತಮಟೆ ಬಾರಿಸುತ್ತಾ ಗ್ರಾಮವೊಂದರಲ್ಲಿ ಸಾಗಿರುವ ವಿಡಿಯೊ ಈಗ ವೈರಲ್‌ ಆಗಿದೆ. ಕಾಂಗ್ರೆಸ್‌ ಗ್ಯಾರಂಟಿ (congress guarantee) ಘೋಷಣೆಯಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌ ಸಹ ಒಂದಾಗಿದ್ದು, ಜನರು ಸರ್ಕಾರಿ ಆದೇಶಕ್ಕಾಗಿ ಕಾಯದೇ ಈ ರೀತಿ ನಡೆದುಕೊಳ್ಳುತ್ತಿರುವುದು ಹಲವು ಕಡೆ ಕಂಡು ಬಂದಿದೆ.

ದಾವಣಗೆರೆ ತಾಲೂಕಿನ ಗೋಣಿವಾಡ ಗ್ರಾಮದಲ್ಲಿ ಈ ರೀತಿಯಾಗಿ ಡಂಗುರ ಸಾರಲಾಗಿದೆ. ವ್ಯಕ್ತಿಯೊಬ್ಬ ಮನೆಗಳ ಮುಂದೆ ನಿಂತು ತಮಟೆ ಬಾರಿಸಿ ಹೀಗೆ ಹೇಳಿದ್ದಾನೆ. ಈ ಹೇಳಿಕೆಯು ಈಗ ಗ್ರಾಮದಲ್ಲಿ ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿದೆ.

ಇದನ್ನೂ ಓದಿ: Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!

ವಿಡಿಯೊದಲ್ಲೇನಿದೆ?

ಇವತ್ತಿನಿಂದ ಯಾರೂ ಕರೆಂಟ್ ಬಿಲ್ ಕಟ್ಟುವ ಹಾಗಿಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಆರ್ಡರ್ ಮಾಡಿದ್ದಾರೆ ಎಂದು ತಮಟೆ ಬಾರಿಸುತ್ತಾ ಬರುವ ವ್ಯಕ್ತಿ ಹೇಳಿದ್ದಾನೆ. ಇದನ್ನು ಗ್ರಾಮದ ಕೆಲವರು ವಿಡಿಯೊ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿಯಲ್ಲಿ ಇದೂ ಒಂದು

ಈ ಬಾರಿಯ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷದವರು ಐದು ಗ್ಯಾರಂಟಿಯನ್ನು ನೀಡಿದ್ದರು. ಅದರಲ್ಲಿ 200 ಯೂನಿಟ್‌ ವರೆಗೆ ವಿದ್ಯುತ್‌ ಬಳಕೆ ಮಾಡಿದರೆ ಉಚಿತ ಎಂದು ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಕಡೆ ಗದ್ದಲಗಳು ನಡೆಯುತ್ತಿವೆ.

ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳಿವು

ಗೃಹಲಕ್ಷ್ಮಿ ಯೋಜನೆ: ಈ ಯೋಜನೆ ಪ್ರಕಾರ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಗೃಹಜ್ಯೋತಿ ಯೋಜನೆ: ಎಲ್ಲ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು.

ಯುವನಿಧಿ ಯೋಜನೆ: ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ ₹3000 ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1500 ರೂಪಾಯಿ ಪ್ರೋತ್ಸಾಹಧನ.

ಅನ್ನಭಾಗ್ಯ ಯೋಜನೆ: ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ತಿಂಗಳಿಗೆ 10 ಕೆಜಿ ಆಹಾರ ಧಾನ್ಯ ವಿತರಣೆ

ಸಖಿ ಯೋಜನೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಸಂಚರಿಸುವ ಎಲ್ಲ ಮಹಿಳೆಯರಿಗೂ ಪ್ರಯಾಣ ಉಚಿತ

ಈ ಐದೂ ಯೋಜನೆಗಳಿಗೆ ಕಾಂಗ್ರೆಸ್‌ ಗ್ಯಾರಂಟಿಯನ್ನು ನೀಡಿದ್ದು, ಇದಕ್ಕಾಗಿ ಗ್ಯಾರಂಟಿ ಕಾರ್ಡ್‌ ಸಿದ್ಧಪಡಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಸಹಿಯನ್ನೂ ಹಾಕಿದ್ದರು. ಬಳಿಕ ಈ ಕಾರ್ಡ್‌ ಅನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಾಡಿದ್ದರು.

ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಗ್ಯಾರಂಟಿಯನ್ನು ಜಾರಿಗೆ ತರಬೇಕು ಎಂದು ಎಲ್ಲ ಕಡೆ ಒತ್ತಡಗಳು ಕೇಳಿ ಬರುತ್ತಿವೆ. ಈ ನಡುವೆ ರಾಜ್ಯದ ಹಲವು ಗ್ರಾಮಗಳಲ್ಲಿ ಮಹಿಳೆಯರು ಉಚಿತ ಬಸ್‌ ಪ್ರಯಾಣ ಮಾಡುವುದಾಗಿ ಪಟ್ಟು ಹಿಡಿದಿದ್ದು, ಟಿಕೆಟ್‌ಗೆ ಹಣ ಕೊಡಲು ನಿರಾಕರಣೆ ಮಾಡುತ್ತಿದ್ದರೆ, ಮತ್ತೆ ಹಲವು ಕಡೆ ಗ್ರಾಮದವರು ಕರೆಂಟ್‌ ಬಿಲ್‌ ಕಟ್ಟುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಇದಕ್ಕಾಗಿ ಸಾಕಷ್ಟು ಗಲಾಟೆಗಳೂ ನಡೆದಿವೆ.

ಇದನ್ನೂ ಓದಿ: Karnataka Cabinet expansion: ಖಾಲಿ ಖಾಲಿ ಪ್ರಮಾಣವಚನ ಸ್ವೀಕರಿಸಿದ ದಿನೇಶ್‌ ಗುಂಡೂರಾವ್!‌

ಈ ಎಲ್ಲ ಗೊಂದಲಗಳ ನಡುವೆ ಈಗ ದಾವಣಗೆರೆ ತಾಲೂಕಿನ ಗೋಣಿವಾಡ ಗ್ರಾಮದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಮಾಡದಿರುವಂತೆ ಆದೇಶ ಹೊರಡಿಸಲಾಗಿದೆ ಎಂಬ ಸಂದೇಶವು ವ್ಯಾಪಕ ಪ್ರಚಾರವನ್ನು ಪಡೆದುಕೊಂಡಿದೆ.

Exit mobile version