ಬೆಂಗಳೂರು: ಲೋಕಸಭಾ ಚುನಾವಣೆಗೆ (Parliament Election) ಸಂಬಂಧಿಸಿ ದೇಶದಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದರೂ ಬಿಜೆಪಿ ರಾಜ್ಯದಲ್ಲಿ ತನ್ನ ಮೊದಲ ಪಟ್ಟಿಯನ್ನು (BJP Candidates list) ಬಿಡುಗಡೆಗೊಳಿಸಿಲ್ಲ. ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಕುರಿತ ಒಂದು ಹಂತದ ಚರ್ಚೆ ಬುಧವಾರವೇ ನಡೆದಿತ್ತಾದರೂ ಅಭ್ಯರ್ಥಿಗಳನ್ನು ಅಂತಿಮ ಮಾಡಿರಲಿಲ್ಲ. ಇದೀಗ ಎರಡನೇ ಹಂತದ ಸಭೆ ಸೋಮವಾರ (ಮಾರ್ಚ್ 11) ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆಯಲಿದೆ. ಆ ಸಭೆಯಲ್ಲಿ ಚರ್ಚೆ ನಡೆದು ಮಂಗಳವಾರ ಇಲ್ಲವೇ ಬುಧವಾರ ಪಟ್ಟಿ ಬಿಡುಗಡೆಯ ನಿರೀಕ್ಷೆ ಇದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಹಿರಿಯ ನಾಯಕರಾದ ಅಮಿತ್ ಶಾ, ಬಿಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಬಿಜೆಪಿ ವರಿಷ್ಠರ ಸಭೆ ಆಯೋಜನೆಯಾಗಿದೆ. ಸಭೆಯಲ್ಲಿ ಬಿಜೆಪಿಯ ದೇಶದ ಎರಡನೇ ಪಟ್ಟಿ ರಾಜ್ಯದ ಮೊದಲ ಪಟ್ಟಿಯ ಚರ್ಚೆ ನಡೆಯಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸೇರಿದಂತೆ ರಾಜ್ಯ ಪ್ರಮುಖ ನಾಯಕರ ಅಭಿಪ್ರಾಯ ಪಡೆದಿರುವ ವರಿಷ್ಠರು ಮತ್ತೊಂದು ಸುತ್ತಿನ ಚರ್ಚೆಗೆ ಆಹ್ವಾನಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಆರ್ ಅಶೋಕ್, ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರವೇ ದಿಲ್ಲಿಗೆ ಬರುವಂತೆ ಸೂಚಿಸಲಾಗಿದೆ. ಅಂದು ಕೂಡಾ ಒಂದು ಸುತ್ತಿನ ಚರ್ಚೆ ನಡೆದು ಸೋಮವಾರಕ್ಕೆ ವೇದಿಕೆ ಅಣಿ ಮಾಡುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ : BY Vijayendra : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಯಾವಾಗ? ವಿಜಯೇಂದ್ರ ನೀಡಿದ್ದಾರೆ ಸುಳಿವು!
Parliament Election : ಲೋಕಸಭೆ ಚುನಾವಣೆ: ಬಿಜೆಪಿ ಸಂಭಾವ್ಯರ ಪಟ್ಟಿ ಇಲ್ಲಿದೆ
1. ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲು, ಬ್ರಿಜೇಶ್ ಚೌಟ, ಅರುಣ್ ಶ್ಯಾಮ್
2. ಬೆಳಗಾವಿ: ಶ್ರದ್ಧಾ ಶೆಟ್ಟರ್, ಮಾಜಿ ಶಾಸಕ ಸಂಜಯ್ ಪಾಟೀಲ್, ಜಗದೀಶ್ ಶೆಟ್ಟರ್
3. ಮೈಸೂರು -ಕೊಡಗು: ಪ್ರತಾಪ್ ಸಿಂಹ, ಅಪ್ಪಚ್ಚು ರಂಜನ್, ಯದುವೀರ ಒಡೆಯರ್
4. ಶಿವಮೊಗ್ಗ ಕ್ಷೇತ್ರ – ಬಿ.ವೈ.ರಾಘವೇಂದ್ರ
5. ಗದಗ-ಹಾವೇರಿ: ಬಸವರಾಜ ಬೊಮ್ಮಾಯಿ, ಶೆಟ್ಟರ್, ಕಾಂತೇಶ್, ಸಂದೀಪ್ ಪಾಟೀಲ್
6. ಹುಬ್ಬಳ್ಳಿ-ಧಾರವಾಡ ಕ್ಷೇತ್ರ: ಪ್ರಲ್ಹಾದ ಜೋಶಿ
7.ಬೆಂಗಳೂರು ಸೆಂಟ್ರಲ್: ಪಿ.ಸಿ.ಮೋಹನ್
8.ಉತ್ತರ ಕನ್ನಡ: ಅನಂತ್ ಕುಮಾರ್ ಹೆಗಡೆ, ಕಾಗೇರಿ, ಹರಿಪ್ರಕಾಶ್ ಕೋಣೆಮನೆ, ವಿಶ್ವೇಶ್ವರ ಹೆಗಡೆ ಕಾಗೇರಿ
9. ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಶೋಭಾ ಕರಂದ್ಲಾಜೆ
10.ಬೆಂಗಳೂರು ಉತ್ತರ: ಸದಾನಂದಗೌಡ, ಸಿ.ಟಿ.ರವಿ ಹೆಸರು, ವಿವೇಕ್ ರೆಡ್ಡಿ
11.ಬೆಂಗಳೂರು ದಕ್ಷಿಣ ಕ್ಷೇತ್ರ : ತೇಜಸ್ವಿ ಸೂರ್ಯ
12.ತುಮಕೂರು ಕ್ಷೇತ್ರ: ವಿ.ಸೋಮಣ್ಣ, ಮಾಧುಸ್ವಾಮಿ
13.ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್, ಅಲೋಕ್ ವಿಶ್ವನಾಥ್
14.ಚಿಕ್ಕೋಡಿ – ಅಣ್ಣಾ ಸಾಹೇಬ್ ಜೊಲ್ಲೆ, ರಮೇಶ್ ಕತ್ತಿ
15.ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್
16.ವಿಜಯಪುರ – ರಮೇಶ್ ಜಿಗಜಿಣಗಿ, ಉಮೇಶ್ ಕಾರಜೋಳ, ಮಹೇಂದ್ರ ನಾಯಕ್
17.ಕಲಬುರಗಿ – ಉಮೇಶ್ ಜಾಧವ್
18.ಕೊಪ್ಪಳ – ಕರಡಿ ಸಂಗಣ್ಣ, ಡಾ.ಕೆ.ಬಸವರಾಜು, ಕೆ.ಕರಿಯಪ್ಪ
19. ಬಳ್ಳಾರಿ – ವೈ.ದೇವೇಂದ್ರಪ್ಪ, ಬಿ.ಶ್ರೀರಾಮುಲು
20.ದಾವಣಗೆರೆ – ಜಿ.ಎಂ.ಸಿದ್ದೇಶ್ವರ್, ಎಂ.ಪಿ.ರೇಣುಕಾಚಾರ್ಯ
21.ಚಿತ್ರದುರ್ಗ – ನಾರಾಯಣಸ್ವಾಮಿ, ಮಾದಾರ ಚೆನ್ನಯ್ಯ ಶ್ರೀ
22.ಚಾಮರಾಜನಗರ – ಎನ್.ಮಹೇಶ್, ಡಾ.ಮೋಹನ್, ಎಸ್.ಬಾಲರಾಜು
23.ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್.ಮಂಜುನಾಥ್, ಸಿ.ಪಿ.ಯೋಗೇಶ್ವರ್
24.ಬೀದರ್ ಕ್ಷೇತ್ರ – ಭಗವಂತ್ ಖೂಬಾ, ಚನ್ನಬಸವಣ್ಣ ಬಳತೆ
ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ