Site icon Vistara News

Parliament Election : ಮಾರ್ಚ್‌ 10ರೊಳಗೆ ಕಾಂಗ್ರೆಸ್‌ ಮೊದಲ ಪಟ್ಟಿ; ಯಾರಿಗೆಲ್ಲ ಟಿಕೆಟ್‌?

Parliament Election Congress first list

ಬೆಂಗಳೂರು: ಭಾರತೀಯ ಜನತಾ ಪಕ್ಷ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಸ್ಪರ್ಧಿಸಲಿರುವ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (BJP Candidates first list) ಶನಿವಾರ ಬಿಡುಗಡೆ ಮಾಡಿದೆಯಾದರೂ ಅದರಲ್ಲಿ ಕರ್ನಾಟಕದ ಒಂದೇ ಒಂದು ಕ್ಷೇತ್ರವೂ ಇಲ್ಲ. ಇತ್ತ ಕಾಂಗ್ರೆಸ್‌ ಪಕ್ಷ ಕೂಡಾ ಪಟ್ಟಿ ಬಿಡುಗಡೆಗೆ ಶತಪ್ರಯತ್ನಗಳನ್ನು ನಡೆಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಮೊದಲು ಟಿಕೆಟ್‌ ಬಿಡುಗಡೆ ಮಾಡಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ ಈ ಬಾರಿಯೂ ಅದೇ ಪ್ರಯತ್ನದಲ್ಲಿದೆ. ಮೂಲಗಳ ಪ್ರಕಾರ, ಮೊದಲ ಪಟ್ಟಿ ಮಾರ್ಚ್‌ 1೦ರೊಳಗೆ (Congress Candidates list) ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಹೈಕಮಾಂಡ್‌ ಮುಂದಿನ ವಾರ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ದಿಲ್ಲಿಗೆ ಕರೆಸಿಕೊಂಡಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಫೈನಲ್ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಕೆ ಮಾಡಲಿದ್ದಾರೆ.

ಸಿಎಂ ಮತ್ತು ಡಿಸಿಎಂ ಅವರು ಪ್ರತ್ಯೇಕ ಸರ್ವೇ ನಡೆಸಿದ ವರದಿಗಳ ಆಧಾರದ ಮೇಲೆ ಎರಡು ಪಟ್ಟಿಗಳು ಇರುತ್ತವೆ. ಇದರ ಜತೆಗೆ ಸಂಭವನೀಯ ಅಂದರೆ ಹೆಚ್ಚು ಗೆಲುವಿನ ಸಾಧ್ಯತೆ ಇರುವ,‌ ಪ್ರಮುಖ ನಾಯಕರು ಗುರುತಿಸಿದಂತೆ ಸಿದ್ಧಪಡಿಸಿದ ಮೂರನೇ ಪಟ್ಟಿಯನ್ನು ಕೂಡಾ ಸಲ್ಲಿಸಲು ಮುಂದಾಗಿದ್ದಾರೆ.

ಬೇಗ ಪಟ್ಟಿ ಬಿಡುಗಡೆಗೆ ಒತ್ತಡ

ಈ ನಡುವೆ, ಆದಷ್ಟು ಬೇಗನೆ ಪಟ್ಟಿ ಬಿಡುಗಡೆ ಮಾಡಿ ಪ್ರಚಾರಕ್ಕೆ ಅವಕಾಶ ನೀಡುವಂತೆ ಕೋರಲಾಗುತ್ತಿದೆ. ಯಾವುದೇ ಗೊಂದಲ ಇಲ್ಲದಿರುವ ಕ್ಷೇತ್ರಗಳ ಪಟ್ಟಿಯನ್ನು ಮೊದಲು ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. ಮೂಲಗಳ ಪ್ರಕಾರ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಸೆಂಟ್ರಲ್, ಬೆಂಗಳೂರು ಉತ್ತರ, ಉಡುಪಿ- ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ‌ ಅಭ್ಯರ್ಥಿಗಳ ಅಭ್ಯರ್ಥಿಗಳ ವಿಚಾರದಲ್ಲಿ ಹೆಚ್ಚು ಗೊಂದಲಗಳಿಲ್ಲ. ಹೀಗಾಗಿ ಅವುಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಪ್ರಚಾರಕ್ಕೆ ಅನುಕೂಲ ಎಂಬ ಮಾತಿದೆ.

ಇದನ್ನೂ ಓದಿ: Lok Sabha Election 2024: ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರಿಲ್ಲ; ರಾಜೀವ್‌ ಚಂದ್ರಶೇಖರ್‌ಗೆ ತಿರುವನಂತಪುರ ಟಿಕೆಟ್‌

ಯಾವ ಕ್ಷೇತ್ರಕ್ಕೆ ಯಾರು? ಇಲ್ಲಿದೆ ಸಂಭವನೀಯ ಪಟ್ಟಿ

ಹೀಗಾಗಿ ಕಾಂಗ್ರೆಸ್‌ ಕೂಡಾ ಇದನ್ನು ಪರಿಗಣಿಸಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಕಾಣಿಸುತ್ತಿದೆ. ಹಾಗಿದ್ದರೆ ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ?

ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್
ಬೆಂಗಳೂರು ಸೆಂಟ್ರಲ್ – ರಿಜ್ವಾನ್ ಹರ್ಷದ್, ಟಬೂ ಗುಂಡೂರಾವ್
ಬೆಂಗಳೂರು ಉತ್ತರ – ಕುಸುಮಾ ಹನುಮಂತರಾಯಪ್ಪ
ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
ಕೋಲಾರ – ಕೆ.ಎಚ್.ಮುನಿಯಪ್ಪ
ಚಿತ್ರದುರ್ಗ – ಬಿ.ಎನ್.ಚಂದ್ರಪ್ಪ
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
ಮೈಸೂರು – ಎನ್.ಲಕ್ಷ್ಮಣ್, ಡಾಲಿ ಧನಂಜಯ್
ಮಂಡ್ಯ – ಸ್ಟಾರ್ ಚಂದ್ರು
ತುಮಕೂರು – ಎಸ್‌.ಪಿ.ಮುದ್ದಹನುಮೇಗೌಡ, ಡಿ.ಸಿ.ಗೌರಿಶಂಕರ್
ಚಿಕ್ಕಬಳ್ಳಾಪುರ– ರಕ್ಷಾ ರಾಮಯ್ಯ

Exit mobile version