Site icon Vistara News

Parliament Election : ಕಾಂಗ್ರೆಸ್‌ ಟಿಕೆಟ್‌ ಮುಂದಿನ ಚರ್ಚೆ ಸೋಮವಾರ; ಸದ್ಯಕ್ಕಿಲ್ಲ 2ನೇ ಪಟ್ಟಿ

Parliament Elections Congress list

ಬೆಂಗಳೂರು: ಲೋಕಸಭಾ ಚುನಾವಣೆಗೆ (Parliament Election) ಸಂಬಂಧಿಸಿ ರಾಜ್ಯದಲ್ಲಿ ಬಿಜೆಪಿಗಿಂತಲೂ ಮೊದಲೇ ಮೊದಲನೇ ಅಭ್ಯರ್ಥಿ ಪಟ್ಟಿಯನ್ನು (Candidates first list) ಬಿಡುಗಡೆ ಮಾಡಿ ಬೀಗುತ್ತಿರುವ ಕಾಂಗ್ರೆಸ್‌ ಈಗ ಎರಡನೇ ಪಟ್ಟಿಯ ಚರ್ಚೆಗೆ ಅಣಿಯಾಗಿದೆ. ಮೊದಲ ಪಟ್ಟಿಯಲ್ಲಿ ರಾಜ್ಯದ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು. ಇದೀಗ ಸೋಮವಾರ ಮತ್ತೊಂದು ಸುತ್ತಿನ ಚರ್ಚೆ ನಡೆದು ಎರಡನೇ ಪಟ್ಟಿ ಬಿಡುಗಡೆ ಸಿದ್ಧತೆ ಆಗಲಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Ranadeep sing Surjewala), ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಸೋಮವಾರ ಮುಂದಿನ ಸುತ್ತಿನ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗ ಬಿಡುಗಡೆಯಾಗಿರುವ ಮಂಡ್ಯ, ಹಾಸನ, ಹಾವೇರಿ, ತುಮಕೂರು, ಶಿವಮೊಗ್ಗ, ವಿಜಯಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಲಿದೆ.

ಕೆಪಿಸಿಸಿಯನ್ನು ತಲುಪಿರುವ ಆಕಾಂಕ್ಷಿಗಳ ಸಂಸ್ಕರಿತ ಪಟ್ಟಿಯಲ್ಲಿ ಸೋಮವಾರ ಸುದೀರ್ಘ ಚರ್ಚೆ ಬಳಿಕ ಎರಡು ಹೆಸರುಗಳನ್ನು ಪ್ಯಾನಲ್ ಮಾಡುವ ಸಾಧ್ಯತೆ ಇದೆ. ಎರಡು ಹೆಸರುಗಳನ್ನು ಎಐಸಿಸಿಗೆ ಶಿಫಾರಸು ಮಾಡಲಿದ್ದಾರೆ. ಅದಾದ ಬಳಿಕ ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆದು ಎರಡನೇ ಪಟ್ಟಿ ಅಂತಿಮಗೊಳ್ಳಲಿದೆ. ಅಂದರೆ ಮುಂದಿನ ಬುಧವಾರ ಇಲ್ಲವೇ ಗುರುವಾರದ ಹೊತ್ತಿಗೆ ಕಾಂಗ್ರೆಸ್‌ನ ಎರಡನೇ ಪಟ್ಟಿ ಬಿಡುಗಡೆ ನಿರೀಕ್ಷಿಸಲಾಗಿದೆ.

Parliament Election : ಕಾಂಗ್ರೆಸ್‌ ಈಗಾಗಲೇ ಟಿಕೆಟ್‌ ಘೋಷಿಸಿರುವ ಕ್ಷೇತ್ರಗಳು ಯಾವುದು?

  1. ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ
  2. ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ – ಈಡಿಗ
  3. ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ
  4. ವಿಜಯಪುರ – ರಾಜು ಆಲಗೂರು – ಎಸ್.ಸಿ
  5. ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ
  6. ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್ – ಒಕ್ಕಲಿಗ
  7. ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ

ಇದನ್ನೂ ಓದಿ : BY Vijayendra : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಯಾವಾಗ? ವಿಜಯೇಂದ್ರ ನೀಡಿದ್ದಾರೆ ಸುಳಿವು!

ಉಳಿದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೀಗಿದೆ

  1. ಚಿಕ್ಕೋಡಿ (ಸಾಮಾನ್ಯ ಕ್ಷೇತ್ರ): ಪ್ರಕಾಶ್ ಹುಕ್ಕೇರಿ / ಲಕ್ಷಣರಾವ್ ಚಿಂಗಳೆ/ ಗಣೇಶ್ ಹುಕ್ಕೇರಿ, ಪ್ರಿಯಾಂಕಾ ಜಾರಕಿಹೊಳಿ
  2. ಬೆಳಗಾವಿ (ಸಾಮಾನ್ಯ): ಕಿರಣ್ ಸಾಧುನವರ,‌ ಮೃಣಾಲ್ ಹೆಬ್ಬಾಳ್ಕರ್, ಡಾ. ಗಿರೀಶ್ ಸೋನವಾಲ್ಕರ್, ಸಚಿವ ಸತೀಶ್ ಜಾರಕಿಹೊಳಿ‌
  3. ಬಾಗಲಕೋಟೆ (ಸಾಮಾನ್ಯ): ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರ್‌ನಾಯಕ್‌ , ಆನಂದ್ ನ್ಯಾಮಗೌಡರ್
  4. ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು): ಡಾ. ರಾಧಾಕೃಷ್ಣ
  5. ರಾಯಚೂರು (ಪರಿಶಿಷ್ಟ ಪಂಗಡ ಮೀಸಲು): ರವಿಕುಮಾರ್ / ಕುಮಾರನಾಯಕ/ಗ್ರಾಮೀಣ ಶಾಸಕ ಬಸನಗೌಡ ದದ್ದಲ್
  6. ಬೀದರ್ (ಸಾಮಾನ್ಯ): ಮಾಜಿ ಶಾಸಕ ರಾಜಶೇಖರ್ ಪಾಟೀಲ್/ ಸಾಗರ ಖಂಡ್ರೆ
  7. ಕೊಪ್ಪಳ (ಸಾಮಾನ್ಯ): ರಾಜಶೇಖರ್ ಹಿಟ್ನಾಳ್, / ಅಮರೇಗೌಡ ಭಯ್ಯಾಪುರ
  8. ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು): ವೆಂಕಟೇಶ್ ಪ್ರಸಾದ್,/ ವಿ.ಎಸ್ ಉಗ್ರಪ್ಪ
  9. ಧಾರವಾಡ (ಸಾಮಾನ್ಯ): ರಜತ್ ಉಳ್ಳಾಗಡ್ಡಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಶಿವಲೀಲಾ ಕುಲಕರ್ಣಿ, ವಿನಯ್ ಕುಲಕರ್ಣಿ ಪತ್ನಿ,
  1. ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು): ಬಿಎನ್. ಚಂದ್ರಪ್ಪ, ಮಾಜಿ ಸಂಸದ, ವಿನಯ್ ತಿಮ್ಮಾಪುರ, ಸಚಿವ ಆರ್.ಬಿ ತಿಮ್ಮಾಪುರ ಪುತ್ರ
  2. ಮೈಸೂರು-ಕೊಡಗು (ಸಾಮಾನ್ಯ): ಯತೀಂದ್ರ ಸಿದ್ದರಾಮಯ್ಯ, ವಿಜಯ್ ಕುಮಾರ್, ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ
Exit mobile version