Site icon Vistara News

Parliament Session: ಪೈರಸಿಯಿಂದ ಚಿತ್ರೋದ್ಯಮಕ್ಕೆ 20,000 ಕೋಟಿ ರೂ. ನಷ್ಟ; ಸಂಸತ್‌ನಲ್ಲಿ ಕಳವಳ

Parliament Session

ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ (OTT platforms) ಪೈರಸಿಯನ್ನು (piracy on the film industry) ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (MP Raghav Chadha) ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ (rajya sabha) ಮಾತನಾಡಿದ ಅವರು, ಚಲನಚಿತ್ರೋದ್ಯಮದ ಮೇಲೆ ಪೈರಸಿಯ ತೀವ್ರ ಆರ್ಥಿಕ ಪರಿಣಾಮವನ್ನು ಬೀರುತ್ತಿದೆ. ವಾರ್ಷಿಕ 20,000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಪೈರಸಿಯಿಂದಾಗಿ ಕಲಾವಿದರ ವರ್ಷಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಈ ವ್ಯಾಪಕ ಸಮಸ್ಯೆಯಿಂದ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಉದ್ಯಮದ ಆರ್ಥಿಕ ಸದೃಢತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದ ಚಡ್ಡಾ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲೇ ಪೈರಸಿಯು ಶೇ. 62 ಹೆಚ್ಚಳವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಟ್ವೀಟ್‌ನಲ್ಲೂ ಈ ಕುರಿತು ಮಾಹಿತಿ ಹಂಚಿಕೊಂಡ ಆಪ್ ನಾಯಕ ಪರಿಸ್ಥಿತಿಯ ಗಂಭೀರತೆ ಬಗ್ಗೆ ಎಲ್ಲರ ಗಮನ ಸೆಳೆಯುವ ಅಗತ್ಯವಿದೆ ಎಂದು ತಿಳಿಸಿದರು.


ಪೈರಸಿ ಎನ್ನುವುದು ಚಲನಚಿತ್ರೋದ್ಯಮದಲ್ಲಿ ಮತ್ತು ಈಗ ಒಟಿಟಿ ಪ್ರಪಂಚದಲ್ಲಿಯೂ ವ್ಯಾಪಕವಾಗಿರುವ ಪ್ಲೇಗ್‌ನಂತೆ ಹರಡುತ್ತಿದೆ. ಸಾಂಕ್ರಾಮಿಕದ ಸಮಯದಲ್ಲೇ ಆನ್‌ಲೈನ್ ಪೈರಸಿ ಶೇ. 62ರಷ್ಟು ಏರಿಕೆ ಕಂಡಿದೆ. ಒಂದು ವರ್ಷದ ಹಿಂದೆ ಸಿನಿಮಾಟೋಗ್ರಾಫಿಕ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದೇವೆ. ಆದರೆ ಇದು ಆನ್‌ಲೈನ್ ಪೈರಸಿ ವಿರುದ್ಧ ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ. ಇದು ಮಲ್ಟಿಪ್ಲೆಕ್ಸ್‌ಗಳಲ್ಲಿ ಆಂಟಿ ಕ್ಯಾಮ್ ರೆಕಾರ್ಡಿಂಗ್ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

ಸೀಮಿತ ವ್ಯಾಪ್ತಿ ಹೊಂದಿರುವ ಈಗಿನ ಕಾನೂನನ್ನು ಟೀಕಿಸಿದ ಅವರು, ಇದು ಡಿಜಿಟಲ್ ಪೈರಸಿಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಸಮರ್ಥವಾಗಿಲ್ಲ. ಇದರಿಂದ ಪೈರಸಿ ಹಾವಳಿ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸೂಕ್ತವಾದ ಕಾನೂನನ್ನು ಪರಿಚಯಿಸುವಂತೆ ಅವರು ಸರ್ಕಾರಕ್ಕೆ ತಿಳಿಸಿದರು.

Exit mobile version