Parliament Session: ಪೈರಸಿಯಿಂದ ಚಿತ್ರೋದ್ಯಮಕ್ಕೆ 20,000 ಕೋಟಿ ರೂ. ನಷ್ಟ; ಸಂಸತ್‌ನಲ್ಲಿ ಕಳವಳ - Vistara News

ರಾಜಕೀಯ

Parliament Session: ಪೈರಸಿಯಿಂದ ಚಿತ್ರೋದ್ಯಮಕ್ಕೆ 20,000 ಕೋಟಿ ರೂ. ನಷ್ಟ; ಸಂಸತ್‌ನಲ್ಲಿ ಕಳವಳ

ಪೈರಸಿಯಿಂದಾಗಿ ಕಲಾವಿದರ ವರ್ಷಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಈ ವ್ಯಾಪಕ ಸಮಸ್ಯೆಯಿಂದ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಉದ್ಯಮದ ಆರ್ಥಿಕ ಸದೃಢತೆಗೆ ಧಕ್ಕೆಯಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ ಆನ್ಲೈನ್ ನಲ್ಲಿ ಪೈರಸಿಯು ಶೇ. 62 ಹೆಚ್ಚಳವಾಗಿದೆ ಎಂದು ರಾಜ್ಯಸಭೆಯಲ್ಲಿ (Parliament Session) ಸಂಸದ ರಾಘವ್ ಚಡ್ಡಾ ಕಳವಳ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Parliament Session
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ (OTT platforms) ಪೈರಸಿಯನ್ನು (piracy on the film industry) ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (MP Raghav Chadha) ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ (rajya sabha) ಮಾತನಾಡಿದ ಅವರು, ಚಲನಚಿತ್ರೋದ್ಯಮದ ಮೇಲೆ ಪೈರಸಿಯ ತೀವ್ರ ಆರ್ಥಿಕ ಪರಿಣಾಮವನ್ನು ಬೀರುತ್ತಿದೆ. ವಾರ್ಷಿಕ 20,000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಪೈರಸಿಯಿಂದಾಗಿ ಕಲಾವಿದರ ವರ್ಷಗಳ ಪರಿಶ್ರಮ ವ್ಯರ್ಥವಾಗುತ್ತಿದೆ. ಈ ವ್ಯಾಪಕ ಸಮಸ್ಯೆಯಿಂದ ಕಲಾವಿದರ ಸೃಜನಶೀಲ ಪ್ರಯತ್ನಗಳು ಮತ್ತು ಉದ್ಯಮದ ಆರ್ಥಿಕ ಸದೃಢತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದ ಚಡ್ಡಾ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲೇ ಪೈರಸಿಯು ಶೇ. 62 ಹೆಚ್ಚಳವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಟ್ವೀಟ್‌ನಲ್ಲೂ ಈ ಕುರಿತು ಮಾಹಿತಿ ಹಂಚಿಕೊಂಡ ಆಪ್ ನಾಯಕ ಪರಿಸ್ಥಿತಿಯ ಗಂಭೀರತೆ ಬಗ್ಗೆ ಎಲ್ಲರ ಗಮನ ಸೆಳೆಯುವ ಅಗತ್ಯವಿದೆ ಎಂದು ತಿಳಿಸಿದರು.


ಪೈರಸಿ ಎನ್ನುವುದು ಚಲನಚಿತ್ರೋದ್ಯಮದಲ್ಲಿ ಮತ್ತು ಈಗ ಒಟಿಟಿ ಪ್ರಪಂಚದಲ್ಲಿಯೂ ವ್ಯಾಪಕವಾಗಿರುವ ಪ್ಲೇಗ್‌ನಂತೆ ಹರಡುತ್ತಿದೆ. ಸಾಂಕ್ರಾಮಿಕದ ಸಮಯದಲ್ಲೇ ಆನ್‌ಲೈನ್ ಪೈರಸಿ ಶೇ. 62ರಷ್ಟು ಏರಿಕೆ ಕಂಡಿದೆ. ಒಂದು ವರ್ಷದ ಹಿಂದೆ ಸಿನಿಮಾಟೋಗ್ರಾಫಿಕ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದೇವೆ. ಆದರೆ ಇದು ಆನ್‌ಲೈನ್ ಪೈರಸಿ ವಿರುದ್ಧ ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ. ಇದು ಮಲ್ಟಿಪ್ಲೆಕ್ಸ್‌ಗಳಲ್ಲಿ ಆಂಟಿ ಕ್ಯಾಮ್ ರೆಕಾರ್ಡಿಂಗ್ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

ಸೀಮಿತ ವ್ಯಾಪ್ತಿ ಹೊಂದಿರುವ ಈಗಿನ ಕಾನೂನನ್ನು ಟೀಕಿಸಿದ ಅವರು, ಇದು ಡಿಜಿಟಲ್ ಪೈರಸಿಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಸಮರ್ಥವಾಗಿಲ್ಲ. ಇದರಿಂದ ಪೈರಸಿ ಹಾವಳಿ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸೂಕ್ತವಾದ ಕಾನೂನನ್ನು ಪರಿಚಯಿಸುವಂತೆ ಅವರು ಸರ್ಕಾರಕ್ಕೆ ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

VISTARANEWS.COM


on

ಚೆನ್ನೈ: ತಮಿಳು ನಟ ವಿಜಯ್‌ ಮುಖ್ಯಮಂತ್ರಿ ಆಗಿರುವುದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ ಎಂದು ತಮಿಳು ನಟ, ಸೂಪರ್‌ ಸ್ಟಾರ್‌ ರಜನೀಕಾಂತ್‌ ಸ್ಪಷ್ಟಪಡಿಸಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ಪ್ರಬಲ ಮೈತ್ರಿಕೂಟಗಳನ್ನು ಸೋಲಿಸಿ ವಿಜಯ್‌ ಸಿಎಂ ಆಗಿದ್ದಾರೆ. ಇದರಿಂದ ನನಗೆ ಯಾವುದೇ ಅಸೂಯೆ ಇಲ್ಲ. ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ನಾನು ರಾಜಕೀಯ ಪ್ರವೇಶಿಸಿದ್ದರೆ ಶೇ.100 ರಷ್ಟು ಯಶಸ್ಸು ಸಾಧಿಸುತ್ತಿದ್ದೆ. ಆದರೆ ನಾನು ರಾಜಕೀಯದಿಂದ ದೂರ ಸರಿದು ಬಹಳ ದಿನಗಳಾಗಿವೆ ಎಂದು ಹೇಳಿದ್ದಾರೆ.

ವಿಜಯ್‌ ಮತ್ತು ನನ್ನ ನಡುವೆ ಒಂದು ಜನರೇಶನ್‌ ಗ್ಯಾಪ್‌ ಇದೆ. ನಮ್ಮಿಬ್ಬರ ನಡುವೆ ಸುಮಾರು 25 ವರ್ಷದ ಅಂತರವಿದೆ. ಅವರ ಬಗ್ಗೆಯಾಗಲಿ, ಅವರ ಸಿಎಂ ಆಗಿರುವುದಕ್ಕಾಗಲಿ ನನಗೆ ಯಾವುದೇ ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಜಯ್‌ ಸಿಎಂ ಆದ ತಕ್ಷಣವೇ ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ರಜನೀಕಾಂತ್‌ ತಿಳಿಸಿದರು.

ಚುನಾವಣೆ ಬಳಿಕ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳ ಕುರಿತೂ ರಜನೀಕಾಂತ್‌ ಪ್ರತಿಕ್ರಿಯೆ ನೀಡಿದರು. ಚುನಾವಣೆ ನಂತರ ನನ್ನ ವಿರುದ್ಧ ಅನೇಕ ಟೀಕೆಗಳು ಬರುತ್ತಿವೆ. ನಾನು ಅವಕ್ಕೆ ಪ್ರತಿಕ್ರಿಯಿಸದಿದ್ದರೆ ಅವು ಸತ್ಯ ಎಂದು ಭಾವಿಸುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿ ಮಾಡಿದ ವಿಚಾರಕ್ಕೂ ಸ್ಪಷ್ಟನೆ ನೀಡಿದ ರಜನೀಕಾಂತ್‌, ಸ್ಟಾಲಿನ್‌ ಮತ್ತು ನನ್ನ ಸ್ನೇಹ ರಾಜಕೀಯವನ್ನೂ ಮೀರಿದ್ದು, ನಮ್ಮ ಸ್ನೇಹಕ್ಕೆ ಸುಮಾರು 35 ವರ್ಷಗಳ ಇತಿಹಾಸ ಇದೆ ಎಂದು ಹೇಳಿದರು.

“ಕೊಳತ್ತೂರಿನಲ್ಲಿ ಸ್ಟಾಲಿನ್‌ ಸೋತಿದ್ದಕ್ಕೆ ನನಗೆ ಬೇಸರವಾಯಿತು. ಸ್ನೇಹಿತನಾಗಿ ಅವರನ್ನು ಭೇಟಿಯಾಗಿ ಸಮಾಧಾನ ಮಾಡಿದ್ದೇನೆ. ಆದರೆ ಆ ವಿಚಾರದಲ್ಲೂ ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ, ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ರಜನೀಕಾಂತ್‌ ಹೇಳಿದ್ದಾರೆ.

Continue Reading

Latest

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

VISTARANEWS.COM


on

ತಿರುವನಂತಪುರಂ: ಕೇರಳಂ ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಡಿ. ಸತೀಶನ್‌ ಅವರು ನಾಳೆ ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಿರುವನಂತಪುರಂನ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲರು, ಸತೀಶನ್ ಅವರಿಗೆ ಪ್ರಮಾಣ ವಚನ ಭೋದಿಸಲಿದ್ದಾರೆ. ಇದೇ ವೇಳೆ ಹೊಸ ಸಚಿವ ಸಂಪುಟದ ಸದಸ್ಯರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಈ ಬಾರಿ 21 ಸದಸ್ಯರ ಸಚಿವ ಸಂಪುಟ ರಚನೆಗೆ ಯುಡಿಎಫ್‌ ಸಿದ್ಧತೆ ನಡೆಸಿದೆ. ಈಗಾಗಲೇ ಈ ಕುರಿತು ಮಿತ್ರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿರುವ ಕಾಂಗ್ರೆಸ್‌, ಕ್ಯಾಬಿನೆಟ್‌ ರಚನೆಯ ಕಸರತ್ತು ನಡೆಸುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಕ್ಯಾಬಿನೆಟ್‌ನಲ್ಲಿ ಮುಸ್ಲಿಂ ಲೀಗ್‌ಗೆ ಐದು ಸ್ಥಾನಗಳು ಲಭಿಸಬಹುದು ಎನ್ನಲಾಗಿದೆ.

ಪ್ರಮಾಣವಚನ ಸಮಾರಂಭಕ್ಕೆ ರಾಜಕೀಯ ನಾಯಕರು, ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ.

Continue Reading

ಪ್ರಮುಖ ಸುದ್ದಿ

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

VISTARANEWS.COM


on


ಕೇಂದ್ರ ಚುನಾವಣಾ ಆಯೋಗ 3 ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್‌ಐಆರ್‌) ಘೋಷಣೆ ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದ್ದು, ಮೇ 30ರಿಂದ ಎಸ್‌ಐಆರ್‌ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಹರಿಯಾಣ, ಪಂಜಾಬ್‌, ಚಂಡೀಗಢ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಅರುಣಾಚಲ ಪ್ರದೇಶ, ಮೇಘಾಲಯ, ಜಾರ್ಜಂಡ್‌, ನಾಗಾಲ್ಯಾಂಡ್‌, ತ್ರಿಪುರ, ದಾದರ್‌ ಮತ್ತು ನಗರ ಹವೇಲಿ, ದಮನ್‌ ಮತ್ತು ದಿಯುಗಳಲ್ಲಿ 3 ನೇ ಹಂತದಲ್ಲಿ ಎಸ್‌ಐಆರ್‌ ನಡೆಯಲಿದೆ.
3ನೇ ಹಂತದ ಎಸ್‌ಐಆರ್‌ನಲ್ಲಿ 3.94 ಲಕ್ಷಕ್ಕೂ ಅಧಿಕ ಬೂತ್‌ ಮಟ್ಟದ ಅಧಿಕಾರಿಗಳು 36.73ಕೋಟಿ ಮತದಾರರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ದೇಶದ 10 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ನಡೆಸಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸಗಢ, ಕೇರಳಂ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಗುಜರಾತ್‌, ಮಧ್ಯಪ್ರದೇಶ, ಗೋವಾ ಮತ್ತು ಬಿಹಾರದಲ್ಲಿ ಈಗಾಗಲೇ ಎಸ್‌ಐಆರ್‌ ಕಾರ್ಯ ಮುಗಿದಿದೆ.
ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಎಸ್‌ಐಆರ್‌ ಬಾಕಿ ಇದ್ದು, ಸ್ಥಳೀಯ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಘೋಷಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Continue Reading

Latest

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

VISTARANEWS.COM


on

ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಆಯ್ಕೆಯಾಗಿದ್ದಾರೆ. ಸಾಕಷ್ಟು ಅಳೆದು ತೂಗಿ, ನಾನಾ ಲೆಕ್ಕಾಚಾರಗಳ ಬಳಿಕ ಕೊನೆಗೂ ಕೇರಳದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಎಐಸಿಸಿ ಘೋಷಿಸಿದೆ. ಕೇರಳಂನ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿ.ಡಿ ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಹೆಸರುಗಳು ಪ್ರಮುಖವಾಗಿ ಸಿಎಂ ರೇಸ್​​ನಲ್ಲಿದ್ದವು. ಆದರೆ ಈ ಪೈಕಿ ವಿ.ಡಿ.ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದ ಹೆಸರು ಕೆ.ಸಿ. ವೇಣುಗೋಪಾಲ್‌. ಹೈಕಮಾಂಡ್‌ ಬೆಂಬಲ ಕೂಡಾ ಕೆ.ಸಿ. ವೇಣುಗೋಪಾಲ್ ಅವರಿಗಿತ್ತು. ಹೀಗಿದ್ದರೂ, ವಿ.ಡಿ. ಸತೀಶನ್ ಆಯ್ಕೆ ಆಗಿದ್ದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ.

  1. ವಿ.ಡಿ ಸತೀಶನ್‌ಗೆ ಪಕ್ಷದ 47 ಶಾಸಕರ ಬೆಂಬಲ:
    ಮೂಲಗಳ ಪ್ರಕಾರ ವಿ.ಡಿ ಸತೀಶನ್‌ ಅವರಿಗೆ 63 ಕಾಂಗ್ರೆಸ್ ಶಾಸಕರ ಪೈಕಿ 47 ಶಾಸಕರು ಬೆಂಬಲ ನೀಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
  2. ಸತೀಶನ್‌ಗೆ ಯುಡಿಎಫ್ ಮೈತ್ರಿಕೂಟದ ನಾಯಕರ ಬೆಂಬಲ:
    ಕಾಂಗ್ರೆಸ್‌ ಶಾಸಕರ ಜೊತೆ ಮೈತ್ರಿಕೂಟದ ನಾಯಕರೂ ಬೆಂಬಲಿಸಿದ್ದು, ಸತೀಶನ್‌ ಪಾಲಿಗೆ ವರದಾನವಾಗಿತ್ತು. ಸತೀಶನ್ ಪರವಾಗಿ ಬಲವಾಗಿ ಇಂಡಿಯನ್ ಮುಸ್ಲಿಂ ಲೀಗ್ ಹಾಗೂ ಕೇರಳ ಕಾಂಗ್ರೆಸ್‌ ಪಕ್ಷಗಳು ಬಲವಾಗಿ ನಿಂತಿದ್ದವು.
  3. ಸಿಎಂ ಪದವಿಗೆ ಸತೀಶನ್ ಹಠ:
    ಕೊಟ್ಟರೆ ಮುಖ್ಯಮಂತ್ರಿ ಹುದ್ದೆ ಕೊಡಿ. ಇಲ್ಲದಿದ್ದರೆ ಯಾವ ಪದವಿಯೂ ಬೇಡ ಎಂದು ಸತೀಶನ್ ಪಟ್ಟು ಹಿಡಿದಿದ್ದರು. ಅನ್ಯ ಮುಖ್ಯಮಂತ್ರಿಯ ಕೆಳಗೆ ಕಾರ್ಯ ನಿರ್ವಹಿಸಲು ಸುತಾರಾಂ ಒಪ್ಪಿರಲಿಲ್ಲ. ಕೊನೆಗೂ ಸತೀಶನ್ ಹಠಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ.
  4. ಮೆರಿಟ್ ಕೂಡಾ ಸತೀಶನ್ ಪರವಾಗಿತ್ತು:
    ಮೆರಿಟ್ ಕೂಡಾ ಸತೀಶನ್ ಪರವಾಗಿತ್ತು. ಪ್ರತಿಪಕ್ಷ ನಾಯಕನಾಗಿ ಅವರ ರಣತಂತ್ರದಿಂದಲೇ ಪಿಣರಾಯಿ ಸರ್ಕಾರ ಪರಾಭವಗೊಂಡಿತು ಎಂದು ಹೇಳಲಾಗಿದೆ. ಅಲ್ಲದೆ, ಯುಡಿಎಫ್‌ ಮೈತ್ರಿಕೂಟದ ನಾಯಕನಾಗಿ, ಪಕ್ಷವನ್ನು ಗೆಲುವಿನ ದಡ ತಲುಪಿಸಿದ ಕೀರ್ತಿ ಸತೀಶನ್‌ಗೆ ಸಲ್ಲುತ್ತದೆ. ಅದಲ್ಲದೇ ಇವರು ಕೇರಳ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರು ಹೌದು.
  5. ವೇಣುಗೋಪಾಲ್ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ:
    ಕೇರಳಂ ಕಾಂಗ್ರೆಸ್‌ನಲ್ಲಿ ಸತೀಶನ್ ಬಲ ಹೆಚ್ಚಾಗುತ್ತಿರುವಂತೆಯೇ, ಸಂಭಾವ್ಯ ಭಿನ್ನಮತ ತಪ್ಪಿಸಲು ಹೈಕಮಾಂಡ್ ರಣತಂತ್ರ ರೂಪಿಸುತ್ತು. ಹಾಗಾಗಿಯೇ, ವೇಣುಗೋಪಾಲ್‌ ಮನವೊಲಿಕೆಗೆ ಮುಂದಾಯಿತು. ಅದರಲ್ಲಿ ಯಶಸ್ಸು ಕೂಡಾ ಅದಕ್ಕೆ ಸಿಕ್ಕಿದೆ.
  6. ಕೇರಳಂ ಕಾಂಗ್ರೆಸ್‌ನಲ್ಲಿ ಸತೀಶನ್ ಪರ ಅಲೆ:
    ಕೇರಳಂ ಕಾಂಗ್ರೆಸ್‌ನಲ್ಲಿ ಸತೀಶನ್ ಪರ ಎದ್ದ ಅಲೆ, ಕಾಂಗ್ರೆಸ್‌ ಪಕ್ಷವನ್ನು ಸಂದಿಗ್ಧತೆಗೆ ದೂಡಿತ್ತು. ಪಕ್ಷದಲ್ಲಿ ಆಂತರಿಕ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಬಲವಾಗಿತ್ತು. ಚುನಾವಣೆ ಗೆದ್ದು, ಸಿಎಂ ಆಯ್ಕೆಯಲ್ಲಿ ಸೋತರೆ ಪರಿಣಾಮ ವಿಪರೀತವಾಗಬಹುದು ಎಂದು ಯೋಚಿಸಿದ ಕಾಂಗ್ರೆಸ್, ಸತೀಶನ್ ಹೆಸರಿಗೆ ಮಣೆ ಹಾಕಿತು ಎನ್ನಲಾಗಿದೆ.
Continue Reading
Advertisement
ಪ್ರಮುಖ ಸುದ್ದಿ13 hours ago

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

Latest13 hours ago

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

Latest2 days ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest3 days ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest3 days ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest3 days ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

Latest3 days ago

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

ಪ್ರಮುಖ ಸುದ್ದಿ3 days ago

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

Latest3 days ago

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

Latest3 days ago

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌