ಬೆಂಗಳೂರು: ಲೋಕಸಭಾ ಚುನಾವಣೆಯ ಹೊಸ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ (Poster war) ಜೋರಾಗಿದೆ. ರಾಹುಲ್ ಗಾಂಧಿಯನ್ನು ಹತ್ತು ತಲೆಯ ರಾವಣನಂತೆ ಚಿತ್ರಿಸಿದ್ದು ಸುದ್ದಿಯಾದ ನಡುವೆಯೇ ಕರ್ನಾಟಕ ಕಾಂಗ್ರೆಸ್ ನರೇಂದ್ರ ಮೋದಿಯವರನ್ನು ಮತ ಬೇಟೆಗಾರನಾಗಿ (Narendra Modi Hunter) ಚಿತ್ರಿಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ತೀವ್ರ ಪ್ರತಿದಾಳಿ ನಡೆಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ರೈತ ಹಂತಕ ಎನ್ನುವಂತೆ ಚಿತ್ರಿಸಿದೆ. ಇದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಪೋಸ್ಟರ್ ಸಮರ.
ಮತ ಬೇಟೆಗಾರ ಮೋದಿ ಎಂದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಮತ ಬೇಟೆಗಾರ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿ ಪೋಸ್ಟರ್ ಒಂದನ್ನು ಜಾಲತಾಣದಲ್ಲಿ ಹಾಕಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೂರು ದಿನಕ್ಕೊಮ್ಮೆ ಬರುತ್ತಿದ್ದ ಮೋದಿ ಕರ್ನಾಟಕವೇ ನನ್ನ ಕರ್ಮಭೂಮಿ ಎಂದಿದ್ದರು. ಈಗ ಜನರು ಬರದಿಂದ ತತ್ತರಿಸಿದರೂ ಸುದ್ದಿ ಇಲ್ಲ. ಅವರೊಬ್ಬ ಮತ ಬೇಟೆಗಾರ ಮಾತ್ರ ಎಂದು ಕಾಂಗ್ರೆಸ್ ಹೇಳಿತ್ತು.
ಕಾಂಗ್ರೆಸ್ ಮಾಡಿದ ಟ್ವೀಟ್ ಹೀಗಿದೆ:
ಪ್ರಧಾನಿ ಮೋದಿಯವರು,
ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು?
ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು?
ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು?
ಕರ್ನಾಟಕವೇ ನನ್ನ ಕರ್ಮ ಭೂಮಿ ಎಂದಿದ್ದೇನು?
ಆದರೆ ಈಗ.. ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ.
ಬರದಿಂದ ರಾಜ್ಯದ ಜನ ತತ್ತರಿಸಿದರೂ ಪತ್ತೆ ಇಲ್ಲ.
ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ಕೊಡುವ ಸುದ್ದಿಯೇ ಇಲ್ಲ.
ಪ್ರಧಾನಿಯ ಕೆಲಸ ಮತ ಬೇಟೆ ಮಾತ್ರವೇ?
ಪ್ರಧಾನಿ ಮೋದಿಯವರು,
— Karnataka Congress (@INCKarnataka) October 6, 2023
ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು, ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು, ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು, ಕರ್ನಾಟಕವೇ ನನ್ನ ಕರ್ಮ ಭೂಮಿ ಎಂದಿದ್ದೇನು…
ಆದರೆ ಈಗ..
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ.
ಬರದಿಂದ ರಾಜ್ಯದ ಜನ… pic.twitter.com/DI8Jepu1Xe
ಕಾಂಗ್ರೆಸ್ ಈ ಟ್ವೀಟ್‌ಗೆ ಪರ ಮತ್ತು ವಿರುದ್ಧವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ.
ಕಾವೇರಿ ಏನು ಇವತ್ತು ಆಗಿದ್ದಾ ಸ್ವಾಮಿ? ನಿಮ್ಮ ಸರ್ಕಾರ ಕೇಂದ್ರದಲ್ಲಿ 60 ವರ್ಷ ಇತ್ತು. ಆವಾಗ ಏನು ಉದ್ದು ಹುರಿದು ತಿಂತಾ ಇದ್ರಾ? ಈವಾಗ ಕೇಳೋಕೆ ಬರ್ತಾ ಇದ್ದೀರಾ? ಕರ್ನಾಟಕದಲ್ಲಿ ಬಿಜೆಪಿ ಗವರ್ನಮೆಂಟ್ ಇದ್ದಾಗ ಅವರನ್ನು ಟಾರ್ಗೆರ್ ಮಾಡಿದ್ರಿ. ಈವಾಗ ನಿಮ್ದೇ ಗವರ್ನಮೆಂಟ್ ಇದೆ. ಬಟ್ ಸೆಂಟರ್ ನಾ ಟಾರ್ಗೆಟ್ ಮಾಡೋದು. ಇದೆ ಕೆಲಸ ಆಗಿ ಹೋಗಿದೆ ನಿಮ್ದು. ನೀವು ಬಗೆಹರಿಸಿ ಮತ್ತೆ ನಿಮ್ದೇ ಗವರ್ನಮೆಂಟ್ ಇದೆ ಅಲ್ವಾ? ಎಂದು ಓದುಗರೊಬ್ಬರು ಕೇಳಿದ್ದಾರೆ.
ತಲೆ ಲೆಕ್ಕ ಹಾಕಿದ್ದು ಸಾಕು!
ಮೇಲಿನದ್ದು ಕಾಂಗ್ರೆಸ್ ಟ್ವೀಟ್ ಆದರೆ, ಇನ್ನೊಂದು ಟ್ವೀಟ್ ಸಿದ್ದರಾಮಯ್ಯ ಅವರೇ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣ ಎಂದಿದ್ದಕ್ಕೆ ಪ್ರತಿಯಾಗಿ ʻ10 ತಲೆ ಮೇಲೆ ಫೋಕಸ್ ಮಾಡಿದ್ದು ಸಾಕು. ಒಂದು ಕೋಟಿ ಜನ ಸತ್ರಲ್ವಾ ಅದರ ಮೇಲೆ ಗಮನ ಹರಿಸಿʼ ಎಂದು ಕೆಣಕಲಾಗಿದೆ.
Stop focusing on 10 heads,
— Siddaramaiah (@siddaramaiah) October 6, 2023
Start focusing on the 10000000s of lives lost. pic.twitter.com/KF6XOaci90
ಇದಕ್ಕೆ ಬಿಜೆಪಿ ಪ್ರತ್ಯುತ್ತರ ಏನು ನೋಡಿ…
ಮೋದಿಯನ್ನು ಮತ ಬೇಟೆಗಾರ ಎಂದಿದ್ದಕ್ಕೆ ಪ್ರತಿಯಾಗಿ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ಅವರನ್ನು ರೈತ ಹಂತಕ ಎಂದು ವ್ಯಾಖ್ಯಾನಿಸಿದೆ. ಸಿದ್ದರಾಮಯ್ಯ ಅವರು ಪ್ರಕಟಿಸಿರುವ ಚಿತ್ರ ಮತ್ತು ಮಾತುಗಳಲ್ಲಿ ಕೆಲವು ಮಿಸ್ಟೇಕ್ಸ್ ಇದೆ. ಅದನ್ನು ಸರಿ ಮಾಡಿದ್ದೇವೆ ಎಂದು ಹೇಳಿ ಹೊಸ ಪೋಸ್ಟ್ ಹಾಕಿದೆ.
ಬಿಜೆಪಿಯ ಪೋಸ್ಟ್‌ನಲ್ಲಿ ಏನಿದೆ?
ವಿ.ಸೂ.: ಸಿದ್ದರಾಮಯ್ಯ ಅವರು ಪ್ರಕಟಿಸಿರುವ ಚಿತ್ರದಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ! ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಬಿಟ್ಟು, ಕೇವಲ 100 ದಿವಸದ ಆಡಳಿತದಲ್ಲಿ ರಾಜ್ಯದ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ!
ವಿ.ಸೂ.: @siddaramaiah ಅವರು ಪ್ರಕಟಿಸಿರುವ ಚಿತ್ರದಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ!
— BJP Karnataka (@BJP4Karnataka) October 7, 2023
ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಬಿಟ್ಟು, ಕೇವಲ 100 ದಿವಸದ ಆಡಳಿತದಲ್ಲಿ ರಾಜ್ಯದ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ! https://t.co/2NjAcR8OlZ pic.twitter.com/916OIIgBtR
ಇದನ್ನೂ ಓದಿ : Basava Jayanti: ಶರಣರು ನುಡಿದಂತೆ ನಡೆದರು, ನಾವು ಕೂಡ ಹಾಗೆಯೇ ಸಾಗುತ್ತಿದ್ದೇವೆ: ಸಿದ್ದರಾಮಯ್ಯ