Site icon Vistara News

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

Prime Minister of India

ಪ್ರತಿ ಬಾರಿಯೂ ಲೋಕಸಭಾ ಚುನಾವಣೆ (Lok sabha election) ಘೋಷಣೆಯಾದ ಬಳಿಕ ಮುಂದಿನ ಪ್ರಧಾನಿ (Prime Minister Of India) ಯಾರಾಗಬಹುದು ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ.

ಭಾರತ ಸ್ವಾತಂತ್ರ್ಯವಾದ ಬಳಿಕ 14 ಮಂದಿ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರೆಂದರೆ ಜವಾಹರ್ ಲಾಲ್ ನೆಹರೂ (Jawaharlal Nehru) , ಲಾಲ್ ಬಹಾದ್ದೂರ್ ಶಾಸ್ತ್ರೀ (Lal Bahadur Shastri), ಇಂದಿರಾ ಗಾಂಧಿ (Indira gandhi), ಮೊರಾರ್ಜಿ ದೇಸಾಯಿ (morarji desai), ಚರಣ್ ಸಿಂಗ್ (charan singh), ರಾಜೀವ್ ಗಾಂಧಿ (rajiv gandhi), ವಿಶ್ವನಾಥ್ ಪ್ರತಾಪ್ ಸಿಂಗ್ (vishwanath pratap singh), ಚಂದ್ರಶೇಖರ್ (chandra shekhar) , ಪಿ.ವಿ. ನರಸಿಂಹ ರಾವ್ (p.v. narasimha rao), ಅಟಲ್ ಬಿಹಾರಿ ವಾಜಪೇಯಿ (atal bihari vajpayee), ಎಚ್.ಡಿ. ದೇವೇಗೌಡ (h.d. deve gowda), ಇಂದರ್ ಕುಮಾರ್ ಗುಜ್ರಾಲ್ (inder kumar gujral), ಮನ್ ಮೋಹನ್ ಸಿಂಗ್ (manmohan singh), ನರೇಂದ್ರ ಮೋದಿ (narendra modi). ಇವರಲ್ಲಿ ಕೆಲವರು ಮಾತ್ರ ದೀರ್ಘಾವಧಿಗೆ ಪ್ರಧಾನಿ ಯಾಗಿದ್ದರು. ಅವರು ಯಾರು? ಇಲ್ಲಿದೆ ಮಾಹಿತಿ.


ಇಂದಿರಾ ಗಾಂಧಿ (1966ರಿಂದ1977, 1980ರಿಂದ1984)

ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಒಟ್ಟು 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು. 1975ರಲ್ಲಿ ತುರ್ತುಪರಿಸ್ಥಿತಿಯ ಜಾರಿ, ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸೇರಿದಂತೆ ಹಲವು ದಿಟ್ಟ ಮತ್ತು ವಿವಾದಾತ್ಮಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದರು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದು ಇಂದಿರಾ ಗಾಂಧಿ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಹೀನಾಯ ಹಿನ್ನಡೆ ಕಂಡು ಅಧಿಕಾರ ತ್ಯಜಿಸಬೇಕಾಯಿತು. ಆದರೆ 1980ರಲ್ಲಿ ಅವರು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಮರಳಿದರು. ಆದರೆ 1984ರಲ್ಲಿ ಸಿಖ್‌ ಭಯೋತ್ಪಾದನೆಗೆ ಬಲಿಯಾದರು.


ಅಟಲ್ ಬಿಹಾರಿ ವಾಜಪೇಯಿ (1996, 1998-2004)

ನುರಿತ ವಾಗ್ಮಿ ಮತ್ತು ದೂರದೃಷ್ಟಿಯ ನಾಯಕ, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ 13 ದಿನ, ಮತ್ತೊಮ್ಮೆ 13 ತಿಂಗಳಷ್ಟೇ ಅವರು ಪ್ರಧಾನಿಯಾಗಿದ್ದರು. ಆದರೆ 1998ರಿಂದ 2004ರ ಅವರು ಪೂರ್ಣಾವಧಿ ಪ್ರಧಾನಿಯಾಗಿದ್ದರು. ಒಂದೆಡೆ ಪರಮಾಣು ಪರೀಕ್ಷೆಯ ದಿಟ್ಟತನ ಮತ್ತು ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬೆಳೆಸುವ, ಸಂದರ್ಭ ಬಂದಾಗ ಅದಕ್ಕೆ ಬುದ್ಧಿ ಕಲಿಸುವ ಅವರ ಉಪಕ್ರಮಗಳಿಗಾಗಿ ವಾಜಪೇಯಿ ಸದಾ ನೆನಪಿನಲ್ಲಿರುತ್ತಾರೆ. ಹೆದ್ದಾರಿ ನಿರ್ಮಾಣದ ಕ್ರಾಂತಿ ನಡೆದಿದ್ದು ಅವರ ಕಾಲದಲ್ಲಿ.


ಮನಮೋಹನ್ ಸಿಂಗ್ (2004-2014)

ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಒಟ್ಟು 10 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಉಪಕ್ರಮಗಳಿಂದ ಗುರುತಿಸಲ್ಪಟ್ಟಿದೆ.


ನರೇಂದ್ರ ಮೋದಿ (2014ರಿಂದ ಈಗಿನವರೆಗೆ)

ಪ್ರಸ್ತುತ ಭಾರತದ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿ ಅವರು ಸತತ ಎರಡನೇ ಅವಧಿಯಲ್ಲಿದ್ದಾರೆ. ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾದ ಅವರು ದೇಶದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಇದೇ ವೇಳೆ ಅವರನ್ನು ವಿರೋಧಿಸುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೆ ನಡುವ ಹುಟ್ಟಿಸಿದ ಕೀರ್ತಿ ಖ್ಯಾತಿ ಇವರಿಗಿದೆ. ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿಯಂಥ ಆರ್ಥಿಕ ಸುಧಾರಣೆ ಕ್ರಮಗಳನ್ನೂ ಕೈಗೊಂಡಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸಿ ಶಾಂತಿ ನೆಲೆಸುವ ಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಎರಡನೇ ಅವಧಿಯು 2019ರಲ್ಲಿ ಪ್ರಾರಂಭವಾಯಿತು. ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿವೆ. ಆದರೆ ಮೋದಿ ಅವರು ಮೂರನೇ ಅವಧಿಯಲ್ಲಿ ಪ್ರಧಾನಿಯಾಗಿ ಪೂರ್ಣಾವಧಿ ಮುಗಿಸಿದರೂ ನೆಹರೂ ಮತ್ತು ಇಂದಿರಾ ಗಾಂಧಿ ಅವರ ಸುದೀರ್ಘ ಆಡಳಿತ ಅವಧಿಯ ದಾಖಲೆ ಹಾಗೆಯೇ ಮುಂದುವರಿಯುತ್ತದೆ. ಈ ದಾಖಲೆ ಮುರಿಯಬೇಕೆಂದರೆ ಮೋದಿ ನಾಲ್ಕನೇ ಬಾರಿಯೂ ಪ್ರಧಾನಿ ಆಗಬೇಕಾಗುತ್ತದೆ!

Exit mobile version