Site icon Vistara News

BS Yediyurappa: ಬಿಜೆಪಿ ಹೊಸ ಟೀಮ್‌ನಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ಕೊಡಲಾಗಿದೆ: ಯಡಿಯೂರಪ್ಪ

Former CM BS Yediyurappa

ದಾವಣಗೆರೆ: ರಾಜ್ಯ ಬಿಜೆಪಿಯ (BJP Karnataka) ನೂತನ ಪದಾಧಿಕಾರಿಗಳ (BJP State Office bearers) ನೇಮಕದ ಬಗ್ಗೆ ಯಾರೂ ವಿರೋಧ ಮಾಡಿಲ್ಲ. ಅದನ್ನು ಕೇಂದ್ರದ ನಾಯಕರ ಜತೆ ಮಾತನಾಡಿಯೇ ಬಿಡುಗಡೆ ಮಾಡಲಾಗಿದೆ. ಅಳೆದೂ ತೂಗಿ ಕೆಲಸ ಮಾಡುವವರಿಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಹೇಳಿದರು.

ಈ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎಸ್.‌ ಯಡಿಯೂರಪ್ಪ, ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ‌ ಗೆಲುವು ಸಾಧಿಸುತ್ತದೆ. ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರಂಥ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಇಲ್ಲ. ಮೋದಿ ಅಧಿಕಾರ ನೋಡಿ ಜನ ಆಶೀರ್ವಾದ ಮಾಡುತ್ತಾರೆ. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಯುವಕರ ಉತ್ಸಾಹ ಲೋಕಸಭಾ ಚುನಾವಣೆಗೆ ಪ್ಲಸ್‌ ಆಗಲಿದೆ ಎಂದು ಹೇಳಿದರು.

ಮರು ಜಾತಿ ಗಣತಿ ಮಾಡಲಿ

ಈಗ ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಬೇಕು ಎಂದಿರುವ ಜಾತಿ ಗಣತಿ ವ್ಯವಸ್ಥಿತವಾಗಿಲ್ಲ. ಹೊಸದಾಗಿ ಜಾತಿ ಗಣತಿ ಮಾಡಬೇಕು ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಶಾಲೆಗಳಲ್ಲಿ ಹಿಜಾಬ್ ನಿಷೇಧವನ್ನು ವಾಪಸ್‌ ಪಡೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿ ಬಳಿಕ ಉಲ್ಟಾ ಹೊಡೆದಿದ್ದಾರೆ. ನಮ್ಮ ಒತ್ತಡಕ್ಕೆ ಮಣಿದು ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಸಿಎಂ ಸಿದ್ದರಾಮಯ್ಯ ವಿಷ ಬೀಜ ಬಿತ್ತುವುದನ್ನು ನಿಲ್ಲಿಸಬೇಕು ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಇನ್ನು ಮೂರ್ನಾಲ್ಕು ದಿನ ಕಾದು ನೋಡಿ, ಬೇರೆ ಬೇರೆ ಪಟ್ಟಿ ರಿಲೀಸ್ ಆಗುತ್ತೆ: ವಿಜಯೇಂದ್ರ

ಬೆಂಗಳೂರು: ರಾಜ್ಯ ಬಿಜೆಪಿಯ (BJP Karnataka) ನೂತನ ಪದಾಧಿಕಾರಿಗಳ (BJP State Office bearers) ನೇಮಕವನ್ನು ಕೇಂದ್ರ ನಾಯಕರ ಜತೆಗೆ ಚರ್ಚೆ ಮಾಡಿ‌ ನಿರ್ಧಾರ ಮಾಡಲಾಗಿದೆ. ಪಕ್ಷ ಸಂಘಟನೆಗೆ ಸಮರ್ಥ ನಾಯಕರನ್ನು ನಾನು ಆಯ್ಕೆ‌ ಮಾಡಿಕೊಂಡಿದ್ದೇನೆ. ನನ್ನ ಆಯ್ಕೆಗೆ ಹೈಕಮಾಂಡ್ (BJP High Command) ಅಸ್ತು ಎಂದಿದೆ. ಇನ್ನು ಮೂರ್ನಾಲ್ಕು ದಿನ ಕಾದು ನೋಡಿ, ಬೇರೆ ಬೇರೆ ಪಟ್ಟಿ ರಿಲೀಸ್ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಪಕ್ಷ ಸಂಘಟನೆ ದೃಷ್ಟಿಯನ್ನಿಟ್ಟುಕೊಂಡು ಸಮರ್ಥ ನಾಯಕರ ಟೀಂ ಕಟ್ಟಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಿಮ್ಮ‌ ವಿರುದ್ಧ ಮಾತನಾಡುವ ನಾಯಕರನ್ನು ದೂರ ಇಟ್ಟಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ಇನ್ನು ಮೂರ್ನಾಲ್ಕು ದಿನದಲ್ಲಿ ಬೇರೆ ಬೇರೆ ಪಟ್ಟಿ ರಿಲೀಸ್ ಆಗಲಿದ್ದು, ಕಾದು ನೋಡಿ ಎಂದು ಹೇಳಿದ್ದಾರೆ.

ವಿಜಯೇಂದ್ರ‌ ಟೀಮಲ್ಲಿ ಯಾರೆಲ್ಲ ಇದ್ದಾರೆ?

ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ. ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ (Murugesh Nirani), ಬೈರತಿ ಬಸವರಾಜ್‌ (Byrathi Basavaraj) ಅವರು ಉಪಾಧ್ಯಕ್ಷರಾಗಿದ್ದರೆ (Vice president), ಮತ್ತೊಬ್ಬ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ (V Sunil Kumar) ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ (BJP State General Secretary) ನೇಮಕಗೊಂಡಿದ್ದಾರೆ. 10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಯಾರಿಗೆ ಯಾವ ಹುದ್ದೆ; ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಹತ್ತು ಉಪಾಧ್ಯಕ್ಷರು ಇವರು: ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ (ಯಾದಗಿರಿ), ಎನ್ ಮಹೇಶ್ (ಚಾಮರಾಜನಗರ), ಅನಿಲ್ ಬೆನಕೆ (ಬೆಳಗಾವಿ), ಹರತಾಳು ಹಾಲಪ್ಪ (ಶಿವಮೊಗ್ಗ), ರೂಪಾಲಿ ನಾಯಕ್ (ಉತ್ತರ ಕನ್ನಡ), ಡಾ. ಬಸವರಾಜ್ ಕೇಲಗಾರ (ಹಾವೇರಿ), ಮಾಳವಿಕಾ ಅವಿನಾಶ್ (ಬೆಂಗಳೂರು) ಹಾಗೂ ಎಂ. ರಾಜೇಂದ್ರ (ಮೈಸೂರು) ಅವರನ್ನು ನೇಮಿಸಲಾಗಿದೆ.

ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕುಡಚಿಯ ಪಿ ರಾಜೀವ್, ಬೆಂಗಳೂರಿನ ನಂದೀಶ್ ರೆಡ್ಡಿ, ಹಾಸನ ಪ್ರೀತಮ್ ಗೌಡ ನೇಮಕಗೊಂಡಿದ್ದಾರೆ.

10 ಮಂದಿ ರಾಜ್ಯ ಕಾರ್ಯದರ್ಶಿಗಳು ಇವರು

ಬೀದರ್‌ನ ಶೈಲೇಂದ್ರ ಬೆಲ್ದಾಳೆ, ಶಿವಮೊಗ್ಗ ಡಿ.ಎಸ್ ಅರುಣ್, ಕಲಬುರಗಿಯ ಬಸವರಾಜ್ ಮತ್ತಿಮೋಡ್, ಚಿಕ್ಕಬಳ್ಳಾಪುರದ ಸಿ. ಮುನಿರಾಜು, ತುಮಕೂರಿನ ವಿನಯ್ ಬಿದರೆ, ಮಂಗಳೂರಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೊಪ್ಪಳದ ಶರಣು ತಳ್ಳಕೇರಿ, ಯಾದಗಿರಿಯ ಲಲಿತಾ ಅನಾಪುರ, ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ, ತುಮಕೂರಿನ ಅಂಬಿಕಾ ಹುಲಿನಾಯ್ಕರ್ ಅವರನ್ನು ನೇಮಿಸಲಾಗಿದೆ.

ಬಿಜೆಪಿ ರಾಜ್ಯ ಖಜಾಂಚಿಯಾಗಿ ಬೆಂಗಳೂರಿನ ಸುಬ್ಬ ನರಸಿಂಹ ಅವರನ್ನು ಮುಂದುವರಿಸಲಾಗಿದೆ.

ಇದನ್ನೂ ಓದಿ: CM Siddaramaiah : ಏಯ್‌ ಬಸವೇಗೌಡ, ಇನ್ನೂ 25 ವರ್ಷ ಬದುಕ್ತೀನಿ ಕಣೋ ಎಂದ ಸಿದ್ದರಾಮಯ್ಯ

ವಿವಿಧ ಮೋರ್ಚಾಗಳ ರಾಜ್ಯಾಧ್ಯಕ್ಷರು ಇವರು

ಮಹಿಳಾ ಮೋರ್ಚಾ: ಸಿ ಮಂಜುಳಾ (ಮಾಜಿ ಮಹಿಳಾ ಆಯೋಗ ಅಧ್ಯಕ್ಷೆ)
ಯುವ ಮೋರ್ಚಾ: ಧೀರಜ್ ಮುನಿರಾಜು (ದೊಡ್ಡಬಳ್ಳಾಪುರ ಶಾಸಕ)
ಎಸ್ಟಿ ಮೋರ್ಚಾ: ಬಂಗಾರು ಹನುಮಂತ್, ಬಳ್ಳಾರಿ
ಎಸ್ಸಿ ಮೋರ್ಚಾ: ಎಸ್ ಮಂಜುನಾಥ್ @ ಸಿಮೆಂಟ್ ಮಂಜು (ಸಕಲೇಶಪುರ ಶಾಸಕ)
ಒಬಿಸಿ ಮೋರ್ಚಾ: ರಘು ಕೌಟಿಲ್ಯ. ಮೈಸೂರು
ರೈತ ಮೋರ್ಚಾ: ಎ.ಎಸ್ ಪಾಟೀಲ್ ನಡಹಳ್ಳಿ (ಮಾಜಿ ಶಾಸಕ), ವಿಜಯಪುರ
ಅಲ್ಪಸಂಖ್ಯಾತ ಮೋರ್ಚಾ: ಅನಿಲ್‌ ಥಾಮಸ್‌, ಮೈಸೂರು

Exit mobile version