ಬೆಂಗಳೂರು: ಸನಾತನ ಧರ್ಮದ (Sanathana Dharma) ನಾಶಕ್ಕೆ ಸಂಬಂಧಿಸಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ನೀಡಿದ ಹೇಳಿಕೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಅದರ ಜತೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ (BJP and Congress) ನಾಯಕರ ನಡುವಿನ ಜಟಾಪಟಿಗೂ ಕಾರಣವಾಗಿದೆ.
ಉದಯನಿಧಿ ಸ್ಟಾಲಿನ್ ಅವರು ನೀಡಿದ ಹೇಳಿಕೆ ಮತ್ತು ಅದಕ್ಕೆ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರು ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ʻʻಹೊಟ್ಟೆಯಲ್ಲಿ ಏನೋ ಸೋಂಕು ಇದೆ ಎಂದಿಟ್ಟುಕೊಳ್ಳಿ. ಆಗ ನೀವು ತಲೆಯನ್ನೇ ಕಡಿಯುತ್ತೀರಾʼ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು ʻಬಿ.ಎಲ್. ಸಂತೋಷ್‌ಜಿ.. ಸೋಂಕು ಇದೆ ಎನ್ನುವುದನ್ನು ಒಪ್ಪಿಕೊಂಡ್ರಲ್ವಾ? ಅಷ್ಟು ಸಾಕುʼʼ ಎಂದಿದ್ದಾರೆ.
ಹಾಗಿದ್ದರೆ ಇವರಿಬ್ಬರ ನಡುವೆ ನಡೆದ ವಾದ-ವಿವಾದಗಳೇನು? ಇಲ್ಲಿದೆ ವಿವರ
ಪ್ರಿಯಾಂಕ ಖರ್ಗೆ ಹೇಳಿದ್ದೇನು?
ಯಾವ ಧರ್ಮವು ಸಮಾನತೆಯನ್ನು ಪ್ರತಿಪಾದಿಸುವುದಿಲ್ಲವೋ? ಯಾವುದು ಮಾನವ ಘನತೆಯನ್ನು ಖಾತ್ರಿಪಡಿಸುವುದಿಲ್ಲವೋ ನನ್ನ ಪ್ರಕಾರ ಅದು ಧರ್ಮವೇ ಅಲ್ಲ. ಯಾವ ಧರ್ಮವು ಸಮಾನವಾದ ಹಕ್ಕುಗಳನ್ನು ನೀಡುವುದಿಲ್ಲವೋ, ಯಾವುದು ನಿಮ್ಮನ್ನು ಮನುಷ್ಯರಂತೆ ನೋಡುವುದಿಲ್ಲವೋ ಅದು ಒಂದು ರೋಗವೇ.. ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
#WATCH | Bengaluru, Karnataka: On Tamil Nadu Minister Udhayanidhi Stalin's 'Sanatana Dharma should be eradicated' remark, Karnataka Minister Priyank Kharge says, "Any religion that does not promote equality or does not ensure you have the dignity of being human is not religion,… pic.twitter.com/lQcpB5s6aY
— ANI (@ANI) September 4, 2023
ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಂತೋಷ್ ಪ್ರತಿಕ್ರಿಯೆ ಏನಿತ್ತು?
ಹಾಗಿದ್ದರೆ, ಒಂದು ವೇಳೆ ಹೊಟ್ಟೆಯಲ್ಲಿ ಸೋಂಕು ಇದ್ದರೆ ನೀವು ತಲೆಯನ್ನೇ ಕತ್ತರಿಸುತ್ತೀರಾ? ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರಶ್ನೆ ಮಾಡಿದ್ದರು.
So if there is a infection in somebody’s stomach , you chop off the head …?? https://t.co/bOKkNeLcFZ
— B L Santhosh (@blsanthosh) September 4, 2023
ಸಮಸ್ಯೆ ಇರುವುದನ್ನು ಒಪ್ಪಿಕೊಂಡ್ರಲ್ವಾ? ಸಾಕು ಎಂದ ಪ್ರಿಯಾಂಕ್
ಬಿ.ಎಲ್. ಸಂತೋಷ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ಬಿ.ಎಲ್. ಸಂತೋಷ್ ಅವರು ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
“ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.” ಎಂದು ಟ್ವೀಟ್ ಆರಂಭಿಸಿರುವ ಅವರು, ಬಿ.ಎಲ್.ಸಂತೋಷ್ ಅವರೇ ಟ್ರೀಟ್ ಮೆಂಟ್ ಮಾಡಬೇಕಾದ ಒಂದು ಸೋಂಕು ಇರುವುದನ್ನು ಒಪ್ಪಿಕೊಂಡಿರುವುದು ಸಂತೋಷದ ಸಂಗತಿ ಎಂದಿದ್ದಾರೆ.
ಕಳೆದ ಸಾವಿರಾರು ವರ್ಷಗಳಿಂದ ಹಲವಾರು ಸೋಂಕುಗಳು ಇದ್ದವು. ಈಗಲೂ ನಮ್ಮ ನಡುವೆ ಅವುಗಳು ಇವೆ. ಮನುಷ್ಯರ ನಡುವೆ ತಾರತಮ್ಯ ಮಾಡುವ ಸೋಂಕು, ಮನುಷ್ಯರಾಗಿ ಗೌರವವನು ನೀಡದ ಸೋಂಕು ಎಂದು ಪ್ರಿಯಾಂಕ್ ಹೇಳಿದ್ದಾರೆ.
ನಾನು ನಿಮ್ಮಷ್ಟು ಬುದ್ಧಿವಂತನಲ್ಲ.. ಹೀಗಾಗ ಕೆಲವು ವಿಚಾರಗಳಿಗೆ ಸಂಬಂಧಿಸಿ ನನಗೆ ಜ್ಞಾನ ಕೊಡಿ ಎಂದು ಕೇಳಿರುವ ಪ್ರಿಯಾಂಕ್ ಖರ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
- ಸಮಾಜದಲ್ಲಿ ಈ ನಿಯಮಗಳನ್ನು ಮಾಡಿದವರು ಯಾರು?
- ಕೆಲವರಿಗೆ ಇತರರಿಗೆ ಹೆಚ್ಚು ಹಕ್ಕುದಾರಿಕೆ ಸಿಗಲು ಕಾರಣವಾಗಿದ್ದು ಏನು?
- ನಮ್ಮನ್ನು ಜಾತಿಯ ಆಧಾರದಲ್ಲಿ ವಿಭಜನೆ ಮಾಡಿದವರು ಯಾರು?
- ಕೆಲವು ಮನುಷ್ಯರು ಯಾಕೆ ಅಸ್ಪೃಶ್ಯರು?
- ಅವರು ಇವತ್ತಿಗೂ ದೇವಸ್ಥಾನ ಪ್ರವೇಶಿಸುವಂತಿಲ್ಲ ಯಾಕೆ?
- ಮಹಿಳೆಯರನ್ನು ಕೀಳಾಗಿ ಕಾಣುವ ಪದ್ಧತಿಗಳನ್ನು ಆರಂಭ ಮಾಡಿದ್ದು ಯಾರು?
- ಅಸಮಾನತೆ ಮತ್ತು ದಮನಕಾರಿ ನೀತಿಗೆ ಕಾರಣವಾದ ಸಾಮಾಜಿಕ ಸ್ವರೂಪ ಆಧರಿತ ಜಾತಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಇಲ್ಲಿ ಯಾರೂ ತಲೆ ಕಡಿಯಿರಿ ಎಂದು ಹೇಳುತ್ತಿಲ್ಲ. ಈ ಸೋಂಕುಗಳನ್ನು ಸಮಾನ ಹಕ್ಕು ಮತ್ತು ಗೌರವಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳುತ್ತಿದ್ದಾರೆ ಅಷ್ಟೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿರುವುದು ಸಂವಿಧಾನ ಮತ್ತು ನೀವು ಹಾಗೂ ನಿಮ್ಮ ಸಂಘಟನೆ ಅದಕ್ಕೆ ವಿರುದ್ಧವಾಗಿದ್ದೀರಿ.
ಸಂತೋಷ್ ಜಿ ಅವರೇ ನೀವು ಕರ್ನಾಟಕದವರಿದ್ದೀರಿ. ದಯವಿಟ್ಟು ಗುರು ಬಸವಣ್ಣರ ಸಂದೇಶವನ್ನು ಪ್ರಚಾರ ಮಾಡಿ. ಇದರಿಂದ ನಮಗೆ ಸಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. “ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯಾ ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯಾ.”
“ದಯವಿಲ್ಲದ ಧರ್ಮವಾವುದಯ್ಯಾ ?⁰ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ⁰ದಯವೇ ಧರ್ಮದ ಮೂಲವಯ್ಯಾ⁰ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.”
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 5, 2023
So glad that @blsanthosh avare agrees that there is an infection that needs treatment.
There have been many infections for over thousands of years & is still prevalent… https://t.co/tMxJK6kOoc