ಕಲಬುರಗಿ: ʻʻಕರ್ನಾಟಕದಲ್ಲಿ ಪಾಕಿಸ್ತಾನ ಮಕ್ಕಳು (Pakistani Children) ಹುಟ್ಟಿಕೊಳ್ಳುತ್ತಿದ್ದಾರೆ. ರಾಜ್ಯ ಪಾಕಿಸ್ತಾನದ ಅಡ್ಡೆಯಾಗುತ್ತಿದೆʼʼ ಎಂದು ವಿಧಾನಸಭೆಯ ವಿರೋಧ ಪಕ್ಷ ನಾಯಕ ಆರ್. ಅಶೋಕ್ (R Ashok) ಆರೋಪಿಸಿದ್ದಾರೆ. ಕಲಬುರಗಿಯ ಐವಾನ್ ಶಾಯಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಿಗಳಿಗೆ ರಾಜ್ಯದಲ್ಲಿ ಬೆಳೆಯಲು ಅವಕಾಶ ನೀಡಲಾಗುತ್ತಿದೆ. ಅವರಿಗೆ ಬರ್ತ್ ಸರ್ಟಿಫಿಕೇಟ್ (Birth Certificate) ಕೂಡಾ ಕೊಡ್ತಿದ್ದಾರೆ ಎಂದು ಆರೋಪಿಸಿದರು.
ʻʻಬೆಂಗಳೂರಿನ ಜನ ಭಯೋತ್ಪಾದಕ ಚಟುವಟಿಕೆಯಿಂದ (Terror Activities) ತತ್ತರಿಸಿ ಹೋಗಿದ್ದಾರೆ. ಕರ್ನಾಟಕ ರಾಜ್ಯ ಒಂದು ರೀತಿ ಅಶಾಂತಿ ತೋಟ ಆಗುತ್ತಿದೆ.. ದೇಶ ದ್ರೋಹ ಚಟುವಟಿಕೆ ಹಾಗೂ ರಕ್ತದ ಕಲೆಗಳು ಕಾಣುತ್ತಿವೆ. ಕುವೆಂಪು ಅವರು ಕರ್ನಾಟಕವನ್ನು ಶಾಂತಿಯ ತೋಟ ಎಂದಿದ್ದರೆ, ಕಾಂಗ್ರೆಸ್ ಸರ್ಕಾರ ಅದನ್ನು ಅಶಾಂತಿಯ ತೋಟವಾಗಿ ಮಾಡಿದೆ ಎಂದು ಹೇಳಿದರು ಅಶೋಕ್.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜತೆ ಲಿಂಕ್ ಇರುವ ವ್ಯಕ್ತಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಮಾಡಿದವರಲ್ಲಿ ಮೂವರ ಬಂಧನವಾಗಿದೆ. ಆದರೆ, ಇನ್ನೂ ಬಹಳ ಜನ ಇದಕ್ಕೆ ಜೈ ಎಂದಿದ್ದಾರೆ. ಅವರನ್ನು ಕೂಡ ಬಂಧಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ದಿಲ್ಲಿ ನಿವಾಸಿಯಾಗಿದ್ದಾನೆ. ಅವನನ್ನು ದಿಲ್ಲಿಯಿಂದ ಕರೆದುಕೊಂಡು ಬಂದಿದ್ದಾರೆ ಎಂದರೆ ಏನು ಸುಮ್ಮನೆ ಕರೆದುಕೊಂದು ಬರ್ತಾರಾ? ಬಂಧಿತರಲ್ಲಿ ಒಬ್ಬ ಆಗಲೇ ಕಾಂಗ್ರೆಸ್ ಕಾರ್ಯಕರ್ತ ಎಂದು ಒಪ್ಪಿಕೊಡಿದ್ದಾನೆ. ಇನ್ನೊಬ್ಬ ನಾನೇ ಕೂಗಿದ್ದು ಎಂದು ಒಪ್ಪಿಕೊಂಡಿದ್ದಾನೆ. ಅವನ ವಾಯ್ಸ್ ಸರಿ ಹೊಂದುತ್ತಿದೆ ಎನ್ನಲಾಗುತ್ತಿದೆ ಎಂದು ಆರ್. ಅಶೋಕ್ ಅವರು ವಿವರಣೆ ನೀಡಿದ್ದಾರೆ.
ಇಷ್ಟೆಲ್ಲ ಆದಮೇಲೆ ನಾನು ಕಾಂಗ್ರೆಸ್ ಸಚಿವರಿಗೆ ಕೇಳ್ತೇನೆ, ಈಗ ಏನು ಹೇಳ್ತಿರಾ..? ಪ್ರಿಯಾಂಕ ಖರ್ಗೆ ಅವರೇ ಏನು ಹೇಳ್ತಿರಾ? ಈಗ ನಿಮ್ಮ ದ್ವನಿ ಅಡಗಿ ಹೋಗಿದೆಯಾ..! ಎಂದು ಅವರು ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗಿವೆ.. ಕಲಬುರಗಿಯಲ್ಲೇ 15ಕ್ಕೂ ಹೆಚ್ಚು ರಾಜಕೀಯ ಪ್ರೇರಿತ ಕೊಲೆಗಳಾಗಿವೆʼʼ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ನಾಯಕರು ನೀಡುವ ಸಲುಗೆ ಎಂದರು.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಸಂಭವಿಸಿದಾಗ ಡಿ.ಕೆ. ಶಿವಕುಮಾರ್ ಅವರು, ಅವರು ಅಮಾಯಕರು ನಮ್ಮ ಬ್ರದರ್ಶ್ ಎಂದು ಹೇಳಿದ್ದರು. ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣದ ಹಿಂದೆ ಉದ್ಯಮ ದ್ದೇಷ, ಬಿಸಿನೆಸ್ ರೈವರ್ಲಿ ಇರಬಹುದು ಎಂದು ಹೇಳಿಕೆ ನೀಡಿದರು. ಈಗ ಅದು ಭಯೋತ್ಪಾದನಾ ಚಟುವಟಿಕೆ ಎಂದು ಸಾಬೀತಾಗಿದೆ ಎಂದು ನೆನಪಿಸಿದರು.
ಇದನ್ನೂ ಓದಿ :BY Vijayendra : ನಾಸಿರ್ ಹುಸೇನ್ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ
ಎಲ್ಲ ಪರೀಕ್ಷೆಯಲ್ಲಿ ಸಿಎಂ ಫೇಲ್ ಎಂದ ಅಶೋಕ್
ʻʻಸಿಎಂ ಸಿದ್ದರಾಮಯ್ಯ ಅವರು ಪದೇಪದೆ ಒಂದು ಪ್ರಶ್ನೆ ಕೇಳ್ತಾರೆ. ಭಾರತ ಮಾತೆಯ ಮೇಲಿನ ನನ್ನ ಪ್ರೀತಿಯನ್ನು ಪರಿಕ್ಷೆ ಮಾಡೋಕೆ ಆಗುತ್ತಾ ಅಂತ. ಆದರೆ, ಈಗ ಆಗಿರುವ ಎಲ್ಲ ಪರೀಕ್ಷೆಗಲ್ಲಿ ಅವರು ಎಲ್ಲಿ ಪಾಸ್ ಆಗಿದ್ದಾರೆʼʼ ಎಂದು ಪಾಕಿಸ್ತಾನ್ ಜಿಂದಾಬಾದ್ ಮತ್ತು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ ಹೇಳಿದರು.
ಸಿಎಂ ಸಿದ್ದರಾಮಯ್ಯ ಎಲ್ಲಾ ಹಿಂದುಗಳ ವಿರುದ್ಧವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಪಾಕಿಸ್ತಾನದ ಮತ್ತು ಉಗ್ರರ ಸ್ಲೀಪರ್ ಸೆಲ್ ಮಾಡುತ್ತಿದೆ ಎಂದು ಆರೋಪಿಸಿದ ಆರ್ ಅಶೋಕ್ ಅವರು, ಕರ್ನಾಟಕ ಯಾರದೋ ಪ್ರಯೋಗ ಶಾಲೆ ಆಗೋದಕ್ಕೆ ಬಿಡಬೇಡಿ ಎಂದು ಮನವಿ ಮಾಡಿದರು.
ಪಿಎಫ್ ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸ್ ತೆಗೆದಿರಿ, ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ವಾಪಾಸ್ ತೆಗೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರು ತಾನೊಬ್ಬ ಹಿಂದು ವಿರೋಧಿ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಆರ್. ಅಶೋಕ್ ಆರೋಪಿಸಿದರು.