ಬೆಂಗಳೂರು: ರಾಮಮಂದಿರಕ್ಕೆ (Ram Mandir) ಜನರನ್ನು ಕರೆದುಕೊಂಡು ಹೋಗಲು ಬಿಜೆಪಿ (BJP Karnataka) ವ್ಯವಸ್ಥೆ ಮಾಡಿಕೊಳ್ಳಲಿ. ಆದರೆ, ರಾಜ್ಯ ಸರ್ಕಾರದಿಂದ ಅಯೋಧ್ಯೆಗೆ ಕರೆದುಕೊಂಡು ಹೋಗುವ ಯಾವುದೇ ಯೋಜನೆ ಇಲ್ಲ. ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ಇನ್ನು ರಾಮಮಂದಿರಕ್ಕೆ ಹೋಗುವ ವಿಚಾರಕ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವ ದೇವಾಲಯಕ್ಕೂ ಹೋಗಲ್ಲ ನನಗೆ ಭಕ್ತಿ ಇಲ್ಲ, ಏನು ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ರಾಮಮಂದಿರಕ್ಕೆ ಕರೆದುಕೊಂಡು ಹೋಗಲಿ. ತೀರ್ಥ ಯಾತ್ರೆ ತಾನೇ ಮಾಡಿಸಲಿ. ಜನರೂ ಸಹ ಅಲ್ಲಿಗೆ ಹೋಗಿ ನೋಡಿದ ಮೇಲೆ ಬಿಜೆಪಿಯವರ ಬಂಡವಾಳ ಏನೆಂಬುದು ಬಯಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು!
ಸಾಧು ಸಂತರ ಪ್ರಶ್ನೆಗೆ ಉತ್ತರ ಕೊಡಿ
ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಏಕೆ ಎಂದು ನಾವು ಕೇಳಿದ ಪ್ರಶ್ನೆ ಅಲ್ಲ. ಇದು ಸಾಧು ಸಂತರ ಪ್ರಶ್ನೆಯಾಗಿದೆ. ಯಾರಿಂದ ಪ್ರಾಣ ಪ್ರತಿಷ್ಠೆ ಮಾಡಿಸಬೇಕಿತ್ತೋ ಅವರು ಈ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಉತ್ತರ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಾನು ಜನತಾ ಜನಾರ್ದನನ ಭಕ್ತ
ನನಗೆ ಭಕ್ತಿ ಇಲ್ಲ. ಹೀಗಾಗಿ ನಾನು ಯಾವ ದೇವಾಲಯಕ್ಕೂ ಹೋಗಲ್ಲ. ನೀವು ಯಾರಾದರೂ ಬಾರೋ ಪ್ರಿಯಾಂಕ್ ಹೋಗಿಬರೋಣ ಎಂದು ಕರೆದುಕೊಂಡು ಹೋದರೆ ಬರುತ್ತೇನೆ. ಕಲಿಯಲು ಹೋಗುವುದಕ್ಕೆ ಏನಾಗಬೇಕು? ನಾನು ಜನತಾ ಜನಾರ್ದನನ ಭಕ್ತ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಯೋಧ್ಯೆಗೆ ಕರೆದೊಕೊಂಡು ಹೋದರೆ ಬರುತ್ತೇನೆ
ಬಿಜೆಪಿ ಶಾಸಕರು ಎಷ್ಟು ಜನ ರಾಮಾಯಣ ಓದಿದ್ದಾರೆ? ಎಷ್ಟು ಜನರಿಗೆ ಹನುಮಾನ್ ಚಾಲೀಸಾ ಬರುತ್ತದೆ? ನಾನು ಋಷಿಕೇಶ, ಬನಾರಸ್ ಎಲ್ಲ ಕಡೆ ಹೋಗಿದ್ದೇನೆ. ನಾನು ನಂಬಿರುವುದು ಬಸವ ತತ್ವ, ಅಂಬೇಡ್ಕರ್ ತತ್ವ ಮತ್ತು ಸಂವಿಧಾನ ತತ್ವ. ನನಗೆ ಭಕ್ತಿ ಇಲ್ಲ ಏನು ಮಾಡಲಿ? ನೀವು ಯಾರಾದರೂ ಅಯೋಧ್ಯೆಗೆ ಕರೆದುಕೊಂಡು ಹೋದರೆ ಅಧ್ಯಯನ ಮಾಡಲು ಬರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Ram Mandir: ಯುವನಿಧಿ ಹೆಸರಲ್ಲಿ ಯುವಜನತೆಗೆ ಟೋಪಿ ಹಾಕಿದ ನೀವು ರಾಮನಂತೆ ಸತ್ಯವಂತರೇ? ಸಿಎಂಗೆ ಅಶೋಕ್ ಪ್ರಶ್ನೆ
ಜನವರಿ 29ರಿಂದ ಬೆಂಗಳೂರು ಜಿಎಎಫ್‌ಎಕ್ಸ್ ಸಮ್ಮೇಳನ
ಜನವರಿ 29ರಿಂದ ಗೇಮಿಂಗ್ ಮತ್ತು ಅನಿಮೇಷನ್ ಕುರಿತಾಗಿ ಬೆಂಗಳೂರು ಜಿಎಎಫ್‌ಎಕ್ಸ್ ಸಮ್ಮೇಳನ ನಡೆಯಲಿದೆ. ಕರ್ನಾಟಕ ಸರ್ಕಾರ ಮತ್ತು ಅಬೈ ಸಂಯುಕ್ತಾಶ್ರಯದಲ್ಲಿ ಈ ಸಮ್ಮೇಳನ ನಡೆಯುತ್ತಲಿದೆ. ಒಟ್ಟು ಮೂರು ದಿನಗಳ ಕಾಲ ನಡೆಯಲಿದ್ದು, 10 ರಾಷ್ಟ್ರಗಳಿಂದ 32 ಅಂತಾರಾಷ್ಟ್ರೀಯ ಭಾಷಣಕಾರರು ಭಾಗಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಂದ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.