ವಿಧಾನ ಪರಿಷತ್: ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಜಟಾಪಟಿ ಇದೀಗ ವಿಧಾನ ಪರಿಷತ್‌ನಲ್ಲೂ ಪ್ರಸ್ತಾಪವಾಗಿದೆ. ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಇವರ ಕಥೆ ಧಾರಾವಾಹಿಗಳ ರೀತಿಯಲ್ಲಿ ಪ್ರಸ್ತಾಪ ಆಗುತ್ತಿದೆ. ಮಣಿವಣ್ಣನ್ ಅವರು ಸಂಧಾನ ನಡೆಸಿದ್ದು ಎಷ್ಟು ಸರಿ? ಸಿಎಸ್ ಅವರು ಮೌನವಾಗಿಯೇ ಕೂತಿದ್ದಾರೆ. ಕೂಡಲೇ ಇವರನ್ನು ಅಮಾನತು ಮಾಡಬೇಕು. ನೈತಿಕತೆ ಕಳೆದುಕೊಂಡ ನಡೆತೆಗೆಟ್ಟ ಅಧಿಕಾರಿಗಳು ಬೇಕಾ? ಯಾಕೆ ಸಿಎಂ ಇವರನ್ನು ಇನ್ನೂ ಸ್ಥಾನದಲ್ಲಿ ಇಟ್ಟುಕೊಂಡಿದ್ದಾರೆ? ಸಿಎಂ ಯಾರಿಗೆ ಹೆದರುತ್ತಿದ್ದಾರೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: Rohini Sindhuri: ಸಾ.ರಾ. ಮಹೇಶ್-ರೋಹಿಣಿ ಸಿಂಧೂರಿ ಸಂಘರ್ಷ ಅಂತ್ಯ; ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲೇನಿದೆ?
ಇದಕ್ಕೆ ಉತ್ತರ ನೀಡಿದ ಸಚಿವ ಅಶ್ವತ್ಥನಾರಾಯಣ, ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಆಗುತ್ತದೆ. ಬಿಗಿಯಾಗಿ ಕ್ರಮ ವಹಿಸಲು ಸರ್ಕಾರ ಮುಂದಾಗಲಿದೆ. ಈಗಾಗಲೇ ಸ್ಥಳ ನಿಗಧಿ ಮಾಡದೇ ವರ್ಗಾವಣೆ ಮಾಡಲಾಗಿದೆ ಎಂದರು.