Site icon Vistara News

Caste Census Report: ಜಾತಿಗಣತಿ ವರದಿಗೆ ಶಾಮನೂರು ಕೆಂಡಾಮಂಡಲ; ಖಾಸಗಿ ಸರ್ವೇ ಮಾಡಿಸುವ ಎಚ್ಚರಿಕೆ!

Shamanur Shivashankarappa slams caste census report Warning of private survey

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ (Social and Economic Survey) ಜಾತಿ ಗಣತಿ ವರದಿಯನ್ನು (Caste Census report) ರಾಜ್ಯ ಸರ್ಕಾರ ಅಧಿಕೃತವಾಗಿ ಸ್ವೀಕಾರ ಮಾಡಿದ್ದಕ್ಕೆ ಕಾಂಗ್ರೆಸ್ ‌ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಕೆಂಡಾಮಂಡಲರಾಗಿದ್ದಾರೆ. ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಉಪಜಾತಿಗಳು ಸೇರಿದರೆ ಎರಡು ಕೋಟಿಗೂ ಹೆಚ್ಚು ಜನಸಂಖ್ಯೆಯಾಗುತ್ತದೆ. ಅಗತ್ಯ ಬಿದ್ದರೆ ನಾವು ಖಾಸಗಿ ಸರ್ವೇ ಮಾಡಿಸುತ್ತೇವೆ ಎಂದು ಗುಡುಗಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಸರ್ಕಾರ ಮುಂದೆ ಏನು ಮಾಡುತ್ತದೆ ಎಂಬುದನ್ನು ನೋಡೋಣ. ನಾವು ಸುಮ್ಮನೆ ಕೂರೋದಿಲ್ಲ. ಉಪ ಪಂಗಡ ಸೇರಿ ಎರಡು ಕೋಟಿ ಮಂದಿ ಇದ್ದೇವೆ. ಅಗತ್ಯಬಿದ್ದರೆ ನಾವು ಖಾಸಗಿ ಸರ್ವೆ ಮಾಡಿಸುತ್ತೇವೆ. ನಮ್ಮ ಅಂಕಿ-ಅಂಶ ವೈಜ್ಞಾನಿಕವಾಗಿದೆ ಎಂದು ತೋರಿಸುತ್ತೇವೆ. ಸರಿಯಾದ ಜನಗಣತಿ ಮಾಡಲಿ. ಒಂಬತ್ತು ವರ್ಷ ಹಳೆಯದು ಇದು. ಕಾಂತರಾಜು ವರದಿಯಲ್ಲಿ ಇದ್ದಿದ್ದ ಅಂಶಗಳು ಇವು ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಸರಿಯಾಗಿ ಹೇಳಿದ್ದಾರೆ. ನಮ್ಮ ಲಿಂಗಾಯತ ಸಮುದಾಯದಲ್ಲಿ ಉಪ ಜಾತಿ ಸೇರಿಯೇ ಎರಡು ಕೋಟಿ ಮಂದಿ ಇದ್ದಾರೆ. ಈಗಿನ ವರದಿಯನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾಗಿದೆ. ಇನ್ನೂ ನಾವು ಖಾಸಗಿ ಸರ್ವೆ ಮಾಡಿಸಿಲ್ಲ. ಆದರೆ, ಅದರ ಬಗ್ಗೆ ಆಲೋಚನೆ ಇದೆ. ಅವಶ್ಯಕತೆ ಬಿದ್ದರೆ ವೀರಶೈವ ಮಹಾಸಭಾದಿಂದ ಜನಗಣತಿ ಮಾಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ವೀರಶೈವರ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ

ಸರ್ಕಾರ ಈ ವರದಿಯನ್ನು ಏನು ಮಾಡುತ್ತದೆ ಎಂಬುದನ್ನು ನೋಡುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ. ಅಹಿಂದ ಜನರು ಜಾಸ್ತಿ ಇದ್ದಾರೆ ಎಂಬುದನ್ನು ಇವತ್ತಿನ ಪತ್ರಿಕೆಗಳಲ್ಲಿ ನೋಡಿದೆ. ಎಲ್ಲರಿಗಿಂತ ವೀರಶೈವರು ಹೆಚ್ಚಾಗಿದ್ದಾರೆ. ವೈಜ್ಞಾನಿಕವಾಗಿ ವರದಿ ಮಾಡಿಸಲಿ. 9 ವರ್ಷಗಳ ಹಿಂದಿನ ವರದಿ ಇದು. ಉದ್ದೇಶಪೂರ್ವಕವಾಗಿ ವೀರಶೈವರನ್ನು ಕಡಿಮೆ ತೋರಿಸುತ್ತಿದ್ದಾರೆ. ಈ ವರದಿಯಿಂದ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ. ಬೇಕು ಎಂದೇ ಛೂ ಬಿಡುತ್ತಿದ್ದಾರೆ. ಯಾರನ್ನೋ ಛೂ ಬಿಟ್ಟಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವರದಿ ಸ್ವೀಕಾರ ತಪ್ಪಲ್ಲ, ಅಂಗೀಕಾರ ಮಾಡಬಾರದು

ಕಾಂತರಾಜು ಅವರು ಮನೆಯಲ್ಲಿ ಕುಳಿತು ಈ ವರದಿಯನ್ನು ಬರೆದಿದ್ದಾರೆ. ಸರ್ವೆ ಮಾಡಲು ಸರಿಯಾಗಿ ಮನೆಗಳಿಗೆ ಭೇಟಿ ನೀಡಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ಬಗ್ಗೆ ಈಗ ಹೇಳಲ್ಲ. ಈ ಹಿಂದೆ ಲಿಂಗಾಯತ ವಿಚಾರದಲ್ಲಿ ಹಿನ್ನಡೆಯಾಗಿತ್ತು. ವರದಿ ಸ್ವೀಕಾರ ಮಾಡಿದ್ದು ತಪ್ಪಲ್ಲ. ಆದರೆ, ಅಂಗೀಕಾರ ‌ಮಾಡಬಾರದು ಎಂದು ಶಾಮನೂರು ಶಿವಶಂಕರಪ್ಪ ಆಗ್ರಹಿಸಿದರು.

ಇದನ್ನೂ ಓದಿ: Caste Census report: ಜಾತಿಗಣತಿ ರಿಪೋರ್ಟ್‌‌ ಬಗ್ಗೆ ಕಾಂಗ್ರೆಸ್‌ನಲ್ಲಿ ಟೆನ್ಶನ್‌; ಸಿದ್ದರಾಮಯ್ಯ ಮಾಡಿದ್ದಾರೆ ಮಾಸ್ಟರ್‌ ಪ್ಲ್ಯಾನ್!

ಸಿದ್ದರಾಮಯ್ಯ ನಮ್ಮ ಮಾತಿಗೆಲ್ಲಿ ಮನ್ನಣೆ ಕೊಡ್ತಾರೆ?

ವೈಜ್ಞಾನಿಕವಾಗಿ ಮತ್ತೆ ಸರ್ವೆ ಮಾಡಬೇಕು ಎಂಬುದು ನಮ್ಮ ಸಮುದಾಯದ ಆಗ್ರಹವಾಗಿದೆ. ಸಿಎಂ ಸಿದ್ದರಾಮಯ್ಯ ನಮ್ಮ ಮಾತಿಗೆಲ್ಲ ಎಲ್ಲಿ ಮನ್ನಣೆ ಕೊಡ್ತಾರೆ? ವರದಿ ಕೊಟ್ಟಿದ್ದನ್ನು ಸರ್ಕಾರದವರು ತೆಗೆದುಕೊಂಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.

ಜಾತಿವಾರು ಜನಸಂಖ್ಯೆಯ ವಿವರ

ಇದನ್ನೂ ಓದಿ: Water Scarcity : ಬೆಂಗಳೂರಿನ ನೀರಿನ ಘಟಕಗಳಲ್ಲಿ ಒಬ್ಬರಿಗೆ ಒಂದೇ ಕ್ಯಾನ್‌ ನೀರು!

ವರದಿಯ ಸಾರಾಂಶ ಏನು?

Exit mobile version