Site icon Vistara News

ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲು

siddaramaiah admitted to manipal hospital

ಬೆಂಗಳೂರು: ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಹಿಂದೆ ಪೈಲ್ಸ್‌ ಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಇದೀಗ ಸಾಮಾನ್ಯ ಚೆಕಪ್‌ಗೆ ತೆರಳಿದ್ದಾರೆ.

ಇದರ ಜತೆಗೆ, ಪೂರ್ಣ ದೇಹದ ಆರೋಗ್ಯ ಪರೀಕ್ಷೆಯನ್ನೂ ಮಾಡಿಸಿಕೊಳ್ಳಲಿದ್ದಾರೆ. ಸದ್ಯದಲ್ಲೆ ಚುನಾವಣೆ ಹವಾ ಜೋರಾಗಲಿದ್ದು, ಅನೇಕ ಕಡೆಗಳಲ್ಲಿ ನಿರಂತರ ಪ್ರವಾಸ ನಡೆಸಬೇಕಾಗುತ್ತದೆ.

ಅದಕ್ಕೂ ಮುನ್ನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ, ಆಹಾರ ಪಥ್ಯವನ್ನು ನಿಗದಿಪಡಿಸಿಕೊಳ್ಳಲು ತೆರಳಿದ್ದಾರೆ.

ಶುಕ್ರವಾರ ಸಂಜೆ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Kanaka Jayanti | ಮುಸ್ಲಿಮರನ್ನು ಬೆದರುಗೊಂಬೆ ಆಗಿಟ್ಟುಕೊಂಡು ಆರ್‌ಎಸ್‌ಎಸ್‌ನಿಂದ ದೇಶ ಒಡೆಯುವ ಕೆಲಸ: ಸಿದ್ದರಾಮಯ್ಯ

Exit mobile version