Site icon Vistara News

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Siddaramaiah plan behind accepting Caste Census Report Sunil Kumar reveals reason

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ (Social and Economic Survey) ಜಾತಿ ಗಣತಿ ವರದಿಯನ್ನು (Caste Census report) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತವಾಗಿ ಈಗ ಸ್ವೀಕಾರ ಮಾಡಿದ್ದಾರೆ. ಆದರೆ, ಈ ಮೂಲಕ ಸಿದ್ದರಾಮಯ್ಯ ಅವರು ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ಈ ವರದಿಯ ಸ್ವರೂಪ ಏನೆಂಬುದು ಮೊದಲು ನಿರ್ಧಾರ ಆಗಬೇಕಿದೆ. ಜಾರಿಗೆ ಮುನ್ನ ವಿಸ್ತೃತ ಚರ್ಚೆ ಆಗಬೇಕಿದೆ. ಸಿಎಂಗೆ ಬದ್ಧತೆ ಇದ್ದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ತಕ್ಷಣವೇ ವರದಿಯನ್ನು ಸ್ವೀಕರಿಸಿ ಸದನದಲ್ಲಿ ಮಂಡಿಸಬೇಕಿತ್ತು. ಇಲ್ಲಿ ನಿಮ್ಮ ಉದ್ದೇಶ ಗೊಂದಲವನ್ನು ಜೀವಂತವಾಗಿಡುವುದಷ್ಟೇ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನಿಲ್‌ ಕುಮಾರ್‌ (V Sunil Kumar) ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸುನಿಲ್‌ ಕುಮಾರ್‌, ಸಿಎಂ ಸಿದ್ದರಾಮಯ್ಯ ಪಲಾಯನವಾದ ಮಾಡಿದ್ದಾರೆ. ಈ ಪಲಾಯನವಾದ ಸಾಕು. ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ಸವಾಲು ಹಾಕಿದ್ದಾರೆ.

ಸುನಿಲ್‌ ಕುಮಾರ್‌ ಹೇಳಿದ್ದೇನು?

ಹತ್ತು ವರ್ಷಗಳ ಸುದೀರ್ಘ ವನವಾಸದ ಬಳಿಕ ಹಿಂದುಳಿದ ವರ್ಗಗಳ ಆಯೋಗದಿಂದ ಸಿಎಂ ಸಿದ್ದರಾಮಯ್ಯ ಅವರು ಸ್ವೀಕರಿಸಿರುವ ವರದಿಯ ಸ್ವರೂಪ ಏನೆಂಬುದು‌ ಮೊದಲು‌ ನಿರ್ಧಾರವಾಗಬೇಕಿದೆ. ಇದು ಜಾತಿಗಣತಿಯೋ? ಶೈಕ್ಷಣಿಕ ಸಮೀಕ್ಷೆಯೋ? ಅಥವಾ ಆರ್ಥಿಕ ಸಮೀಕ್ಷೆಯೋ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

150 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿರುವ ರಾಜ್ಯ ಸರ್ಕಾರ ಸಮಾಜದಲ್ಲಿ ಅಂತಿಮವಾಗಿ ಗೊಂದಲವನ್ನು ಸೃಷ್ಟಿ ಮಾಡಿದೆ. ಈ ವರದಿ ಜಾರಿಗೆ ಮುನ್ನ ವಿಸ್ತೃತ ಚರ್ಚೆಯ ಅಗತ್ಯವಿದೆ. ಹೀಗಾಗಿ ಶಾಸನ ಸಭೆಯಲ್ಲಿ ವರದಿಯನ್ನು ಮಂಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಈ ವರದಿಯ ವಿಚಾರದಲ್ಲಿ ದಶಮಾನದ ಗೊಂದಲ ಸೃಷ್ಟಿಸಿದ ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕರಿಸಿ ಕೈ ತೊಳೆದುಕೊಂಡರೆ ಸಾಲುವುದಿಲ್ಲ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಆಶಯಕ್ಕೆ ಆಯೋಗ ಎಷ್ಟರಮಟ್ಟಿಗೆ ಸ್ಪಂದಿಸಿದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಗೊಂದಲಗಳಿಗೆ ಮೊದಲು ತೆರೆ ಬೀಳಲಿ.

ಗೊಂದಲವನ್ನು ಜೀವಂತವಾಗಿಡುವ ಉದ್ದೇಶ

ಸಿಎಂ ಸಿದ್ದರಾಮಯ್ಯನವರೇ ನಿಮಗೆ ಬದ್ಧತೆ ಇದ್ದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ತಕ್ಷಣವೇ ವರದಿಯನ್ನು ಸ್ವೀಕರಿಸಿ ಸದನದಲ್ಲಿ ಮಂಡಿಸಬೇಕಿತ್ತು. ಆದರೆ, ನಿಮ್ಮ ಉದ್ದೇಶ ಗೊಂದಲವನ್ನು ಜೀವಂತವಾಗಿಡುವುದಷ್ಟೇ ಆಗಿದೆ. ಹೀಗಾಗಿ ಅಧಿವೇಶನದ ಕೊನೆಯ ದಿನ ವರದಿ ಸ್ವೀಕರಿಸಿದ್ದೀರಿ. ಈ ಪಲಾಯನವಾದ ಸಾಕು. ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಿರಿ” ಎಂದು ಸುನಿಲ್‌ ಕುಮಾರ್‌ ಸವಾಲು ಹಾಕಿದ್ದಾರೆ.

ವರದಿ ಪ್ರಕಾರ ಯಾವ ಜಾತಿ, ಧರ್ಮದವರು ಎಷ್ಟಿದ್ದಾರೆ?

ಇದನ್ನೂ ಓದಿ: Sedition case: ರಾಜ್ಯಪಾಲರ ಅಂಗಳಕ್ಕೆ ‘ಪಾಕಿಸ್ತಾನ್‌ ಜಿಂದಾಬಾದ್‌’ ಕದನ; ಸರ್ಕಾರ ವಜಾಕ್ಕೆ ಬಿಜೆಪಿ ಆಗ್ರಹ

ವರದಿಯ ಸಾರಾಂಶ ಏನು?

Exit mobile version