ಬೆಂಗಳೂರು: ಬಿಜೆಪಿಯವರು ಈ ಹಿಂದೆ ಅನೇಕ ಆರೋಪಗಳನ್ನು ಮಾಡಿದ್ದಾರೆ, ಆದರೆ ಯಾವುದಕ್ಕಾದರೂ ಸಾಕ್ಷಿ ಕೊಟ್ಟಿದ್ದಾರೆಯೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ಹೆಸರಿಟ್ಟಿದ್ದು ನಮ್ಮ ಸರ್ಕಾರ. ಕೆಂಪೇಗೌಡರ ದಿನಾಚರಣೆ ಆಚರಣೆ ಮಾಡಿದ್ದು ನಮ್ಮ ಸರ್ಕಾರ.ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಸಹ ಸರ್ಕಾರದಿಂದ ಆಚರಿಸಬೇಕು ಎಂದು ನಾವೇ ನಿರ್ಧಾರ ಮಾಡಿದ್ದು. ಆದರೆ ಈಗ ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು.
ಸುಧಾಕರ್ ವಿರುದ್ದ ಮತ್ತೆ ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ಸುಧಾಕರ್ ತನಿಖೆ ಮಾಡುವ ಮಾತೇ ಆಡುವುದಿಲ್ಲ. ಒಂದಂಕಿ ಲಾಟರಿ ಬಗ್ಗೆ ದೇವೇಗೌಡರು ಪ್ರಸ್ತಾಪ ಮಾಡಿದರು. ನನ್ನ ಮೇಲೆ, ಕೆ.ಜೆ. ಜಾರ್ಜ್ ಮೇಲೆ ಆರೋಪ ಮಾಡಿದರು. ಆಗ ನಾನು ಕೂಡಲೇ ಸಿಬಿಐ ತನಿಖೆಗೆ ಕೊಟ್ಟೆ. ಏನಾದರೂ ದಾಖಲೆ ಕೊಟ್ಟಿದ್ದರಾ ಆಗ? ಡಿ.ಕೆ. ರವಿ ಪ್ರಕರಣ ಸಿಬಿಐಗೆ ಕೊಟ್ಟೆ, ಡಿವೈಎಸ್ಪಿ ಗಣಪತಿ ಕೇಸ್ ಸಿಬಿಐಗೆ ಕೊಟ್ಟೆ. ಏನಾದರೂ ದಾಖಲಾತಿ ಕೊಟ್ಟಿದ್ದರಾ?
ತನಿಖೆ ಮಾಡಿಸಿ ಮೊದಲು, ತನಿಖೆಗೂ ಮೊದಲೇ ದಾಖಲಾತಿ ಕೊಟ್ಟರ? ಶ್ವೇತಪತ್ರ ಅನ್ನೋದು ಒಂದು ಸುಳ್ಳಿನ ಕಂತೆ, ಅದೊಂದು ಹೇಳಿಕೆ ಅಷ್ಟೇ. ಸಮ್ಮಿಶ್ರ ಸರ್ಕಾರದ ಪ್ರಾರಂಭದಲ್ಲೇ ಯಾಕೆ ಹೇಳಲಿಲ್ಲ? ಒಂದು ವರ್ಷ ಇದ್ದರಲ್ಲ ಆಗ ವಿರೋಧ ಯಾಕೆ ಮಾಡಲಿಲ್ಲ ಸಮ್ಮಿಶ್ರ ಸರ್ಕಾರದ ಬಗ್ಗೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : Karnataka Congress : ಡಾ. ಸುಧಾಕರ್ ಒಬ್ಬ ಪೆದ್ದ, ಅವನಿಗೆ ಸಿಎಜಿ ರಿಪೋರ್ಟ್ ಓದೋಕೆ ಬರಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಬಿಜೆಪಿಯವರು ಇವರು ಎಲ್ಲರೂ ಕೂಡ ಭ್ರಷ್ಟಾಚಾರಿಗಳಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಪಾಪ ಅಮಿತ್ ಶಾ ಕೂಡ ಜೈಲಿಗೆ ಹೋದವರು, ಅವರನ್ನು ಕರೆಸಿಕೊಂಡು ಓಟು ಕೇಳಿದರೆ ಆಗುತ್ತದ? ನೂರು ಬಾರಿ ಅಮಿತ್ ಶಾ ಮೋದಿ ಬಂದರೂ ಕೂಡ ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.