ವಿಧಾನಸಭೆ: ಕರ್ನಾಟಕ ರಾಜಕಾರಣದಲ್ಲಿ ನಾನು ಎಂದಿಗೂ ಪ್ರಸ್ತುತನಾಗಿಯೇ ಇರುತ್ತೇನೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತು ಚರ್ಚೆಯ ವೇಳೆ ಸ್ವಾರಸ್ಯಕರ ಮಾತಿನ ನಡುವೆ ಹೀಗೆ ಹೇಳಿದರು.…
ಚರ್ಚೆ ಸಂದರ್ಭದಲ್ಲಿ ಸಿಟಿ ರವಿ ಪದೇ ಪದೇ ನನ್ನ ಹೆಸರು ತೆಗೆದುಕೊಂಡಿದ್ದಾರೆ ಎಂದ ಸಿದ್ದರಾಮಯ್ಯ, ತುಂಬಾ ಧನ್ಯವಾದಗಳು. ಈಗ ಬಿಜೆಪಿಯವರು ಪ್ರತಿಯೊಬ್ಬರೂ ನನ್ನ ಹೆಸರು ತೆಗೆದುಕೊಳ್ತಾರೆ. ಹಾಗಾದ್ರೆ ನಾನು ಅಷ್ಟು ರಿಲವೆಂಟ್(ಪ್ರಸ್ತುತ) ಇದೀನಿ ಅಂತ ಆಯಿತು ಎಂದರು.
ನೀವು ರಿಲವೆಂಟ್ ಇದೀರಾ ಅಂತ ನಾವು ಅಂದುಕೊಂಡಿದ್ದೇವೆ. ನೀವು ಇಲ್ಲ ಅಂದ್ರೆ ಹೇಳಿ ಎಂದು ಸಿ.ಟಿ. ರವಿ ಕಾಲೆಳೆದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಕರ್ನಾಟಕ ಪಾಲಿಟಿಕ್ಸ್‌ನಲ್ಲಿ ನಾನು ಯಾವಾಗಲೂ ರಿಲವೆಂಟ್ ಆಗಿ ಇರ್ತಿನಿ. Irrelevant ಆಗೋಕ್ಕೆ ಸಾಧ್ಯನೇ ಇಲ್ಲ. ಇವತ್ತು relevant, ಈ ಹಿಂದೆ ಸಹ relevant ಆಗಿದ್ದೆ ಈಗ ಸಹ relevant ಆಗಿದ್ದೇನೆ. I am always relevant politician in Karnataka politics ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Assembly Session: ಮಾಂಸಾಹಾರ ತ್ಯಜಿಸಿ ಪ್ಯೂರ್ ವೆಜಿಟೇರಿಯನ್ ಆದ ಸಿದ್ದರಾಮಯ್ಯ: ಮಾಜಿ ಸಿಎಂ ಹೇಳಿದ ಕಾರಣ ಏನು?
ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣಕ್ಕೆ ಬನ್ನಿ ಎಂದು ಮಧುಸ್ವಾಮಿ ಕರೆದಿದ್ದಾರೆ. ಮಧುಸ್ವಾಮಿ ಬಗ್ಗೆ ನನಗೆ ಗೌರವವಿದೆ. ಬ್ಯಾಡ್ ಕೇಸ್ ಗುಡ್ ಲಾಯರ್.
ನಾನು ವಕೀಲನಾಗಿದ್ದಾಗ ಒಬ್ಬರು ಸಿನಿಯರ್ ಇದ್ರು. ಯಾವುದೇ ಬ್ಯಾಡ್ ಕೇಸ್ ಬಂದ್ರು ಅವರ ಬಳಿ ಕಳಿಸ್ತಿದ್ರು. ಒಂದು ಇಪ್ಪತೈದು ಮಧ್ಯಂತರ ಅರ್ಜಿಗಳು ಹಾಕ್ತಿದ್ರು. ಜಡ್ಜ್ ವಾದ ಕೇಳಿದ ನಂತರವ ತೀರ್ಪು ಕೊಡಬೇಕು. ಇದು ಮುಗಿಯುವ ಹೊತ್ತಿಗೆ 15 ರಿಂದ 20 ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು. ಅರ್ಜಿ ಹಾಕಿದವನು ಸತ್ತ, ಮಕ್ಕಳು ಸತ್ರು, ಮೊಮ್ಮಕ್ಕಳ ಕಾಲಕ್ಕೆ ತೀರ್ಪು ಬಂತು. ಹಾಗಾಗಿ ಗೆದ್ದವನು ಸೋತ – ಸೋತವನು ಸತ್ತ ಎಂದು ಹೇಳ್ತಿದ್ವಿ ಎಂದು ತಮ್ಮ ವಕೀಲಿಕೆ ದಿನಗಳನ್ನು ಸಿದ್ದರಾಮಯ್ಯ ನೆನೆದರು.