ಅಮೇಥಿ: ಒಂದು ಕಾಲದಲ್ಲಿ ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಅಮೇಥಿ(Amethi)ಯಲ್ಲಿ ಸುಮಾರು 25 ವರ್ಷಗಳ ಬಳಿಕ ಮೊದಲ ಬಾರಿಗೆ ಗಾಂಧಿ ಕುಟುಂಬದ ಹೊರತಾದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕಳೆದ ಬಾರಿ ಈ ಕ್ಷೇತ್ರದಿಂದು ಸೋಲುಂಡ ಬಳಿಕ ರಿಸ್ಕ್ ತೆಗೆದುಕೊಳ್ಳಲು ಒಪ್ಪದ ರಾಹುಲ್ ಗಾಂಧಿ(Rahul Gandhi) ಅಮೇಥಿ ಬಿಟ್ಟು ರಾಯ್ ಬರೇಲಿ(Rae Bareli)ಯಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯಿಂದ ಸೇರಿದಂತೆ ಅನೇಕ ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಅಮೇಥಿಯಿಂದ ಮೂರನೇ ಬಾರಿ ಕಣಕ್ಕಿಳಿದಿರುವ ಸ್ಮೃತಿ ಇರಾನಿ(Smirthi Irani) ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಮೇಥಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈಗಾಗಲೇ ತನ್ನ ಸೋಲನ್ನು ಒಪ್ಪಿಕೊಂಡಿದೆ. ಗಾಂಧಿ ಕುಟುಂಬದ ಯಾರೊಬ್ಬರೂ ಅಮೇಥಿಯಿಂದ ಸ್ಪರ್ಧಿಸಲು ಮುಂದಾಗುತ್ತಿಲ್ಲ ಅಂದರೆ ಕಾಂಗ್ರೆಸ್‌ಗೆ ತನ್ನ ಸೋಲು ಖಚಿತ ಎಂಬುದು ಮನವರಿಕೆ ಆಗಿದೆ ಎಂದು ಕುಟುಕಿದರು. ಕಳೆದ ಬಾರಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ ಅಮೇಥಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು.
ಮತ್ತೊಂದೆಡೆ ರಾಹುಲ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕೂಡ ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿ ಅಮೇಥಿ ಬಿಟ್ಟು ರಾಯ್ಬರೇಲಿಗೆ ಓಡಿದ್ದಾರೆ. ಭಯ ಪಡಬೇಡಿ, ಓಡಬೇಡಿʼʼ ಎಂದು ತಮಾಷೆ ಮಾಡಿದ್ದಾರೆ. ವಯನಾಡಿನಲ್ಲಿ ಮತದಾನ ಮುಗಿದ ತಕ್ಷಣ ರಾಹುಲ್ ಗಾಂಧಿ ಬೇರೆ ಕ್ಷೇತ್ರವನ್ನು ಹುಡುಕಲಿದ್ದಾರೆ ಎಂದು ತಾವು ಹಿಂದೆ ಹೇಳಿದ್ದನ್ನು ನೆನಪಿಸಿಕೊಂಡ ಮೋದಿ, ʼʼವಯನಾಡಿನಲ್ಲಿ ರಾಹುಲ್ ಗಾಂಧಿ ಸೋಲುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಮತದಾನ ಮುಗಿದ ತಕ್ಷಣ ಅವರು ಬೇರೆ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದೆ. ಅದು ನಿಜವಾಗಿದೆ. ಅಮೇಥಿಯಲ್ಲಿ ಸೋಲಾಗುತ್ತದೆ ಎನ್ನುವ ಭೀತಿಯಿಂದ ರಾಯ್ ಬರೇಲಿಗೆ ಪಲಾಯನ ಮಾಡಿದ್ದಾರೆ. ಹೆದರಬೇಡಿ, ಓಡಬೇಡಿʼʼ ಎಂದು ಹೇಳಿದ್ದಾರೆ.
ನಿರಂತರವಾಗಿ ಆಯ್ಕೆಯಾಗುತ್ತಿದ್ದ ರಾಯ್ ಬರೇಲಿ ಕ್ಷೇತ್ರವನ್ನು ಬಿಟ್ಟು ರಾಜ್ಯಸಭೆಯತ್ತ ಮುಖ ಮಾಡಿದ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ನಡೆಯನ್ನೂ ಮೋದಿ ಟೀಕಿಸಿದ್ದಾರೆ. ʼʼಕಾಂಗ್ರೆಸ್‌ನ ಹಿರಿಯ ನಾಯಕಿ ಚುನಾವಣೆಯಲ್ಲಿ ಸ್ಪರ್ಧಿಸಲು ಭಯಪಡುತ್ತಾರೆ ಮತ್ತು ಕಣದಿಂದ ಓಡಿ ಹೋಗುತ್ತಾರೆ ಎನ್ನುವ ವಿಚಾರವನ್ನು ನಾನು ಮೊದಲೇ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದೆ. ಅದರಂತೆ ಅವರು (ಸೋನಿಯಾ ಗಾಂಧಿ) ರಾಯ್ ಬರೇಲಿಯಿಂದ ರಾಜ್ಯಸಭೆಗೆ ಪಲಾಯನ ಮಾಡಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ.
ಇದನ್ನೋ ಓದಿ:Narendra Modi: ಅಮೇಥಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ; ಓಡಬೇಡಿ ಎಂದು ವ್ಯಂಗ್ಯವಾಡಿದ ಮೋದಿ
ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ವಿಚಾರ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು. ಕೊನೆಗೂ ಇಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್ ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಹಾಗೂ ಅಮೇಥಿಯಿಂದ ರಾಹುಲ್ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರ ಹರಿದಾಡುತ್ತಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಇತ್ತ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆ ದಿನೇಶ್ ಪ್ರತಾಪ್ ಅವರನ್ನು ಕಣಕ್ಕಿಳಿಸಿದೆ.