Site icon Vistara News

Tax Collection : ಕೇಂದ್ರ – ರಾಜ್ಯ ಸರ್ಕಾರಿ ಸಂಸ್ಥೆಗಳ ಮೇಲೆ ಕಣ್ಣಿಟ್ಟ ರಾಜ್ಯ ಸರ್ಕಾರ; ಬಾಕಿ ತೆರಿಗೆ ವಸೂಲಿಗೆ ಕ್ರಮ

DK Shivakumar about IT raid

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಜಾರಿಗೆ ತಂದಿರುವ ರಾಜ್ಯ ಸರ್ಕಾರ (State Government) ತೆರಿಗೆ ಸಂಗ್ರಹಕ್ಕೆ (Tax collection) ಸಾಕಷ್ಟು ಒತ್ತು ನೀಡುತ್ತಿದೆ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಚೇರಿಯಲ್ಲಿ (Office of the Central and State Governments) ಕಟ್ಟದೆ ಉಳಿಸಿಕೊಂಡಿರುವ ಬಾಕಿ ತೆರಿಗೆಯನ್ನು (Outstanding Tax) ಸಂಗ್ರಹಿಸಲು ಮುಂದಾಗಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಮಾಹಿತಿ ನೀಡಿದ್ದು, ಎಲ್ಲರಿಂದಲೂ ತೆರಿಗೆಯನ್ನು ವಸೂಲಿ ಮಾಡುತ್ತೇವೆ. ಮೊದಲು ಸರ್ಕಾರಿ ಸಂಸ್ಥೆಗಳಿಂದಲೇ ಇದು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಬೆಂಗಳೂರಿನಿಂದ 3000 ಕೋಟಿ ರೂಪಾಯಿ ಮಾತ್ರ ಟ್ಯಾಕ್ಸ್ ಬರುತ್ತಿದೆ. ಇದರಿಂದ ಏನೂ ಮಾಡಲಾಗುವುದಿಲ್ಲ. ನಾವು ಹಳೇ ಬಾಕಿ ಕಟ್ಟುವಂತೆ ಸೂಚಿಸಿದ್ದೇವೆ. ಎಚ್ಎಎಲ್, ಎಚ್ಎಂಟಿ ಸೇರಿದಂತೆ ಎಲ್ಲರೂ ತೆರಿಗೆ ಕಟ್ಟಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Cabinet Meeting : ಇಂದಿನ ಸಂಪುಟ ಸಭೆಯಲ್ಲಿ ಭಕ್ತವತ್ಸಲ ಆಯೋಗದ ವರದಿ ಚರ್ಚೆ; ಹಿಂದುಳಿದ ವರ್ಗಕ್ಕೆ ಸಿಗಲಿದೆಯೇ ಬಲ?

ಎಚ್ಎಎಲ್‌ನಿಂದ 90 ಕೋಟಿ ರೂಪಾಯಿ ತೆರಿಗೆ ಕಟ್ಟಲಾಗಿದೆ. ಕೇಂದ್ರ, ರಾಜ್ಯ ಸರ್ಕಾರದ ಕಚೇರಿಗಳು ತೆರಿಗೆ ಕಟ್ಟಬೇಕು. ಮೊದಲು ಸರ್ಕಾರಿ ಸಂಸ್ಥೆಗಳಿಂದಲೇ ವಸೂಲಿ ಮಾಡುತ್ತೇವೆ. ಕಟ್ಟದಿರುವ ತೆರಿಗೆಯನ್ನು ವಸೂಲಿ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಪಾಟ್‌ ಹೋಲ್ಸ್‌ ಮುಚ್ಚುವ ಕಾರ್ಯ ಶುರು

ಬೆಂಗಳೂರಿನಲ್ಲಿ ಪಾಟ್ ಹೋಲ್ಸ್ (Pot Holes) ಮುಚ್ಚುವ ಕೆಲಸವನ್ನು ಶುರು ಮಾಡಲಾಗಿದೆ. ಸಾರ್ವಜನಿಕರು ಪಾಟ್ ಹೋಲ್ಸ್ ಬಗ್ಗೆ ಮಾಹಿತಿ ನೀಡಬಹುದು. ಕೂಡಲೇ ಅದನ್ನು ಮುಚ್ಚುವ ಕೆಲಸ ಮಾಡುತ್ತೇವೆ. ಇಡೀ ಬೆಂಗಳೂರಿನಲ್ಲಿ ಈ ಕಾರ್ಯವನ್ನು ಮಾಡುವುದು ಕಷ್ಟ. ಆದರೆ, ಪ್ರಮುಖ ರಸ್ತೆಗಳಲ್ಲಿ ಮುಚ್ಚುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಟೆಂಡರ್ ಶೂರ್ ಕಾಮಗಾರಿಗಳು ನಡೆದಿವೆ. ಕೇಬಲ್‌ಗಳು ಇನ್ನು ಮೇಲೆ ಹಾರಾಡುವಂತಿಲ್ಲ. ಅಧಿಕಾರಿಗಳು ಕೇಬಲ್ ಕಟ್ ಮಾಡುತ್ತಾರೆ. ಟೆಂಡರ್ ಶೂರ್ ಕಡೆ ಕೇಬಲ್ ಎಳೆದುಕೊಳ್ಳಬೇಕು. 350 ಕಿ.ಮೀ. ನಾವು ಟೆಂಡರ್ ಶೂರ್ ಮಾಡಿದ್ದೇವೆ. ಇದನ್ನು ಕೇಬಲ್ ಹಾಕಲು ಬಳಕೆ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಟ್ರಾಫಿಕ್ ಇರುವ ಕಡೆ ರಿಪೋರ್ಟ್ ನೀಡಬೇಕು. ಕೆಲವರು ಬೇಸಿಕ್ ಪ್ಲ್ಯಾನ್ ತಂದು ತೋರಿಸಿದ್ದಾರೆ. ಎರಡು ತಿಂಗಳು ಸಮಯಾವಕಾಶ ಕೊಟ್ಟಿದ್ದೇವೆ. ಅವರು ಪ್ಲ್ಯಾನ್ ಕೊಟ್ಟ ಮೇಲೆ ಟೆಂಡರ್ ನೀಡುತ್ತೇವೆ. 190 ಕಿ.ಮೀ ಪ್ರಪೋಸಲ್ ಅನ್ನು ಕೊಟ್ಟಿದ್ದೇವೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರೋಡ್, ಟ್ರಿನಿಟಿ ಸರ್ಕಲ್, ಯಮಲೂರು ಜಂಕ್ಷನ್, ಬನ್ನೇರುಘಟ್ಟ ರೋಡ್, ಮೈಸೂರು ರೋಡ್, ಮಾಗಡಿ ರೋಡ್, ಯಶವಂತಪುರ ಜಂಕ್ಷನ್, ಗೊರಗುಂಟೆ ಪಾಳ್ಯ ಸೇರಿ 190 ಕಿ.ಮೀ. ವರೆಗೆ ಪ್ರಪೋಸಲ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದರ ಬಗ್ಗೆ ಅವರು ಪ್ಲ್ಯಾನ್ ಕೊಡಬೇಕು. ಡಿಸೆಂಬರ್‌ಗೆ ನಾವು ಟೆಂಡರ್ ಕರೆಯುತ್ತೇವೆ. ಟನಲ್ ರೋಡ್ ಮಾಡಲು ನಾಲ್ಕು ಲೈನ್ ಬೇಕೇ ಬೇಕು. ಹಾಗಾಗಿ ಎಲ್ಲವನ್ನೂ ನೋಡಿಕೊಂಡು ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಶೀಘ್ರ ಕಾಮಗಾರಿ ಪೂರ್ಣಕ್ಕೆ ಸೂಚನೆ

ಈಗ ಮಳೆ ನಿಂತಿದೆ. ಮತ್ತೆ ಮಳೆ ಮನ್ಸೂಚನೆ ಇದೆ. ಅನುಮೋದನೆಗೊಂಡ ಕಾಮಗಾರಿಗಳನ್ನು ಮತ್ತು ಅವಶ್ಯಕತೆ ಇರುವ ಕಾಮಗಾರಿಗಳನ್ನು ಮತ್ತೆ ಕಾರ್ಯಾರಂಭ ಮಾಡಬೇಕು. ಇವುಗಳನ್ನು ಮಳೆ ಬರುವ ಒಳಗೆ ಮುಗಿಸಬೇಕೆಂದು ಆದೇಶ ಕೊಟ್ಟಿದ್ದೇನೆ. ಅಮೃತನಗರ ಯೋಜನೆಯಡಿ ಕೆಲಸಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಐದು ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳು ಇವಾಗಿವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಅನುದಾನ, ಬಿಲ್‌ಗಳನ್ನು ಶೇಕಡಾ 50ರಷ್ಟು ರಿಲೀಸ್ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ನಾನು ತೀರ್ಮಾನ ಮಾಡಿದ್ದೇವೆ. 650 ಕೋಟಿ ರೂಪಾಯಿಯಷ್ಟು ರಿಲೀಸ್ ಆಗಿದೆ. ಇನ್ನೂ 750 ಕೋಟಿ ರೂಪಾಯಿಯಷ್ಟು ಬಿಬಿಎಂಪಿಯಿಂದ ರಿಲೀಸ್ ಮಾಡುತ್ತೇವೆ. 432 ಕೋಟಿ ರೂಪಾಯಿಯನ್ನು ಗುತ್ತಿಗೆದಾರರಿಗೆ ರಿಲೀಸ್ ಮಾಡಿದ್ದೇವೆ. ಎಲ್ಲ ಇಂಜಿನಿಯರ್‌ಗಳು ಕಂಟ್ರಾಕ್ಟರ್‌ಗಳ ಜತೆ ಇದ್ದು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Shivamogga Violence : ಶಿವಮೊಗ್ಗ ಗಲಭೆ ನಡುವೆಯೇ ವಿದೇಶಕ್ಕೆ ಹಾರಿದ ಗೃಹ ಸಚಿವ ಜಿ. ಪರಮೇಶ್ವರ್‌

ಇನ್ನು ಹೊಸ ಬೆಳೆ ಹಾಕಬೇಡಿ, ನೀರು ಬಂದರೆ ನಾವೇ ಹೇಳುತ್ತೇವೆ

ಬೆಂಗಳೂರು ಸೇರಿದಂತೆ ಕೆಲವು ಕಡೆ ನೀರಿನ ಬಳಕೆಗೆ ಕೆಆರ್‌ಎಸ್‌ನಲ್ಲಿ 106 ಟಿಎಂಸಿ ನೀರು ಇರಬೇಕು. ಆದರೆ, 53 ಟಿಎಂಸಿ ನೀರು ಇದೆ. ಈಗ ಒಂದಷ್ಟು ನೀರು ಬಂದಿದೆಯಾದರೂ ಇನ್ನಷ್ಟು ನೀರು ಬೇಕಾಗಿದೆ. ಬೆಳೆದು ನಿಂತ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ಆದರೆ, ಮುಂದೆ ಯಾವುದೇ ಬೆಳೆಯನ್ನು ಹಾಕಬಾರದು ಎಂದು ರೈತರಿಗೆ ಮಾಹಿತಿ ಕೊಟ್ಟಿದ್ದೇವೆ. ಹೆಚ್ಚು ನೀರು ಬಂದರೆ ರೈತರಿಗೆ ಹೇಳುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Exit mobile version