Site icon Vistara News

Nice Road : ನೈಸ್ ಸಂಸ್ಥೆಗೆ ಬಾರಿ ಮುಖಭಂಗ; ಶಿಫಾರಸುಗೊಂಡ ಅಡ್ವೊಕೇಟ್‌ಗಳಿಗೆ ಕೊಕ್‌, ಬೇರೆಯವರಿಗೆ ಮಣೆ

HK Patil infront of Nice road and vidhana soudha

ಬೆಂಗಳೂರು: ರಾಜ್ಯದಲ್ಲಿ ನೈಸ್‌ ರಸ್ತೆ ಯೋಜನೆಗೆ (Nice Project) ಸಂಬಂಧಪಟ್ಟಂತೆ ರಾಜಕೀಯ ಕೆಸರೆರಚಾಟಗಳು ಇತ್ತೀಚೆಗೆ ನಡೆದಿವೆ. ರಾಜ್ಯ ಸರ್ಕಾರ ನೈಸ್‌ ಸಂಸ್ಥೆಯ ಪರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಅವರ ಹೇಳಿಕೆಗೆ ಬಿಜೆಪಿ ಸಹ ಧನಿಗೂಡಿಸಿತ್ತು. ಈ ನಡುವೆ ನೈಸ್ ಸಂಸ್ಥೆಗೆ ಬಾರಿ ಮುಖಭಂಗವಾಗಿದೆ. ನೈಸ್‌ ರಸ್ತೆಗೆ (Nice Road) ಸಂಬಂಧಿಸಿದ ಹಗರಣಗಳ ಸದನ ಸಮಿತಿ ಚರ್ಚೆ ಬೆನ್ನಲ್ಲೇ ನೈಸ್ ಸಂಸ್ಥೆಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ನೈಸ್‌ ವಿರುದ್ಧ, ಸರ್ಕಾರದ ಪರವಾಗಿ ವಾದ ಮಂಡಿಸಲು ಅಡ್ವೊಕೇಟ್‌ಗಳ ನೇಮಕ (Appointment of Advocates) ವಿಚಾರದಲ್ಲಿ ಭಾರಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದ ನೈಸ್‌ಗೆ ಟಕ್ಕರ್‌ ನೀಡಲಾಗಿದ್ದು, ಶಿಫಾರಸು ಮಾಡಲಾಗಿದ್ದ ಹೆಸರುಗಳನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ (Karnataka State Government) ಬೇರೆಯವರನ್ನು ನೇಮಕ ಮಾಡಿದೆ.

ಅಡ್ವೊಕೇಟ್‌ಗಳ ನೇಮಕ ವಿಚಾರದಲ್ಲಿ ನೈಸ್‌ ಸಂಸ್ಥೆ ಸರ್ಕಾರದ ಮಟ್ಟದಲ್ಲಿ ಭಾರಿ ಲಾಬಿ ಮಾಡಿತ್ತು ಎನ್ನಲಾಗಿದೆ. ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳಲ್ಲಿ (Supreme Court and Karnataka High Court) ಈಗಾಗಲೇ ಹಲವು ಕೇಸ್‌ಗಳಿವೆ. ಈ ಕೇಸ್‌ಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಅಡ್ವೊಕೇಟ್‌ಗಳ ನೇಮಕ ಮಾಡಬೇಕಿತ್ತು. ಈ ನೇಮಕದಲ್ಲಿ ತಮ್ಮವರನ್ನೇ ಸರ್ಕಾರಿ ವಕೀಲರಾಗಿ ನಿಯೋಜಿಸಲು ನೈಸ್ ಸಂಸ್ಥೆ ಪ್ಲ್ಯಾನ್‌ ಮಾಡಿತ್ತು. ಇದಕ್ಕಾಗಿ ಲಾಬಿ ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ: Independence Day 2023 : ಆಗಸ್ಟ್‌ 15ರಂದು ಕೆಂಪುಕೋಟೆಗೆ ಆಹ್ವಾನ; ಬಣವಿಕಲ್ಲು ದಂಪತಿ ಸಂತಸ

ನೈಸ್ ಅಕ್ರಮಗಳ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಕುರಿತು ವಾದ ಮಂಡಿಸಲು ತಮ್ಮವರನ್ನು ತರಲು ಪ್ರಯತ್ನ ಮಾಡಿತ್ತು. ಈ ಹಿಂದೆ ನೈಸ್ ಪರವಾಗಿಯೇ ಕೋರ್ಟ್‌ಗಳಲ್ಲಿ ಇಬ್ಬರು ಅಡ್ವೊಕೇಟ್‌ಗಳು ವಾದ ಮಂಡಿಸಿದ್ದರು. ಆಗ ತಮ್ಮ ಪರವಾಗಿ ವಾದ ಮಂಡಿಸಿದ ಅಜಯ್ ಕುಮಾರ್ ಹಾಗೂ ಮುರುಗೇಶ್ ಚರಾಟಿ ಎಂಬ ವಕೀಲರನ್ನು ನೇಮಿಸಲು ಸರ್ಕಾರದ ಮಟ್ಟದಲ್ಲೇ ಲಾಬಿ ನಡೆದಿತ್ತು. ಅಡ್ವೊಕೇಟ್ ಜನರಲ್ ಹಾಗೂ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಅವರಿಂದಲೂ ಈ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.

ನೈಸ್‌ ಪರ ವಾದ ಮಾಡಿದ್ದ ವಕೀಲರು

ಈ ನಡುವೆ ಅಜಯ್ ಕುಮಾರ್ ಹಾಗೂ ಮುರುಗೇಶ್ ಚರಾಟಿ ವಕೀಲರು ಈ ಮೊದಲು ನೈಸ್ ಕಂಪೆನಿ ಪರವಾಗಿ ವಾದ ಮಾಡಿದ್ದರು ಎಂಬ ಅಂಶ ಬಯಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಈ ಇಬ್ಬರು ಹೆಸರುಗಳಿಗೆ ಕೊಕ್ ಕೊಟ್ಟು ಬೇರೆ ಮೂವರು ವಕೀಲರನ್ನು ನೇಮಿಸಿದ್ದಾರೆ.

ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಆಗಿದ್ದ ರವಿ ವರ್ಮ ಕುಮಾರ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್.ಎ ಅಹಮದ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಮಲಾರ್ಹರ್ ರಾವ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: Karnataka Politics : ಬಿ.ಎಲ್.‌ ಸಂತೋಷ್‌ ಭೇಟಿಯಾದ ರಮೇಶ್‌ ಜಾರಕಿಹೊಳಿ; ವಿರೋಧಿಗಳಿಗೆ ಠಕ್ಕರ್

ಈ ಮೂವರು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ BMICP ಕೇಸ್‌ಗಳನ್ನು ವಾದ ಮಾಡಲಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವು ನೈಸ್‌ ಲಾಬಿಗೆ ಕಡಿವಾಣ ಹಾಕಿದಂತಾಗಿದೆ.

Exit mobile version