Site icon Vistara News

CM Siddaramaiah : ಯತೀಂದ್ರರಿಂದ ವರ್ಗಾವಣೆ ಲೂಟಿ; ಕುರುಡು ಮಲೆಯಲ್ಲಿ ಸಿದ್ದರಾಮಯ್ಯ ಪ್ರಮಾಣಕ್ಕೆ ಈಶ್ವರಪ್ಪ ಸವಾಲು

CM Siddaramaiah Yathidra Siddaramaiah and KS Eshwarappa

ಕೋಲಾರ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಒಂದೇ ಒಂದು ಸವಾಲು ಹಾಕುತ್ತೇನೆ. ಬಿಜೆಪಿ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ (BJP corruption) ನಡೆಯುತ್ತಿತ್ತು ಎಂದು ಆರೋಪ ಮಾಡಿದ್ದೀರಲ್ಲವೇ? ಈಗ ನಿಮ್ಮ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವರ್ಗಾವಣೆ ದಂಧೆಯಲ್ಲಿ (Transfer racket) ಲೂಟಿ ಮಾಡುತ್ತಿಲ್ಲವೇ? ಒಂದು ವೇಳೆ ಇಲ್ಲವಾದರೆ ಈ ಕುರುಡು ಮಲೆ ಗಣಪತಿ (Kurudu Male Ganapathi) ಮುಂದೆ ಬಂದು ನೀವು ಪ್ರಮಾಣ ಮಾಡಿ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (KS Eshwarappa) ಆಗ್ರಹಿಸಿದರು.

ರಾಜ್ಯಾದ್ಯಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ನೇತೃತ್ವದಲ್ಲಿ ಬಿಜೆಪಿ ತಂಡದ ಪ್ರವಾಸ ಹಿನ್ನೆಲೆಯಲ್ಲಿ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಗಣಪತಿ ದೇವರ ಎದುರು ಮಾತನಾಡಿದ ಕೆ.ಎಸ್.‌ ಈಶ್ವರಪ್ಪ, ನಾನು ಗಣಪತಿ ಎದುರು ನಿಂತಿದ್ದೇನೆ. ನನಗೂ ಮಕ್ಕಳಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ಮಾಡಿದ ಆರೋಪದ ಬಗ್ಗೆ ಈಗ ಒಬ್ಬ ಮಾಜಿ ಜಡ್ಜ್ ನೇತೃತ್ವದಲ್ಲಿ ಒಂದು ತನಿಖೆ ಮಾಡಲಿ. ವರ್ಗಾವಣೆ ದಂಧೆಯಲ್ಲಿ ನೀವು ನಮ್ಮ ಆಗಿನ ಸರ್ಕಾರದ ಬಗ್ಗೆ ಆರೋಪ ಮಾಡಿದ್ದಿರಿ. ಈಗ ಅದಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುತ್ತಾ ಇದ್ದೀರಿ. ಇದು ನಿಜವಲ್ಲದೆ ಹೋದರೆ ಗಣಪತಿ ನನಗೆ ಏನು ಬೇಕಾದರೂ ಶಾಪ ಕೊಡಲಿ ಎಂದು ಪ್ರತಿಜ್ಞೆ ಮಾಡಿದರು.

ಪ್ರಮಾಣ ಮಾಡಿ ಸತ್ಯ ನಿರೂಪಿಸಿ

ನೀವು ಮತ್ತು ನಿಮ್ಮ ಮಗ ಯತೀಂದ್ರ ವರ್ಗಾವಣೆ ಧಂದೆಯಲ್ಲಿ ಲೂಟಿ ಮಾಡಿಲ್ಲ ಎಂದು ಪ್ರಮಾಣ ಮಾಡಿ ನಿರೂಪಿಸಿ. ಇಪ್ಪತ್ತೈದು ಜನ ಅಧಿಕಾರಿಗಳನ್ನು ನಾನು ಬೇಕಾದರೆ ಕರೆದುಕೊಂಡು ಬರುತ್ತೇನೆ. ವರ್ಗಾವಣೆಗೆ ಅವರ ಬಳಿ ಎಷ್ಟೆಷ್ಟು ಹಣ ವಸೂಲಿ ಮಾಡಿದ್ದೀರಾ ಅಂತ ಅವರು ಹೇಳುತ್ತಾರೆ. ಆ ಅಧಿಕಾರಿಗಳು ಜನರ ಮುಂದೆ ಹೇಳಲು ಆಗಲ್ಲ. ಕಾರಣ ಅವರ ಗೌಪ್ಯತೆ ಕಾಪಾಡಬೇಕು. ನೀವು ಯಾವುದೇ ನ್ಯಾಯಾಧೀಶರನ್ನು ನೇಮಕ ಮಾಡಿ. ಅವರ ಮುಂದೆ ನಿಜ ಹೇಳುತ್ತಾರೆ ಎಂದು ಕೆ.ಎಸ್.‌ ಈಶ್ವರಪ್ಪ ಸವಾಲು ಹಾಕಿದರು.

ಇದನ್ನೂ ಓದಿ: Kalyana Karnataka : ಕಲ್ಯಾಣ ಕರ್ನಾಟಕದ ಶಿಕ್ಷಣಕ್ಕಾಗಿ 750 ಕೋಟಿ ರೂ.: ಸಿಎಂ ಸಿದ್ದರಾಮಯ್ಯ

ಕುರುಡು ಮಲೆ ಗಣೇಶ ಸುಮ್ಮನೆ ಅಲ್ಲ. ಇಲ್ಲಿ ನಾನು ಹೇಳುತ್ತಾ ಇದ್ದೇನೆ ಎಂದಾದರೆ ಸುಮ್ಮನೆಯಂತೂ ಅಲ್ಲ. ಸಿದ್ದರಾಮಯ್ಯ ಅವರಿಗೆ ಇದು ಸುಳ್ಳು ಅಂತ ಅನ್ನಿಸಿದರೆ ಇದೇ ಗಣಪತಿ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಕೆ.ಎಸ್.‌ ಈಶ್ವರಪ್ಪ ಸವಾಲು ಹಾಕಿದರು.

Exit mobile version